ಕೊಟ್ಟೂರೇಶ್ವರ ತೇರುಗಡ್ಡೆಗೆ ವಿಶೇಷ ಪೂಜೆ
Team Udayavani, Feb 10, 2019, 8:11 AM IST
ಕೊಟ್ಟೂರು: ನಾಡಿನ ಸುಪ್ರಸಿದ್ಧ ಶ್ರೀಗುರು ಕೊಟ್ಟೂರೇಶ್ವರಸ್ವಾಮಿ ರಥೋತ್ಸವ ಫೆ.28ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ತೇರುಗಡ್ಡೆಯನ್ನು ಹೊರಗೆಳೆಯುವ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಗ್ಗೆ ತೇರುಮನೆಯಿಂದ ತೇರುಗಡ್ಡೆಯನ್ನು ಎಳೆದ್ಯೊಯುವ ಹಿನ್ನೆಲೆಯಲ್ಲಿ ಕ್ರಿಯಾ ಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು, ಧರ್ಮಕರ್ತ ಸಿ.ಎಚ್.ಎಂ.ಗಂಗಾಧರ, ಕಾರ್ಯನಿರ್ವಾಹಣಾಧಿಕಾರಿ ಎಂ.ಎಚ್. ಪ್ರಕಾಶ್‌ರಾವ್, ಕೊಟ್ಟೂರು ಕಟ್ಟೆಮನಿ ದೈವಸ್ಥರು ಹಾಗೂ ಭಕ್ತರು ಪೂಜೆ ಸಲ್ಲಿಸಿದರು.
ನಂತರ ರಥಗಡ್ಡೆಯ ಆಸನದ ಮೇಲೆ ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು, ಹಿರೇಮಠದ ಪೂಜಾ ಬಳಗದವರು ಆಸೀನರಾಗುತ್ತಿದ್ದಂತೆ ಸಂಜೆ 4.30ರ ವೇಳೆಗೆ ಸಾವಿರಾರು ಭಕ್ತರು ಶ್ರೀಗುರು ಕೊಟ್ಟೂರೇಶ್ವರಸ್ವಾಮಿ ಜಯಕಾರದ ಘೋಷ ಕೂಗುತ್ತಾ ತೇರುಗಡ್ಡೆ ಎಳೆದರು. ತೇರುಗಡ್ಡೆ ಉತ್ಸವ ಬೀದಿಗುಂಟ ಸಾಗಿ ತೇರುಬಯಲಿನಲ್ಲಿ ನಿಗದಿಗೊಳಿಸಿದ ಸ್ಥಳದಲ್ಲಿ ಸಂಜೆ 5ಗಂಟೆ ಸುಮಾರಿಗೆ ನಿಲುಗಡೆಗೊಂಡಿತು. ತೇರುಗಡ್ಡೆಯನ್ನು ಅಮೃತ ಅಮಾವಾಸ್ಯೆಯಾದ 5 ದಿನಗಳ ನಂತರ ಹೊರಗೆಳೆಯುವ ವಿಧಿ ವಿಧಾನಗಳ ಪ್ರಕಾರ ಈ ಧಾರ್ಮಿಕ ಕಾರ್ಯ ಶನಿವಾರ ನೆರವೇರಿತು. ದೇವಸ್ಥಾನದ ಧರ್ಮಕರ್ತ ಅಯಗಾರ ಬಳಗದ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.