ವಿದ್ಯಾಲಯ ಸಂಸ್ಕಾರ ರೂಪಿಸುವ ಕೇಂದ್ರವಾಗಲಿ: ಡಾ|ಪ್ರಭಾಕರ ರೈ
Team Udayavani, Feb 9, 2019, 1:15 AM IST
ಉಪ್ಪಳ: ಜಿಲ್ಲಾ ಬಂಟರ ಸಂಘದ ಆಶ್ರಯದಲ್ಲಿ ಉಪ್ಪಳದಲ್ಲಿ ನಡೆಸಲಾಗುತ್ತಿರುವ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಂಗೀಕೃತ ಶಾಲೆಯಾದ ಶ್ರೀ ರಾಮಕೃಷ್ಣ ವಿದ್ಯಾಲಯದ 29ನೇ ವರ್ಧಂತ್ಯುತ್ಸವ ಶಾಲಾ ಪರಿಸರದಲ್ಲಿ ಜರಗಿತು.
ಚಾಲನೆ ನೀಡಿ ಮಾತನಾಡಿದ ಮೀಂಜ ಸರಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಪ್ರಭಾಕರ ರೈ ಅವರು ಶಿಕ್ಷಣದ ಜತೆಗೆ ಸಂಸ್ಕಾರಗಳನ್ನು ರೂಪಿಸುವ ಕೇಂದ್ರಗಳಾಗಿ ವಿದ್ಯಾಲಯಗಳು ಬದಲಾಗಬೇಕು. ಮಕ್ಕಳಲ್ಲಿ ಅಶಿಸ್ತು ಬೆಳೆಯಲು ಭಾರತೀಯ ಸಂಸ್ಕೃತಿಯ ಅಧ್ಯಯನದಲ್ಲಿ ಉಂಟಾಗಿರುವ ಕೊರತೆ ಕಾರಣವೆಂದು ಅವರು ಹೇಳಿದರು.
ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ನ್ಯಾಯವಾದಿ ಶೇಕ್ ಅಹಮ್ಮದ್ ಹನೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಾಲಾಡಳಿತ ಸಮಿತಿ ಕಾರ್ಯದರ್ಶಿ ನ್ಯಾಯವಾದಿದಾಮೋದರ ಶೆಟ್ಟಿ, ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಸದಾಶಿವ ರೈ ಬೆಳ್ಳಿಪ್ಪಾಡಿ, ಶಾಲಾಡಳಿತ ಸಮಿತಿ ಸದಸ್ಯರಾದ ಕೆ.ಸುಬ್ಬಣ್ಣ ಶೆಟ್ಟಿ, ಅರವಿಂದಾಕ್ಷ ಭಂಡಾರಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಕಸ್ತೂರಿ ವರದಿ ಮಂಡಿಸಿದರು. ಪಿಟಿಎ ಅಧ್ಯಕ್ಷ ದಿನೇಶ್ ಭಂಡಾರಿ, ಮಾತೃ ಸಂಘದ ಅಧ್ಯಕ್ಷೆ ಖೆರುನ್ನೀಸಾ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ರಿಗೆ ಮುಖ್ಯ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಬಳಿಕ ಮನೋರಂಜನಾ ಕಾರ್ಯಕ್ರಮಗಳು ಜರಗಿತು. ಶಿಕ್ಷಕಿ ಹಿತಾಕ್ಷಿ ಸ್ವಾಗತಿಸಿದರು. ಫೈರೂಶ ಅವರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.