ಬಂಟರ ಚಿಣ್ಣರ ಚಿಲಿಪಿಲಿ-3: ಫ್ಯಾಶನ್ ಶೋ, ನೃತ್ಯ ಪ್ರತಿಭಾ ಸ್ಪರ್ಧೆ
Team Udayavani, Feb 8, 2019, 3:10 PM IST
ಮುಂಬಯಿ: ಬಂಟರ ಸಂಘದ ಮುಖವಾಣಿ ಬಂಟರವಾಣಿ ಫೆ.2ರಂದು ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ 3 ವರ್ಷದಿಂದ 15 ವರ್ಷ ವಯೋಮಿತಿಯ ಬಂಟ ಪುಟಾಣಿಗಳಿಗಾಗಿ ಆಯೋಜಿಸಿದ ಬಂಟರವಾಣಿ ಚಿಣ್ಣರ ಚಿಲಿಪಿಲಿ-3 ಫ್ಯಾಶನ್ ಶೋ ಹಾಗೂ ನೃತ್ಯಸ್ಪರ್ಧೆಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಿಕ್ಕಿರಿದು ನೆರೆದ ಬಂಟ ಬಾಂಧವರ ಸಮಕ್ಷಮದಲ್ಲಿ 3ರಿಂದ 6 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶ್ರೋನಕ್ ಅಶೋಕ್ ಶೆಟ್ಟಿ ಬಂಟ ಚಿಣ್ಮಣಿಯಾಗಿ ಆಯ್ಕೆಯಾದರೆ, ಬಾಲಕಿಯರ ವಿಭಾಗದಲ್ಲಿ ಸಾನ್ವಿಕಾ ಶೆಟ್ಟಿ ಬಂಟ ಕಣ್ಮಣಿಯಾಗಿ ವಜ್ರದ ಮುಕುಟವನ್ನು ಮುಡಿಗೇರಿಸಿಕೊಂಡರು.
6 ವರ್ಷದಿಂದ 10 ವರ್ಷ ವಯೋಮಿತಿಯ ಬಂಟ ಮುದ್ದು ರಾಜನಾಗಿ ಸಾತ್ವಿಕ್ ಸರ್ವೇಶ್ ಹೆಗ್ಡೆ ಆಯ್ಕೆಯಾದರು. ಬಂಟ ಮುದ್ದು ರಾಣಿಯಾಗಿ ದೃತಿ ಚಂದ್ರಹಾಸ್ ಶೆಟ್ಟಿ ಆಯ್ಕೆಯಾದರು.
11 ವರ್ಷದಿಂದ 15ರ ವಯೋಮಿತಿಯಲ್ಲಿ ಬಂಟ ಯುವರಾಜನಾಗಿ ಸುಹಾನ್ ಆನಂದ ಶೆಟ್ಟಿ ಆಯ್ಕೆಗೊಂಡರೆ, ಬಂಟ ಯುವರಾಣಿಯಾಗಿ ರಶಿತಾ ರಾಜೇಶ್ ಶೆಟ್ಟಿ ಆಯ್ಕೆಯಾದರು.
ಬಂಟರ ಚಿಣ್ಣರ ಚಿಲಿಪಿಲಿ ಫ್ಯಾಶನ್ ಶೋ ಪ್ರತಿಭಾ ಸ್ಪರ್ಧೆಯಲ್ಲಿ ಭಾಗವಹಿಸಿ ಈ ವರ್ಷ ವಿಜೇತರಾದ ಇತರ ಬಂಟ ಚಿಣ್ಣರ ಪೈಕಿ 6 ವರ್ಷದಿಂದ 10 ವರ್ಷ ವಯೋಮಿತಿಯ ಬಂಟ ಮುದ್ದು ರಾಜನಾಗಿ ತನಯ್ ಪ್ರವೀಣ್ ಶೆಟ್ಟಿ ದ್ವಿತೀಯ ಸ್ಥಾನವನ್ನು ಪಡೆದರೆ, ತೃತೀಯ ಸ್ಥಾನವನ್ನು ದಕ್Ò ಮನೋಜ್ ಶೆಟ್ಟಿ ಪಡೆದರು. ಅದೇ, ಬಂಟ ಮುದ್ದು ರಾಣಿಯಾಗಿ ದ್ವಿತೀಯ ಸ್ಥಾನವನ್ನು ಸಾನ್ವಿ ಭಾಗ್ಯಪ್ರಸಾದ್ ಶೆಟ್ಟಿ ಹಾಗೂ ತೃತೀಯ ಸ್ಥಾನವನ್ನು ಆಶಾR ಸಂತೋಷ್ ಶೆಟ್ಟಿ ಪಡೆದರು.
