ಅತ್ಯಪೂರ್ವ ವಿಶ್ವಜಿತ್ ಅತಿರಾತ್ರ ಸೋಮಯಾಗ
Team Udayavani, Feb 9, 2019, 12:45 AM IST
ಕುಂಬಳೆ: ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಅತ್ಯ ಪೂರ್ವ ವಿಶ್ವಜಿತ್ ಅತಿರಾತ್ರ ಸೋಮಯಾಗ ಮತ್ತು ವೇದಮಾತೆ ಶ್ರೀ ಗಾಯತ್ರೀ ದೇವಿಯ ಹಾಗೂ ಸದ್ಗುರು ಶ್ರೀ ನಿತ್ಯಾನಂದ ಗುರುಗಳ ಪುನಃಪ್ರತಿಷ್ಠಾ ಅಷ್ಟಬಂಧ ಸಾನ್ನಿಧ್ಯ ಕಲಶಾಭಿಷೇಕವು ಫೆ. 18ರಿಂದ 24ರ ತನಕ ಜರಗಲಿರುವುದು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಾಣಿಶ್ರೀಗಳು ಮತ್ತು ಕೊಂಡೆವೂರು ಶ್ರೀಗಳು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಂಗವಾಗಿ ಫೆ. 17ರಂದು ಬೆಳಗ್ಗೆ 7.30ರಿಂದ ಸಾಮೂಹಿಕ ಪ್ರಾರ್ಥನೆ, ವೈದಿಕ ಕಾರ್ಯಕ್ರಮ, 9 ಗಂಟೆಗೆ ಅಗ್ನಿಹೋತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಅಪರಾಹ್ನ 3 ಗಂಟೆಗೆ ಮಂಗಳೂರು ಕದ್ರಿ ಶ್ರೀ ಮಂಜುನಾಥೇಶ್ವರ ಮತ್ತು ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಗಳಿಂದ ಹೊರೆಕಾಣಿಕೆ ಮೆರವಣಿಗೆ, 5 ಗಂಟೆಗೆ ಉಗ್ರಾಣ ಮುಹೂರ್ತ ನಡೆಯಲಿರುವುದು.
ಫೆ. 18ರಂದು ಬೆಳಗ್ಗೆ 7.30ಕ್ಕೆ ಋತ್ವಿಜರ ಆಗಮನ, ಪೂರ್ಣಕುಂಭ ಸ್ವಾಗತ, ಬಳಿಕ ಶ್ರೀ ಗಾಯಿತ್ರೀದೇವಿ ಸನ್ನಿಧಿಯಲ್ಲಿ ವೈದಿಕ ಕಾರ್ಯಕ್ರಮ, ಮಧ್ಯಾಹ್ನ ಪ್ರಸನ್ನಪೂಜೆ, ಅನ್ನ ಸಂತರ್ಪಣೆ,ಸಂಜೆ 4ರಿಂದ ಶ್ರೀ ಗಾಯತ್ರಿ ಸಭಾ ಮಂಟಪದಲ್ಲಿ ಸಮುದಾಯಗಳ ಪ್ರಮುಖರಿಗೆ ಗೌರವಾರ್ಪಣೆ, 5ರಿಂದ ಧರ್ಮಸಂದೇಶ, 5.30ರಿಂದ ವೈದಿಕ ಕಾರ್ಯಕ್ರಮಗಳು.
ಫೆ. 19ರಂದು ಬೆಳಗ್ಗೆ ಶ್ರೀ ಗಾಯತ್ರೀ ದೇವಿ ಸನ್ನಿಧಾನದಲ್ಲಿ ವೈದಿಕ ಕಾರ್ಯಕ್ರಮಗಳು. 10 ಗಂಟೆಗೆ ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ, 10.30ಕ್ಕೆ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ, ಮಧ್ಯಾಹ್ನ 12.30ಕ್ಕೆ ಪ್ರಸನ್ನಪೂಜೆ, ಅನ್ನಸಂತರ್ಪಣೆ, ಸಂಜೆ 5 ರಿಂದ ದುರ್ಗಾನಮಸ್ಕಾರಪೂಜೆ,ಯಾಗ ಶಾಲೆಯಲ್ಲಿ ಬೆಳಗ್ಗೆ 7.30ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು. ರಾತ್ರಿ 7.30ರಿಂದ ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ಧಾರ್ಮಿಕ ಸಭೆ ಜರಗಲಿರುವುದು.
ಫೆ.20 ರಂದು ಬೆಳಗ್ಗೆ 5ರಿಂದ 8ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳು,10 ಗಂಟೆಗೆ ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ, 10.30ರಿಂದ ಒಡಿಯೂರು ಶ್ರೀ ಗುರುದೇವಾನಂದ ಮತ್ತು ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ, ಮಧ್ಯಾಹ್ನ 12.30ಕ್ಕೆ ಪ್ರಸನ್ನಪೂಜೆ, ಅನ್ನ ಸಂತರ್ಪಣೆ, ಸಂಜೆ 4ರಿಂದ ವೈದಿಕ ಕಾರ್ಯ ಕ್ರಮಗಳು,ಯಾಗಶಾಲೆಯಲ್ಲಿ ಸೂರ್ಯೋದಯದಿಂದ ಅಪರಾಹ್ನದ ತನಕ ವೈದಿಕ ಕಾರ್ಯಕ್ರಮಗಳು, ರಾತ್ರಿ 7.30 ರಿಂದ ಶ್ರೀ ಗಾಯತ್ರಿ ಸಭಾ ಮಂಟಪದಲ್ಲಿ ಧಾರ್ಮಿಕ ಸಭೆ ಜರಗಲಿರುವುದು.
