ನಾಯ್ಡುರಂಥ “ಸೀನಿಯರ್‌’ನಾನಲ್ಲ: ಪ್ರಧಾನಿ ಮೋದಿ


Team Udayavani, Feb 11, 2019, 12:30 AM IST

pti2102019000130a.jpg

ಅಮರಾವತಿ: ಲೋಕಸಭೆ ಚುನಾವಣೆಗೆ ರಣಕಹಳೆ ಊದಿರುವ ಪ್ರಧಾನಿ ಮೋದಿ ಅವರು ರವಿವಾರ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸುವ ಮುನ್ನ ಆಂಧ್ರಪ್ರದೇಶದ ಗುಂಟೂರು ಮತ್ತು  ತಮಿಳುನಾಡಿನ ತಿರುಪುರ್‌ನಲ್ಲಿ ಅವರು ರ‍್ಯಾಲಿ ನಡೆಸಿದ್ದಾರೆ. ಅಲ್ಲದೆ ಹಲವು ಯೋಜನೆಗಳಿಗೆ ಶಿಲಾನ್ಯಾಸಗಳನ್ನೂ ನೆರವೇರಿಸಿದ್ದಾರೆ.

ಆಂಧ್ರದಲ್ಲಿ ತಮ್ಮ ಭಾಷಣದುದ್ದಕ್ಕೂ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಕಿಡಿಕಾರಿದ್ದಾರೆ. “ನಾಯ್ಡು ಅವರು ಪ್ರತಿ ಬಾರಿಯೂ ನಾನು ನಿಮಗಿಂತ ಸೀನಿಯರ್‌ ಎಂದು ಹೇಳುತ್ತಿರುತ್ತಾರೆ. ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಅವರು ಸೀನಿಯರ್‌ ಆಗಿರುವುದಕ್ಕೆ ನಾನು ಅವರಿಗೆ ಕಿಂಚಿತ್ತೂ ಅಗೌರವ ತೋರಿಲ್ಲ. ಆದರೆ, ಬಾಬುಗಾರು (ನಾಯ್ಡು) ಯಾವುದರಲ್ಲಿ ಸೀನಿಯರ್‌ ಗೊತ್ತೇ? ಅವರು ಪಕ್ಷದಿಂದ ಪಕ್ಷಕ್ಕೆ ಹಾರುವಲ್ಲಿ ಸೀನಿಯರ್‌, ಹೊಸ ಮೈತ್ರಿಗೆ ಸೇರುವಲ್ಲಿ ಸೀನಿಯರ್‌, ಸ್ವಂತ ಮಾವನ (ಎನ್‌.ಟಿ. ರಾಮರಾವ್‌) ಬೆನ್ನಿಗೆ ಚೂರಿ ಹಾಕುವಲ್ಲಿ ಸೀನಿಯರ್‌. ಯಾರನ್ನು ಟೀಕಿಸುತ್ತಾರೋ ಅವರದ್ದೇ ಮಡಿಲಲ್ಲಿ ಕುಳಿತುಕೊಳ್ಳುವಂಥ, ಆಂಧ್ರಪ್ರದೇಶದ ಕನಸುಗಳನ್ನು ಧ್ವಂಸ ಮಾಡುವಂಥ ಸೀನಿಯರ್‌. ಇಂಥ ಸೀನಿಯರ್‌ ಆಗಲಿಕ್ಕೆ ನಾನಂತೂ ಇಷ್ಟಪಡುವುದಿಲ್ಲ’ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

ಅಭಿವೃದ್ಧಿಯ ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ ನಾಯ್ಡು ಅವರು, ಕೇಂದ್ರ ಸರಕಾರ ಒದಗಿಸಿದ ಅನುದಾನವನ್ನು ಸದ್ಬಳಕೆ ಮಾಡದೇ ಯೂಟರ್ನ್ ಹೊಡೆದರು. ವಿಶೇಷ ಸ್ಥಾನಮಾನದಲ್ಲಿ ಸಿಗುವುದ ಕ್ಕಿಂತ ಹೆಚ್ಚಿನ ಮೊತ್ತವನ್ನು ನಮ್ಮ ಸರಕಾರವು ಆಂಧ್ರಪ್ರದೇಶಕ್ಕೆ ಕಲ್ಪಿಸಿದೆ. ಆದರೆ, ಕೊಟ್ಟ ಹಣವನ್ನು ಸರಿಯಾಗಿ ಬಳಸಲಾಗದೇ ಈಗ ಉಲ್ಟಾ ಹೊಡೆಯು ತ್ತಿದ್ದಾರೆ ಎಂದೂ ಮೋದಿ ಕಿಡಿಕಾರಿದ್ದಾರೆ. ತಮ್ಮ ಭಾಷಣದಲ್ಲಿ ಮೋದಿ ಅವರು ಹಲವು ಬಾರಿ ನಾಯ್ಡು ಅವರನ್ನು “ಎನ್‌.ಲೋಕೇಶ್‌ ಅವರ ಅಪ್ಪ’ ಎಂದೇ ಸಂಭೋದಿಸುವ ಮೂಲಕ ಕಾಲೆಳೆದಿದ್ದಾರೆ.

