ಬಹ್ರೈನ್ ಓಪನ್ ಟಿಟಿ: ಭಾರತಕ್ಕೆ 4 ಪದಕ
Team Udayavani, Feb 10, 2019, 12:30 AM IST
ಮನಾಮಾ (ಬಹ್ರೈನ್): ಭಾರತ ಯುವ ಟೇಬಲ್ ಟೆನಿಸ್ ಆಟಗಾರರು “ಬಹ್ರೈನ್ ಜೂ. ಆ್ಯಂಡ್ ಕ್ಯಾಡೆಟ್ ಓಪನ್’ ಟೇಬಲ್ ಟೆನಿಸ್ ಕೂಟದಲ್ಲಿ ಒಂದು ಚಿನ್ನ ಸಹಿತ 4 ಪದಕ ಜಯಿಸಿದ್ದಾರೆ. 2 ಬೆಳ್ಳಿ ಹಾಗೂ ಒಂದು ಕಂಚು ಭಾರತದ ಪಾಲಾಗಿದೆ.
ಬಾಲಕಿಯರ ಕ್ಯಾಡೆಟ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮೂರೂ ತಂಡಗಳು 3 ಪದಕಗಳನ್ನು ತಮ್ಮದಾಗಿ ಸಿಕೊಂಡಿವೆ. ಭಾರತ “ಎ’ ತಂಡ ಚಿನ್ನ, ಭಾರತ “ಬಿ’ ತಂಡ ಬೆಳ್ಳಿ ಹಾಗೂ ಭಾರತ “ಸಿ’ ತಂಡ ಕಂಚಿನ ಪದಕ ಜಯಿಸಿದೆ. ಮೊದಲ ಸೆಮಿಫೈನಲ್‌ನಲ್ಲಿ ಭಾರತ “ಬಿ’ ತಂಡದಲ್ಲಿದ್ದ ಯಶಸ್ವಿನಿ ಗೋರ್ಪಡೆ ಹಾಗೂ ಕಾವ್ಯಶ್ರೀ ಭಾಸ್ಕರ್ ಜೋಡಿ ಈಜಿಪ್ಟ್ ಜೋಡಿಯನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಭಾರತ “ಎ’ ತಂಡ ಭಾರತ “ಸಿ’ ತಂಡವನ್ನು ಸೋಲಿಸಿತು.
ಫೈನಲ್‌ನಲ್ಲಿ ಭಾರತದ ಎರಡೂ ತಂಡಗಳ ನಡುವೆ ಭಾರೀ ಪೈಪೋಟಿ ನಡೆಯಿತು. ಭಾರತ “ಎ’ ತಂಡದ ಸುಹಾನಾ ಸೈನಿ- ಅನಘಾ ಮಂಜುನಾಥ್ ಭಾರತ “ಬಿ’ ತಂಡವನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಜೂ. ಬಾಲಕಿಯರ ಸ್ಪರ್ಧೆಯ ಫೈನಲ್‌ನಲ್ಲಿ ಮನುಶ್ರೀ ಪಾಟೀಲ್-ಸ್ವಸ್ತಿಕಾ ಘೋಷ್ ಅವರನ್ನೊಳಗೊಂಡ ಭಾರತ ತಂಡ ಚಾಂಪಿಯನ್ ರಶ್ಯ ವಿರುದ್ಧ ಸೋಲನುಭವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.