11 ವರ್ಷದಿಂದ 15ರ ವಯೋ ಮಿತಿಯಲ್ಲಿ ಬಂಟ ಯುವರಾಜನಾಗಿ ದ್ವಿತೀಯ ಸ್ಥಾನಕ್ಕೆ ರಿಷಭ್ ನಾಗೇಶ್ ಶೆಟ್ಟಿ ಆಯ್ಕೆಯಾದರೆ, ತೃತೀಯ ಸ್ಥಾನಕ್ಕೆ ಶ್ರಿಯಾನ್ ಆನಂದ್ ಶೆಟ್ಟಿ ಆಯ್ಕೆಯಾದರು. ಬಾಲಕಿಯರ ವಿಭಾಗದಲ್ಲಿ ಬಂಟ ಯುವರಾಣಿಯಾಗಿ ದ್ವಿತೀಯ ಸ್ಥಾನವನ್ನು ಯಾಶ್ವಿ ಲಕ್ಷ್ಮಣ್ ಶೆಟ್ಟಿ ಮತ್ತು ತೃತೀಯ ಸ್ಥಾನವನ್ನು ಮನಿಷಾ ಸದಾಶಿವ ಶೆಟ್ಟಿ ಪಡೆದರು.
ಮೆಚ್ಚುಗೆ ಪಡೆದ ಇತರ ಆಯ್ಕೆಗಳು
ಬಂಟ ಮುದ್ದು ಮುಖ: ಪ್ರಯಾಗ್ ಪ್ರದೀಪ್ ಶೆಟ್ಟಿ (ಬಾಲಕ), ಆಧ್ಯಾ ನಾಯಕ್(ಬಾಲಕಿ), ಬಂಟ ಮುದ್ದು ಮಾತು: ಧನ್ವೀಶ್ ಶಿವಪ್ರಸಾದ್ ಆಳ್ವ (ಬಾಲಕ), ನಿತಿಕಾ ಜಯಂತ್ ಶೆಟ್ಟಿ (ಬಾಲಕಿ), ಬಂಟ ಮುದ್ದು ನಡಿಗೆ: ತನೀಶ್ ಭೋಜ ಶೆಟ್ಟಿ (ಬಾಲಕ), ಮಾನ್ಯ ಸುರೇಶ್ ಶೆಟ್ಟಿ (ಬಾಲಕಿ), ಬಂಟ ಮುದ್ದು ಉಡುಗೆ: ಅರ್ಪಿತ್ ಮೋಹನ್ ಶೆಟ್ಟಿ (ಬಾಲಕ), ನಿಷ್ಠಾ ಮಾಧವ್ ಶೆಟ್ಟಿ (ಬಾಲಕಿ),
ಪ್ರಿಯ ಬಂಟ ಮುದ್ದು ರಾಜ: ವಿಹಾನ್ ಸುರೇಶ್ ಶೆಟ್ಟಿ , ಪ್ರಿಯ ಬಂಟ ಮುದ್ದು ರಾಣಿ: ರುಚಿಕಾ ಶೆಟ್ಟಿ, ಬಂಟ ರಾಜ ಮುಖ: ದಿಪೀಶ್ ದಿನೇಶ್ ಶೆಟ್ಟಿ, ಬಂಟ ರಾಣಿ ಮುಖ: ನಿಧಿ ಸಂಜೀವ್ ಶೆಟ್ಟಿ, ಬಂಟ ರಾಜ ಮಾತು: ಅಕ್ಷತ್ ಆರ್. ರೈ, ಬಂಟ ರಾಣಿ ಮಾತು: ಅಧಿತಿ, ಬಂಟ ರಾಜ ನಡಿಗೆ: ರಾಶ್ವಿಲ್ ರಾಘು ಶೆಟ್ಟಿ, ಬಂಟ ರಾಣಿ ನಡಿಗೆ: ಸಿದ್ಧಿಕಾ ಶೆಟ್ಟಿ, ಬಂಟ ರಾಜ ಉಡುಗೆ: ಲಕ್Ò ಸುರೇಶ್ ಶೆಟ್ಟಿ, ಬಂಟ ರಾಣಿ ಉಡುಗೆ: ಅದಿತಿ, ಪ್ರಿಯ ಬಂಟ ಯುವರಾಜ: ನಿಖೀಲ್ ಜಯಕರ ಶೆಟ್ಟಿ, ಪ್ರಿಯ ಬಂಟ ಯುವರಾಣಿ: ಶ್ರಾವ್ಯಾ ಶ್ರೀಧರ್ ಶೆಟ್ಟಿ, ಅಪರೂಪದ ಚಿಣ್ಮಣಿ: ನಿಹಾನ್ ನಯನ್ ಶೆಟ್ಟಿ, ಅಪರಂಜಿ ಕಣ್ಮಣಿ: ಸವಿಶಾ ಶೆಟ್ಟಿ.
ನೃತ್ಯ ಸ್ಪರ್ಧೆಯಲ್ಲಿ ಪ್ರಥಮ: ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿ, ದ್ವಿತೀಯ: ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ, ತೃತೀಯ: ಥಾಣೆ ಬಂಟ್ಸ್ ಅಸೋಸಿಯೇಶನ್.
ಸ್ಪರ್ಧೆಯ ತೀರ್ಪುಗಾರರಾಗಿ ಮೀನಾಕ್ಷಿ ಶ್ರೀಯಾನ್, ಅಶೋಕ್ ಕರ್ಕೇರ,ಕಾಜಲ್ ಕುಂದರ್, ದ್ರಿಶ್ಯಾ ಶೆಟ್ಟಿ ಸಹಕರಿಸಿದರು. ಆಡಿಟ್ ಕಮಿಟಿಯ ಕಾರ್ಯದರ್ಶಿ ಸಿಎ ಐ.ಆರ್. ಶೆಟ್ಟಿ ಮೇಲ್ವಿಚಾರಣೆ ವಹಿಸಿದರು. ನಿರೂಪಕರಾಗಿ ಅಶೋಕ್ ಪಕ್ಕಳ, ಶೀತಲ್ ದಿವಾಕರ್ ಶೆಟ್ಟಿ ಇಂದ್ರಾಳಿ, ಶೈಲಿ ಶೆಟ್ಟಿ ಸಹಕರಿಸಿದರು. ಕೋರಿಯೋಗ್ರಾಫರ್ ಆಗಿ ಸಂದೀಪ್ ಶೆಟ್ಟಿ ನೇತೃತ್ವದಲ್ಲಿ ಹಾಗೂ ಅವರ ತಂಡದ ಶ್ಯಾಲಿ ಶೆಟ್ಟಿ, ತೇಜಸ್ ಶೆಟ್ಟಿ, ಶ್ರೇಯಾ ಶೆಟ್ಟಿ ಮತ್ತು ಅಕ್ಷತ್ ಶೆಟ್ಟಿ ಸಹಕರಿಸಿದರು.ಸಂಘದ ಮಹಿಳಾ ವಿಭಾಗ ಹಾಗೂ ಯುವ ವಿಭಾಗ ದವರು ಪರಿಶ್ರಮಪಟ್ಟರು.
ಚಿತ್ರ-ವರದಿ:ಪ್ರೇಮನಾಥ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.