ತರಕಾರಿ ಕೆಲಸ ದೇವರ ಕೆಲಸ


Team Udayavani, Feb 11, 2019, 12:30 AM IST

vegetable.jpg

ಕಬ್ಬನ್ನು ಬೆಳೆದು ಆದಾಯಕ್ಕಾಗಿ ವರ್ಷದ ತನಕ ಮಿಕ ಮಿಕ ಅಂತ ಕಾಯುವ ಹಾದಿಯನ್ನು ಕೊಪ್ಪಳದ ಚಿಮ್ಮಡ ಗ್ರಾಮದ ಈ ಯುವ ರೈತ ಮಹಾಂತೇಶ ಪಾಂಡಪ್ಪ ಜಾಲಿಕಟ್ಟಿ ಬದಲಾಯಿಸಿಕೊಂಡಿದ್ದಾರೆ. ಇದರ ಬದಲಿಗೆ, ಕಬ್ಬಿನ ಜೊತೆ ತರಕಾರಿ ಬೆಳೆಯುವ ಮೂಲಕ ಕೈ ತುಂಬ ಆದಾಯ ಗಳಿಸುವ ಇನ್ನೊಂದು ಹಾದಿ ತೋರಿಸಿದ್ದಾರೆ. 

ಮಹಾಂತೇಶ್‌ ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ.  10 ಎಕರೆ ಜಮೀನಿದೆ. ಅದರಲ್ಲಿ 10  6ಎಕರೆ ಕಬ್ಬು ಮತ್ತು ಅರಿಷಿಣದಂಥ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ. 4 ಎಕರೆಯಲ್ಲಿ ಮೆಣಸಿನಕಾಯಿ, ಟೊಮೆಟೊ, ಸೌತೆಕಾಯಿ, ಕೊತ್ತಂಬರಿ, ಬದನೆಕಾಯಿ, ಡಬ್ಬ ಮೆಣಸಿನಕಾಯಿ, ಮೆಂತ್ಯ ಪಲ್ಲೆ, ಹೂ ಕೋಸು ಸೇರಿದಂತೆ ವಿವಿಧ ತರಕಾರಿ ಬೆಳೆ ಬೆಳೆದು ಲಾಭದ ದಾರಿ  ಕಂಡುಕೊಂಡಿದ್ದಾರೆ.

ಕಬ್ಬು, ಅರಿಷಿಣದಂಥ ವಾರ್ಷಿಕ ಬೆಳೆ ಬೆಳೆದು ಹಣಕ್ಕಾಗಿ ವರ್ಷವಿಡಿ ಕಾಯುವುದಕ್ಕಿಂತ ಒಂದರಿಂದ ಮೂರು ತಿಂಗಳವರೆಗಿನ ತರಕಾರಿ ಬೆಳೆ ಇವರ ಮಂತ್ಲಿ ಇನ್‌ಕಂ ಆಗಿದೆ. ಇದರಿಂದ ಸಾಗುವಳಿ ಮತ್ತು ಬೆಳೆಯ ಖರ್ಚು-ವೆಚ್ಚ ಸರಿದೂಗಿಸಲು ಸಾಧ್ಯವಾಗಿದೆ. ತರಕಾರಿ ಬೆಳೆಗಳಿಗೆ ಹೆಚ್ಚಿನ ಶ್ರಮದಾನ, ವ್ಯಾಪಾರಿ ಬುದ್ಧಿ ಬೇಕು ಎಂಬುದು ಜಾಲಿಕಟ್ಟಿಯವರ ಅನುಭವ ಮಾತು. ಇವರು ಮಾರುಕಟ್ಟೆಯ ಬೇಡಿಕೆ ಅನುಸಾರ ತರಕಾರಿ ಬೆಳೆಯುತ್ತಾರೆ.  ಮಹಾಲಿಂಗಪುರ, ರಬಕವಿ-ಬನಹಟ್ಟಿ, ಮುಧೋಳ- ಜಮಖಂಡಿ, ಘಟಪ್ರಭಾ, ಬೆಳಗಾವಿ ಸೇರಿದಂತೆ ಗೋವಾ ಮತ್ತು ಮಹಾರಾಷ್ಟ್ರ ಮಾರುಕಟ್ಟೆಗೆ ಕಳುಹಿಸುತ್ತಾರೆ.