ಭದ್ರತೆ ನಿರ್ಲಕ್ಷಿಸಿದ ಕಾಂಗ್ರೆಸ್‌: ಇದೇ ವೇಳೆ, ತಮಿಳುನಾಡಿನ ತಿರುಪುರ್‌ನ ಪೆರುಮನಲ್ಲೂರ್‌ನಲ್ಲಿ ನಡೆಸಿದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್‌ ತನ್ನ ಆಡಳಿತಾವಧಿಯಲ್ಲಿ ದೇಶದ ಭದ್ರತೆಯನ್ನೇ ನಿರ್ಲಕ್ಷಿಸಿತ್ತು ಎಂದು ಆರೋಪಿಸಿದ್ದಾರೆ. ಸಮುದ್ರದಿಂದ ಆಗಸದವರೆಗೆ ವಿವಿಧ ರಕ್ಷಣಾ ಹಗರಣಗಳಲ್ಲಿ ಕಾಂಗ್ರೆಸ್‌ ಭಾಗಿಯಾಯಿತು. ಹೀಗಾಗಿ, ದೀರ್ಘಾವಧಿ ಅಧಿಕಾರ ದಲ್ಲಿದ್ದರೂ ದೇಶದ ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಅವರು ಅವಕಾಶವನ್ನೇ ನೀಡಲಿಲ್ಲ ಎಂದಿದ್ದಾರೆ.

ಟಿಡಿಪಿ ಪ್ರತಿಭಟನೆ: ಎನ್‌ಡಿಎಯಿಂದ ಟಿಡಿಪಿ ಹೊರಬಂದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ಆಂಧ್ರ ಭೇಟಿ ಇದಾಗಿದ್ದು, ಅವರ ವಿರುದ್ಧ ಟಿಡಿಪಿ ಭಾರೀ ಪ್ರತಿಭಟನೆ ನಡೆಸಿದೆ. ಕಪ್ಪು ಬಾವುಟಗಳನ್ನು ಹಿಡಿದು, ಕಪ್ಪು ಬಲೂನ್‌ಗಳನ್ನು ಹಾರಿಬಿಟ್ಟು ಪ್ರತಿಭ ಟನೆ ನಡೆಸಲಾಗಿದೆ. ಗನ್ನಾವರಂ ಏರ್‌ಪೋರ್ಟ್‌ಗೆ ಪ್ರಧಾನಿ ಮೋದಿ ಬಂದಿಳಿದಾಗ ಅವರನ್ನು ಬರಮಾಡಿಕೊಳ್ಳಲು ಆಂಧ್ರದ ಒಬ್ಬರೇ ಒಬ್ಬ ಸಚಿವರೂ ಹೋಗಲಿಲ್ಲ.

ಪ್ರತಿಭಟನೆ ನಡುವೆ ಮೋದಿ ಪರ ಘೋಷಣೆ
ಪ್ರಧಾನಿ ಮೋದಿ ಆಗಮನ ಖಂಡಿಸಿ ರವಿವಾರ ತಿರುಪುರ್‌ನಲ್ಲಿ ಎಂಡಿಎಂಕೆ ಮುಖ್ಯಸ್ಥ ವೈಕೋ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ತಮಿಳುನಾಡಿನ ಹಿತಾಸಕ್ತಿಯನ್ನು ಮೋದಿ ಗಾಳಿಗೆ ತೂರುತ್ತಿದ್ದಾರೆ ಎಂದು ವೈಕೋ ತಮ್ಮ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ, ಪ್ರತಿಭಟನಕಾರರ ನಡುವೆ ಇದ್ದ ಮಹಿಳೆಯೊಬ್ಬರು ಏಕಾಏಕಿ ಮೋದಿ ಪರ ಘೋಷಣೆ ಕೂಗಿದ ಘಟನೆ ನಡೆದಿದೆ. ಕೂಡಲೇ ಪಕ್ಷದ ಕಾರ್ಯಕರ್ತರು ಆ ಮಹಿಳೆಗೆ ಘೇರಾವ್‌ ಹಾಕಲು ಮುಂದಾಗಿದ್ದು, ಮಧ್ಯಪ್ರವೇಶಿಸಿದ ಪೊಲೀಸರು ಮಹಿಳೆಯನ್ನು ಹೊರಗೆ ಕರೆದೊಯ್ದರು. ಆ ಮಹಿಳೆ ಬಿಜೆಪಿ ಪದಾಧಿಕಾರಿಯಾಗಿದ್ದು, ಪ್ರತಿಭಟನಕಾರರ ನಡುವೆ ನುಸುಳಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.

ನೀವು ಪತ್ನಿಯನ್ನೇ ತೊರೆದವರು 
ಗುಂಟೂರು ರ‍್ಯಾಲಿಯಲ್ಲಿ ತಮ್ಮನ್ನು “ಎನ್‌. ಲೋಕೇಶ್‌ ಅವರ ತಂದೆ’ ಎಂದು ಸಂಬೋಧಿಸಿದ ಪ್ರಧಾನಿ ಮೋದಿ ವಿರುದ್ಧ ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ. 

ವಿಜಯವಾಡದಲ್ಲಿ ಸಾರ್ವಜನಿಕ ಸಭೆಯಲ್ಲಿ ಮೋದಿಗೆ ಪ್ರತ್ಯುತ್ತರ ನೀಡುವ ