ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ
Team Udayavani, Feb 9, 2019, 10:59 AM IST
ಶಹಾಪುರ: ಇಂಗ್ಲೆಂಡಿನಲ್ಲಿ ಶೇ. 2ರಷ್ಟು ರೈತರು ಕೃಷಿ ಅಳವಡಿಸಿಕೊಂಡಿದ್ದು, ವಿಶೇಷವಾಗಿ ಗೋಧಿ, ಸುವರ್ಣ ಗಡ್ಡೆ ಬೆಳೆ ಜೊತೆಗೆ ರಾಸುಗಳು, ಮತ್ತು ಕೋಳಿ ಸಾಕಾಣಿಕೆಗೆ ಮಹತ್ವ ನೀಡಿದ್ದು, ಹೆಚ್ಚು-ಕಡಿಮೆ ಸಮಗ್ರ ಕೃಷಿ ಪದ್ಧತಿ ವಾತಾವರಣ ಇದೆ ಎಂದು ಡಾ| ಆಲ್ಬರ್ಟ್ ಟೇಲರ್ ತಿಳಿಸಿದರು.
ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳೊಂದಿಗೆ ಕೃಷಿ ಕುರಿತ ಸಂವಾದ ನಡೆಸಿದ ಅವರು, ತಮ್ಮ ದೇಶ ಮತ್ತು ಕೃಷಿ ಚಟುವಟಿಕೆ ಕುರಿತ ಅಭಿಪ್ರಾಯ ಹಂಚಿಕೊಂಡರು.
ನಮ್ಮ 3ನೇ ತಲೆಮಾರಿನ ನಮ್ಮ ಅಜ್ಜಂದಿರು ವ್ಯವಸಾಯ ಮಾಡಿಕೊಂಡಿದ್ದರು. ಅದರಂತೆ ಇಂದಿನ 6ನೇ ತಲೆಮಾರಿನವಾರದ ನಾವುಗಳು ಇಂದಿಗೂ ಲಂಡನ್ನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದೇವೆ. 690 ಎಕರೆ ಫಾರ್ಮನ್ನು ಇಂದಿಗೂ ಉಳಿಸಿಕೊಳ್ಳಲಾಗಿದೆ. ಬೇಸಾಯಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಬಾಡಿಗೆ ಪಡೆದು ವ್ಯವಸಾಯವನ್ನು ಲಾಭದಾಯಕವಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇಂಗ್ಲೆಂಡಿನಲ್ಲಿ ಶೇಕಡಾ 0.2ರಷ್ಟು ರೈತರಿದ್ದು, ಶೇಕಡಾ 3ರಷ್ಟು ಜನರು ಉತ್ಪಾದನೆ ನಂತರದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ದೇಶದ ವಿಕಾಸಕ್ಕೆ ಮತ್ತು ರೈತರ ಆರ್ಥಿಕ ಸದೃಢತೆಗೆ ಕೃಷಿ ವಿದ್ಯಾರ್ಥಿಗಳ ಯೋಗ ದಾನ, ಮಾರ್ಗದರ್ಶನ ಬಹುಮುಖ್ಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾಸ್ಕರರಾವ್ ಮುಡಬೂಳ, ಕೃಷಿ ಮಹಾವಿದ್ಯಾಲಯದ ಡೀನ್ ಡಾ| ಆರ್. ಲೋಕೇಶ, ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ| ಶಿವಾನಂದ ಹೊನ್ನಾಳಿ ಇದ್ದರು. ಕ್ರಿಸ್ಟಲ್ ಮೆಸ್ ಮತ್ತು ಜೂಲಿಯನ್ ಟೇಲರ್, ಭಾಸ್ಕರ್‌ರಾವ ಮುಡಬೂಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Cricket: ಐಪಿಎಲ್ ಹರಾಜಿನಲ್ಲಿ 574 ಕ್ರಿಕೆಟಿಗರು
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Tennis: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ನಿವೃತ್ತಿ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.