ಅಸಹಾಯಕ ಜೀವಗಳಿಗೆ ಬೇಕಿದೆ ಆಸರೆಯ ಬೆಳಕು


Team Udayavani, Feb 11, 2019, 1:00 AM IST

asahayaka.jpg

ಉಡುಪಿ: ಒಂದು ಕುಟುಂಬಕ್ಕೆ ಸೂರಿಲ್ಲ, ಇನ್ನೊಂದು ಕುಟುಂಬಕ್ಕೆ ಅಂಧತ್ವದ ಕತ್ತಲು, ಮತ್ತೂಂದು ಹಿರಿಜೀವಕ್ಕೆ ಒಬ್ಬಂಟಿತನ. ಇನ್ನೋರ್ವ ಒಂಟಿ ಮಹಿಳೆ ಕ್ಷಯಪೀಡಿತೆ. ಶಾಲೆಗೆ ಹೋಗದ ಮಕ್ಕಳು..

ಮಣಿಪಾಲ ನಗರದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಮಂಚಿ ಸಿದ್ಧಾರ್ಥ ನಗರ  ಕೊರಗ ಸಮುದಾಯದವರ ಸ್ಥಿತಿಗತಿ ಇದು. ಇಲ್ಲಿನ ಕಾಲನಿಯಲ್ಲಿ 36ರಷ್ಟು ಕೊರಗ ಕುಟುಂಬಗಳಿವೆ. ಈ ಪೈಕಿ ಹಲವು ಆರೋಗ್ಯ, ಶಿಕ್ಷಣ ಸೌಕರ್ಯಗಳಿಂದ ವಂಚಿತವಾಗುತ್ತಿವೆ. ಇದು ಅಲೆವೂರು ಗ್ರಾ.ಪಂ. ವ್ಯಾಪ್ತಿಯಲ್ಲಿದೆ.

ಜೋಪಡಿಗೆ ಮುಕ್ತಿ ನಿರೀಕ್ಷೆ 
ಕಾಲನಿ ಪ್ರವೇಶಿಸುತ್ತಲೇ  ಭಾಸ್ಕರ ಮತ್ತು ಶೋಭಾ ದಂಪತಿ ಜೋಪಡಿ ಕಾಣಿಸುತ್ತದೆ.  ಅವರು ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಸೂರಿನ ಕನಸು ನನಸಾಗಿಲ್ಲ. ಪಕ್ಕದಲ್ಲಿರುವ ತೋಮು ಅವರ ಮನೆಯಲ್ಲಿ ಅವರ ಇಬ್ಬರು ಸಹೋದರ ಸಹೋದರಿಯರು (ಸುಮತಿ ಮತ್ತು ಸುಂದರ) ಹುಟ್ಟು ಕುರುಡರಾಗಿದ್ದಾರೆ. ಅವರ ಕಾಲುಗಳೂ ಊದಿಕೊಂಡು ಯಾತನೆ ಅನುಭವಿಸುತ್ತಿದ್ದಾರೆ. ರಕ್ತದೊತ್ತಡ ಸಮಸ್ಯೆಯೂ ಅವರಿಗಿದ್ದು,  ನಿರಂತರ ಔಷಧೋಪಚಾರದ ಅಗತ್ಯವಿದೆ.

ಕ್ಷಯ ಪೀಡಿತೆ ಒಂಟಿ ಮಹಿಳೆ
ಇದೇ ಕಾಲನಿಯ ಇನ್ನೊಂದು ಬದಿಯಲ್ಲಿರುವ ಸುಂದರಿ ಅವರದ್ದು ಒಂಟಿ ಬದುಕು. ಹಲವು ತಿಂಗಳುಗಳಿಂದ ಈಕೆ ಕ್ಷಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಸಮಾಜಸೇವಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪೂರ್ಣ ಚಿಕಿತ್ಸೆ ಪಡೆಯದೆ ಅರ್ಧದಿಂದಲೇ ಆಸ್ಪತ್ರೆಯಿಂದ ವಾಪಸ್ಸಾಗಿದ್ದಾರೆ. ಇವರಿಗೆ ಔಷಧೋಪಚಾರ, ಆಸರೆ ಬೇಕಾಗಿದೆ. ಇದೇ ರೀತಿ ಒಂಟಿ ಬದುಕು ಸಾಗಿಸುತ್ತಿರುವ ಮತ್ತೋರ್ವರು ಮಹಿಳೆ ಇದ್ದಾರೆ. ಅವರು ಕೂಡ ಸಹಾಯಕ್ಕಾಗಿ ಕೈಚಾಚುತ್ತಿದ್ದಾರೆ. 

ಶಾಲೆ ದಾರಿ ಮರೆತ ಮಕ್ಕಳು
ಕಾಲನಿಯ ಬೆರಳೆಣಿಕೆ ಮಕ್ಕಳು ಮಾತ್ರವೇ ಹೈಸ್ಕೂಲ್‌, ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉಳಿದವರೆಲ್ಲರೂ ಒಂದೋ ಶಾಲೆ ಮೆಟ್ಟಿಲು ಹತ್ತಿಲ್ಲ ಇಲ್ಲವೇ ಪ್ರಾಥಮಿಕ ಹಂತದಲ್ಲಿ ಮಧ್ಯದಲ್ಲೇ ಶಾಲೆ ಬಿಟ್ಟವರಾಗಿದ್ದಾರೆ. “ಈ ಕಾಲನಿಯಲ್ಲಿ ಹಲವಾರು ಮಂದಿ ಅರ್ಧದಲ್ಲಿಯೇ ಶಾಲೆ ಬಿಡುತ್ತಾರೆ. ಕೆಲವರು ಸಿಕ್ಕಿದ ಕೆಲಸಕ್ಕೆ ಹೋಗುತ್ತಾರೆ. ಇನ್ನು ಕೆಲವರು ಮನೆಯಲ್ಲಿಯೇ ಇದ್ದಾರೆ’ ಎನ್ನುತ್ತಾರೆ ಆತ್ಮವಿಶ್ವಾಸದಿಂದ ವಿದ್ಯಾಭ್ಯಾಸ ಮಾಡುತ್ತಾ ಬಂದು ಈಗ ನರ್ಸಿಂಗ್‌ ಶಿಕ್ಷಣ ಪಡೆಯುತ್ತಿರುವ ರೇಣುಕಾ. ಈಕೆಯ ತಂಗಿ ಕಂಪ್ಯೂಟರ್‌ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಮ್ಮಂತೆಯೇ ಕಾಲನಿಯ ಇತರ ಮಕ್ಕಳು ಕೂಡ ಕಲಿಯಬೇಕೆಂಬ ಆಸೆ ಈ ಹೆಣ್ಮಕ್ಕಳಿಗಿದೆ. ಆದರೆ ಅವರು ಅಸಹಾಯಕರು.

ಶೌಚಾಲಯ, ಸ್ವತ್ಛತೆ ಕೊರತೆ
ಕೆಲವು ಮನೆಗಳಲ್ಲಿ ಶೌಚಾಲಯ ಕೊರತೆ ಇದೆ. ನಿವಾಸಿಗಳಿಗೆ ಆರೋಗ್ಯ ಸೇರಿದಂತೆ ಮೂಲಸೌಕರ್ಯ ಆದ್ಯತೆ ಬೇಕಾಗಿದೆ. ಸ್ವತ್ಛತೆ, ಆರೋಗ್ಯಕ್ಕೆ ಅಗತ್ಯ ಕ್ರಮ ಮತ್ತು  ಜಾಗೃತಿ  ಆಗಬೇಕಿದೆ. ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳ ಪ್ರಯತ್ನದ ಜತೆಗೆ ಸಮುದಾಯದವರು ಕೂಡ ಆಸಕ್ತಿ ವಹಿಸಬೇಕಾಗಿದೆ.