ಫೆ. 21ರಂದು ಬೆಳಗ್ಗೆ 5ರಿಂದ ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ವೈದಿಕ ಕಾರ್ಯಕ್ರಮಗಳ ಬಳಿಕ 7.50ಕ್ಕೆ ಪುನ:ಪ್ರತಿಷ್ಠಾ ಅಷ್ಟಬಂಧ, ತತ್ವಹೋಮ, 10 ಗಂಟೆಗೆ ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ, 10.30ಕ್ಕೆ ಶ್ರೀ ಬಲೊÂàಟ್ಟು ಶ್ರೀ ವಿಖ್ಯಾತಾನಂದ ಮತ್ತು ಬಾಳೆಕೋಡಿ ಶ್ರೀ ಶಶಿಕಾಂತಮಣಿ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ, ಮಧ್ಯಾಹ್ನ 12.30ಕ್ಕೆ ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ಸಂಜೆ 5ರಿಂದ 108 ಕಲಶಾಧಿವಾಸ, ಅಧಿವಾಸ ಹೋಮ, ದುರ್ಗಾ ನಮಸ್ಕಾರಪೂಜೆ, ಯಾಗ ಶಾಲೆಯಲ್ಲಿ ಬೆಳಗ್ಗೆ 9ರಿಂದ ವೈದಿಕ ಕಾರ್ಯಕ್ರಮಗಳು,ರಾತ್ರಿ 7.30 ರಿಂದ ಶ್ರೀ ಗಾಯತ್ರಿ ಸಭಾ ಮಂಟಪದಲ್ಲಿ ಧಾರ್ಮಿಕ ಸಭೆ ಜರಗಲಿರುವುದು.
ಫೆ. 22ರಂದು ಬೆಳಗ್ಗೆ 5ರಿಂದ ಶ್ರೀ ಗಾಯತ್ರಿ ದೇವಿ ಸನ್ನಿಧಾನದಲ್ಲಿ ವೈದಿಕ ಕಾರ್ಯಕ್ರಮ, 7.48ಕ್ಕೆ ಸಾನ್ನಿಧ್ಯ ಕಲಶಾಭಿÐಕ, 10 ಗಂಟೆಗೆ ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ, 10.30ಕ್ಕೆ ಗುರುಪುರ ಶ್ರೀ ರಾಜ ಶೇಖರಾನಂದ ಮತ್ತು ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ, ಮಧ್ಯಾಹ್ನ 12.30ಕ್ಕೆ ಪ್ರಸನ್ನ ಪೂಜೆ, ಸಂಜೆ 5ರಿಂದ ದುರ್ಗಾ ನಮಸ್ಕಾರ ಪೂಜೆ, ರಂಗಪೂಜೆ, ಯಾಗ ಶಾಲೆಯಲ್ಲಿ ಸೂರ್ಯೋದಯಕ್ಕೆ ವೈದಿಕ ಕಾರ್ಯಕ್ರಮಗಳು, ರಾತ್ರಿ 7.30 ರಿಂದ ಶ್ರೀ ಗಾಯತ್ರಿ ಸಭಾ ಮಂಟಪದಲ್ಲಿ ಧಾರ್ಮಿಕ ಸಭೆ ಜರಗಲಿದೆ.
ಫೆ. 23ರಂದು ಮುಂಜಾನೆ 4ರಿಂದ ಯಾಗಶಾಲೆ ಯಲ್ಲಿ ಸೂರ್ಯೋದಯಕ್ಕೆ ವೈದಿಕ ಕಾರ್ಯಕ್ರಮಗಳು, ರಾತ್ರಿ ಪರ್ಯಾಯ, ಬೆಳಗ್ಗೆ 10 ಗಂಟೆಗೆ ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ, 10.30ಕ್ಕೆ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಮತ್ತು ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ, ಮಧ್ಯಾಹ್ನ 12.30ಕ್ಕೆ ಪ್ರಸನ್ನಪೂಜೆ ನಡೆಯಲಿದೆ.
ಫೆ. 24ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ಅಪರಾಹ್ನ 2.30 ರಿಂದ ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ಸಮಾರೋಪ ಸಮಾರಂಭ ಧಾರ್ಮಿಕ ಸಭೆ, ಸಂಜೆ 5ರಿಂದ ಯಜ್ಞ ಸಮರ್ಪಣೆ (ಯಜ್ಞ ಶಾಲೆಗೆ ಅಗ್ನಿಸ್ಪರ್ಶ) ಮಂತ್ರಾಶೀರ್ವಾದ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ
Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.