ವಿಭಿನ್ನ ಬೆಳೆ ಪದ್ಧತಿ
ಜಾಲಿಕಟ್ಟಿ ಬಿತ್ತನೆಗು ಮೊದಲು ಹೊಲವನ್ನು ಸಂಪೂರ್ಣ ಹದಗೊಳಿಸಿ, ಸಾಲಿನಿಂದ ಸಾಲಿಗೆ 4 ಅಡಿ ಅಂತರದಲ್ಲಿ ನಾಟಿ ಮಾಡುತ್ತಾರೆ.  ನಾಟಿ ಸಮಯದಲ್ಲಿ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ಬಳಸಿದರೆ, ಬೆಳೆ ದೊಡ್ಡದಾದ ನಂತರ ನಿರ್ವಹಣೆಗಾಗಿ ಕೀಟನಾಶಕವನ್ನು ಮಾತ್ರ ಬಳಸುತ್ತಾರೆ. ಹನಿ ನೀರಾವರಿ ಮತ್ತು ನೆಲ ಹೊದಿಕೆ ಪದ್ಧತಿಯನ್ನು ಅನುಸರಿಸುವುದರಿಂದ  ನೀರಿನ ಬಾಧೆ ಇವರಿಗಿಲ್ಲ. ಹೀಗಾಗಿ,  ತರಕಾರಿ ಬೆಳೆ ಬೆಳೆದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಮಹಾಂತೇಶರು ಕಳೆದ ನಾಲ್ಕಾರು ವರ್ಷಗಳಿಂದ ನಾಲ್ಕು ಎಕರೆಯಲ್ಲಿ ವಿವಿಧ ತರಕಾರಿ ಬೆಳೆ ಬೆಳೆಯುತ್ತಿದ್ದಾರೆ. ಖರ್ಚೆಲ್ಲಾ ತೆಗೆದು ಪ್ರತಿವರ್ಷ ಎಕರೆಗೆ 2 ಲಕ್ಷದಂತೆ 7-8 ಲಕ್ಷ ಆದಾಯ ಇವರಿಗೆ ಕಿಸೆ ಸೇರುತ್ತಿದೆ.  

“ನನ್ನೊಂದಿಗೆ ಪತ್ನಿ ವಿಜಯಲಕ್ಷ್ಮೀ, ಸಹೋದರರಾದ ಪ್ರಕಾಶ, ಸುರೇಶ, ಮಹೇಶ, ತಾಯಿ ಬಂಗಾರೆವ್ವ ಸೇರಿದಂತೆ ಎಲ್ಲರವಿರುವುದರಿಂದ ಕೆಲಸಗಾರರ ಸಮಸ್ಯೆ ಇಲ್ಲ. ಜೊತೆಗೆ ತರಕಾರಿಯೊಂದಿಗೆ ಹೈನುಗಾರಿಕೆಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಲಾಭ ಅಧಿಕವಾಗಿದೆ ‘ ಎನ್ನುತ್ತಾರೆ ಮಹಾಂತೇಶ ಪಾಂಡಪ್ಪ ಜಾಲಿಕಟ್ಟಿ. 

ಇಬ್ಬರಿಗೂ ಪ್ರಶಸ್ತಿ
ಉತ್ತಮ ಕೃಷಿ ನಿರ್ವಹಣೆ, ವಿವಿಧ ಬೆಳೆ, ಹವಾಮಾನಕ್ಕೆ ತಕ್ಕಂತೆ ವಾಣಿಜ್ಯ ಮತ್ತು ತರಕಾರಿ ಬೆಳೆ ಬೆಳೆದು ಅಧಿಕ ಲಾಭ ಬರುತ್ತದೆ ಅಂತ ಜಗತ್ತಿಗೆ ತೋರಿಸಿದವರು ಜಾಲಿಕಟ್ಟಿ. ಇದನ್ನು ಗುರುತಿಸಿ ಜಿಲ್ಲಾ ಕೃಷಿ ಇಲಾಖೆ 2017-18ನೇ ಸಾಲಿನ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಕೊಟ್ಟಿದ್ದಾರೆ.  2016ರಲ್ಲಿ ಮಹಾಂತೇಶ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೂ ಜಮಖಂಡಿ ತಾಲೂಕು ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿಯೂ ದೊರೆತಿದೆ.

– ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.