ಚಿಕಿತ್ಸೆಗೆ ಕ್ರಮ
ಈ ಕಾಲನಿಯ ವಸತಿ, ಶೌಚಾಲಯ ಮತ್ತು ಆರೋಗ್ಯದ ಬಗ್ಗೆ ಇಲಾಖೆ ನಿರಂತರವಾಗಿ ಗಮನಹರಿಸುತ್ತಿದೆ. ನಿರಂತರವಾಗಿ ಭೇಟಿ ನೀಡುತ್ತಿದ್ದೇವೆ. ಭಾಸ್ಕರ್‌ ಅವರಿಗೆ ಹಕ್ಕುಪತ್ರ, ಮನೆ  ಮಂಜೂರಾಗಿದೆ. ಮನೆಯವರು ಗುತ್ತಿಗೆದಾರರನ್ನು ಗುರುತಿಸಲು ಮುಂದಾಗಿಲ್ಲ. ಹಾಗಾಗಿ ಇಲಾಖೆಯೇ ಮನೆ ನಿರ್ಮಾಣಕ್ಕೆ ಗುತ್ತಿಗೆದಾರರನ್ನು ಕೂಡ ಗುರುತಿಸಿಕೊಡಲಿದೆ.   ಕೊರಗ ಸಮುದಾಯದವರು ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಇಲಾಖೆಯೇ ಅದರ ವೆಚ್ಚ ಭರಿಸುತ್ತದೆ. ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ಉಚಿತ  ಟ್ಯೂಷನ್‌ ಕೊಡಲು ಇಲಾಖೆ ಯತ್ನಿಸಿದೆ. ಆದರೆ ಮಕ್ಕಳಿಂದ ಸ್ಪಂದನೆ ದೊರೆತಿಲ್ಲ.
-ಅಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ

ಗ್ರಾ.ಪಂ. ವಿಶೇಷ ಆದ್ಯತೆ
ಭಾಸ್ಕರ ಅವರಿಗೆ ಐಟಿಡಿಪಿಯಿಂದ (ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ) ಮನೆ ಮಂಜೂರಾಗಿದೆ. ಇನ್ನಷ್ಟೇ ನಿರ್ಮಾಣವಾಗಬೇಕಿದೆ. ಬಹುತೇಕ ಹೆಚ್ಚಿನ ಮನೆಗಳಲ್ಲಿ ಶೌಚಾಲಯ ಇದೆ. ಬಾಕಿ ಇರುವಲ್ಲಿ ಸ್ವತ್ಛ ಭಾರತ್‌ ಯೋಜನೆಯಡಿ ಶೌಚಾಲಯ ನಿರ್ಮಿಸಲಾಗುತ್ತಿದೆ. ನಮ್ಮ ಪಂಚಾಯತ್‌ ವ್ಯಾಪ್ತಿಯಲ್ಲಿ 48 ಕೊರಗ ಕುಟುಂಬಗಳಿವೆ. ಅವರಿಗೆ ಇಲಾಖೆಗಳ ಮೂಲಕ ಸೌಕರ್ಯ ಒದಗಿಸಿಕೊಡಲಾಗುತ್ತಿದೆ. ಸಮಾಜದ ಮುಖ್ಯವಾಹಿನಿ ಜತೆ ಸೇರಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಪಂಚಾಯತ್‌ಗೆ ಕೊರಗ ಸಮುದಾಯದವರು ಬಂದಾಗ ಅವರಿಗೆ ಪ್ರಥಮ ಆದ್ಯತೆಯಲ್ಲಿ ಮಂಜೂರಾತಿಗಳನ್ನು ನೀಡುತ್ತಿದ್ದೇವೆ. 
 -ಶ್ರೀಕಾಂತ ನಾಯಕ್‌, ಅಧ್ಯಕ್ಷರು, ಅಲೆವೂರು ಗ್ರಾ.ಪಂ.

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.