ಸಾಂಸ್ಕೃತಿಕ ಶ್ರೀಮಂತಿಕೆ ಸವಾಲು ನಿಭಾಯಿಸಲು ಸಹಕಾರಿ’


Team Udayavani, Feb 10, 2019, 1:20 AM IST

09ksde2.jpg

ಮಂಜೇಶ್ವರ: ಗಡಿನಾಡು ಕಾಸರಗೋಡು ಬಹುಸಂಸ್ಕೃತಿಗಳ ತವರು ನೆಲೆಯಾಗಿ ಸಂಗಮ ಕಾಶಿಯಾಗಿ ಗುರುತಿಸಿಕೊಂಡಿದೆ. ಸಾಮಾಜಿಕ, ಸಾಂಸ್ಕೃತಿಕವಾಗಿ ಒಗ್ಗೂಡಿಸುವ, ಸೌಹಾರ್ಧತೆ-ಸಂತಸಗಳ ಸೇತುವಾಗಿ ಜಾನಪದ ಕಲೆ, ಕಲಾವಿದರುಗಳ ಶ್ರಮಗಳು ಅಗಣಿತ ಕೊಡುಗೆಯನ್ನು ಸಾಮಾಜಿಕ ಶ್ರೇಯಸ್ಸಿಗೆ ನೀಡುತ್ತಿದೆ ಎಂದು ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸ ಮಂಜೇಶ್ವರದ ಗಿಳಿವಿಂಡು ಆವರಣದಲ್ಲಿ ಮಂಜೇಶ್ವರ ಸಿರಿಗನ್ನಡ ಅಭಿಮಾನಿಗಳ ಸಂಘ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಗಡಿನಾಡ ಜನಪದ ಕಲಾ ಉತ್ಸವ’ವನ್ನು ತಮಟೆ ಬಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಕಲೆ ಮತ್ತು ಸಾಂಸ್ಕೃತಿಕ ಇತರ ಪ್ರಕಾರಗಳ ಮೂಲಕ ಸಾಮಾಜಿಕ ಜಾಗೃತಿ ಸಾಧ್ಯವಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಕಂಡುಬಂದಿದ್ದ ಅತಿವೃಷ್ಠಿ ಹಾಗೂ ನೆರೆಯಿಂದ ತೀವ್ರ ತತ್ತರಗೊಂಡಿದ್ದಾಗಲೂ ಸವಾಲನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಇಲ್ಲಿಯ ಜಾಗೃತ ಸಮಾಜ ಕೈ ಜೋಡಿಸಿರುವುದು ಏಕತೆಯ ಮನೋಬಲದಿಂದಾಗಿದೆ. ಇಂದಿನ ಸ್ಥಿತ್ಯಂತರದ ಒಟ್ಟು ವ್ಯವಸ್ಥೆಯ ಮಧ್ಯೆ ಮಾನವೀಯತೆ, ಪ್ರೀತಿ

ತುಂಬಿಸುವ ಸಮರೋಪಾದಿಯ ಚಟುವಟಿಕೆಗಳ ಅಗತ್ಯ ಇದೆ ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಆಯೋಜಿಸಲಾದ ಜನಪದ ಕಲೋತ್ಸವವು ಪರಿಣಾಮಕಾರಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ ಗಿಳಿವಿಂಡಿನ ಕಾರ್ಯದರ್ಶಿ ಕೆ.ಆರ್‌.ಜಯಾನಂದ ಅವರು ಗೋವಿಂದ ಪೈ ಗಳು ಮಾಡಿದ ಸಾಧನೆ ಗಳನ್ನು ತಿಳಿಸಿದರು.

ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್‌ ಸಾಲ್ಯಾನ್‌ ಕಾಸರಗೋಡು, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಕಮಲಾಕ್ಷ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು. ಬೆಂಗಳೂರು ಜಾನಪದ ಕಲಾ ತಂಡದ ಕೆ.ನಾಗರಾಜು ಸ್ವಾಗತಿಸಿ, ಶಿವಮ್ಮ ವಂದಿಸಿದರು. ಡಿ.ದೇವರಾಜ್‌ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಿಂತಾಮಣಿಯ ಗಾಯತ್ರಿ ತಂಡದಿಂದ ಸಮೂಹ ಜಾನಪದ ನೃತ್ಯ, ಹೊಸಕೋಟೆಯ ರಶ್ಮಿ ವಿ. ತಂಡದಿಂದ ಸಮೂಹ ಶಾಸ್ತ್ರೀಯ ನೃತ್ಯ, ಬೆಂಗಳೂರಿನ ಸುಜಾತಾ ತಂಡದಿಂದ ಸುಗಮ ಸಂಗೀತ, ಕೆ.ನಾಗರಾಜ್‌ ತಂಡದಿಂದ ಅವ್ವ ಸಾಮಾಜಿಕ ನಾಟಕ,ದೇವರಾಜ್‌ ತಂಡದಿಂದ ರಂಗಗೀತೆಗಳು, ಗೊಂಬೆಯಾಟ ಪ್ರದರ್ಶನ ನಡೆಯಿತು.

ಅಂತರಾಳದ ಪರಿವರ್ತನೆಗೆ 
ರಾಷ್ಟ್ರಕವಿ ಗೋವಿಂದ ಪೈಗಳ ತಾತನವರಾದ ದಿ.ಸಾಹುಕಾರ್‌ ಮಂಜೇಶ್ವರ ನಾರಾಯಣ ಪೈ ಅವರು ಕರಾವಳಿಯಲ್ಲೇ ಮೊತ್ತಮೊದಲ ಬಾರಿಗೆ ಸಹ ಭೋಜನ ಕ್ರಾಂತಿಯನ್ನು 150 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಕ್ರಾಂತಿಯ  ಕಾರ್ಯಕ್ರಮವನ್ನು ಗಿಳಿವಿಂಡು ಹಮ್ಮಿಕೊಳ್ಳಲಿದೆ ಅಂತರಾಳದ ಪರಿವರ್ತನೆಗೆ ಕಾರಣವಾಗುವ ಕಲೆಗಳನ್ನು ಪ್ರೋತ್ಸಾಹಿಸುವ, ಉಳಿಸಿ ಬೆಳೆಸುವ ಕರ್ತವ್ಯದಿಂದ ವಿಮುಖರಾಗುವುದು ವ್ಯಾಪಕ ನಾಶಕ್ಕೆ ಕಾರಣವಾಗುವುದು. 
-ಕೆ. ಆರ್‌.ಜಯಾನಂದ ಳಿವಿಂಡಿನ ಕಾರ್ಯದರ್ಶಿ

 ಬೆಳವಣಿಗೆಗೆ ಪೂರಕ‌
ವೈವಿಧ್ಯಮಯ ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರಸರಿಸುವಿಕೆಯು ಸಮಗ್ರ ಅಭಿವೃದ್ಧಿಯ ಮೈಲುಗಲ್ಲುಗಳಾಗಿ ಬೆಳವಣಿಗೆಗೆ ಪೂರಕ‌ವಾಗುವುದು            
 -ಉಮೇಶ ಸಾಲ್ಯಾನ್‌
 ಕೇರಳ ತುಳು ಅಕಾಡೆಮಿ ಅಧ್ಯಕ್ಷ

ಟಾಪ್ ನ್ಯೂಸ್

IPL 2025: My preference is a team that gives freedom: KL Rahul

IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್‌.ರಾಹುಲ್‌

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ

Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ

ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಶೂಟರ್

Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ

INDvsSA: Arshadeep Singh breaks Bhuvneshwar Kumar’s T20I record

INDvsSA: ಭುವನೇಶ್ವರ್‌ ಕುಮಾರ್‌ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್‌ ಸಿಂಗ್

Ambulance ಇಂಜಿನ್ ಗೆ ಬೆಂಕಿ-ಆಕ್ಸಿಜನ್‌ ಸಿಲಿಂಡರ್‌ ಸ್ಫೋಟ;ಗರ್ಭಿಣಿ ಪ್ರಾಣಾಪಾಯದಿಂದ ಪಾರು!

Ambulance ಇಂಜಿನ್ ಗೆ ಬೆಂಕಿ-ಆಕ್ಸಿಜನ್‌ ಸಿಲಿಂಡರ್‌ ಸ್ಫೋಟ;ಗರ್ಭಿಣಿ ಪ್ರಾಣಾಪಾಯದಿಂದ ಪಾರು!

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

ಹೊಸ ಸೇರ್ಪಡೆ

IPL 2025: My preference is a team that gives freedom: KL Rahul

IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್‌.ರಾಹುಲ್‌

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ

Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ

5

Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.