ವಿದ್ಯುತ್ ಬಿಲ್ ಇಲ್ಲದೆ ಗ್ಯಾಸ್ ನೀಡದ ಏಜೆನ್ಸಿ !
Team Udayavani, Feb 11, 2019, 1:00 AM IST
ಮಣಿಪಾಲ: ಹೊಗೆ ಮುಕ್ತ ಅಡುಗೆಗಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಒದಗಿಸಲಾಗುತ್ತಿದ್ದರೂ, ವಿದ್ಯುತ್ ಬಿಲ್ ಇಲ್ಲ ಎನ್ನುವ ಕಾರಣಕ್ಕೆ ಇದೀಗ ಸಂಪರ್ಕ ನಿರಾಕರಿಸಲಾಗುತ್ತಿದೆ.
ಎಲ್ಲ ದಾಖಲೆಗಳನ್ನು ಹೊಂದಿದ್ದರೂ ವಿದ್ಯುತ್ ಬಿಲ್ ಇಲ್ಲ ಎಂದು ಸಂಪರ್ಕ ನೀಡಲು ಗ್ಯಾಸ್ ಏಜೆನ್ಸಿಗಳು ನಿರಾಕರಿಸುತ್ತಿರುವುದರಿಂದ ಬಡ ಜನರು ಪರದಾಡುವಂತಾಗಿದೆ.
ಹೆರ್ಗ ಗ್ರಾಮದ ಸರಳೇಬೆಟ್ಟು ವಾರ್ಡಿನ ಮೇರಿ ಎಂಬಾಕೆಗೆ ಮನೆ ನಂಬರ್, ಬಿಪಿಎಲ್ ರೇಷನ್ ಕಾರ್ಡ್, ಆಧಾರ್, ತೆರಿಗೆ ರಸೀದಿ, ವೋಟರ್ ಐಡಿ ಇದ್ದಾಗ್ಯೂ, ಕಾನೂನು ಪ್ರಕಾರ ಈ ದಾಖಲೆಗಳು ಸಾಕಿದ್ದರೂ ಮಹಿಳೆ ಸಂಪರ್ಕಿಸಿದ
ಉಡುಪಿ ಹಾಗೂ ಮಣಿಪಾಲದ ಕೆಲವು ಗ್ಯಾಸ್ ಏಜೆನ್ಸಿಗಳು ವಿದ್ಯುತ್ ಬಿಲ್ ಇಲ್ಲ ಎಂದು ಸಂಪರ್ಕ ನೀಡಿಲ್ಲ.
ವಿದ್ಯುತ್ ಸಂಪರ್ಕವೇ ಇಲ್ಲ!
ಮೇರಿ ಅವರು ಶಾಲೆಗೆ ಹೋಗುವ ಪುತ್ರನೊಂದಿಗೆ ಮನೆಯಲ್ಲಿದ್ದಾರೆ. ಅವರ ಪತಿ ತಮಿಳುನಾಡಿನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ. ಸಿಂಗಲ್ ಲೇಔಟ್ ಇತ್ಯಾದಿ ತಾಂತ್ರಿಕ ಕಾರಣಗಳಿಂದ ಭೂಮಿಗೆ ಸಂಬಂಧಿಸಿದ ಪ್ರತ್ಯೇಕ ದಾಖಲೆಗಳಿಲ್ಲದೆ ಇವರಿಗೆ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗಿಲ್ಲ . ಉಳಿದಂತೆ ಅವರು ತೆರಿಗೆ ಪಾವತಿ ಸಹಿತ ಎಲ್ಲ ದಾಖಲೆಗಳನ್ನು ಹೊಂದಿದ್ದರೂ ಗ್ಯಾಸ್ ಪಡೆಯಲು ಸಾಧ್ಯವಾಗಿಲ್ಲ.
ಕ್ಯಾಂಟೀನ್‌ನಲ್ಲಿ ಕೆಲಸ
ಮೇರಿ ಕ್ಯಾಂಟೀನ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ದಿನಕ್ಕೆ 200-250 ರೂ. ಸಂಪಾದಿಸುತ್ತಾರೆ. ಇದರಿಂದ ಗ್ಯಾಸ್ ಖರೀದಿ ಸಾಧ್ಯವಿಲ್ಲ. ಹಾಗಾಗಿ ಉಜ್ವಲ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ವಿದ್ಯುತ್ ಬಿಲ್ ಇಲ್ಲದೆ ಗ್ಯಾಸ್ ಸಿಗದಂತಾಗಿದೆ. ಸದ್ಯ ಗ್ಯಾಸ್-ವಿದ್ಯುತ್‌ಗೆ ಏನು ಸಂಬಂಧ ಗೊಂದಲದಲ್ಲಿದ್ದಾರೆ.
ಸಂಪರ್ಕ ನಿರಾಕರಿಸಿದ್ದಾರೆ
ಉಜ್ವಲ ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಮಣಿಪಾಲದ ಏಜೆನ್ಸಿಗೆ ಹೋದಾಗ ಅವರು ಉಡುಪಿಗೆ ಕಳುಹಿಸಿದರು. ಉಡುಪಿಯಲ್ಲಿ ವಿದ್ಯುತ್ ಬಿಲ್ ಇಲ್ಲದೆ ಗ್ಯಾಸ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
-ಮೇರಿ,
ವಿದ್ಯುತ್ ಬಿಲ್ ಅಗತ್ಯವಿಲ್ಲ
ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆಯುವುದಕ್ಕೆ ವಿದ್ಯುತ್ ಬಿಲ್ ಕೇಳಲು ಅವಕಾಶವಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾಗುವುದು.
-ಎಂ.ಆರ್. ಭಟ್, ನಾಗರಿಕ ಪೂರೈಕೆ ಉಪನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.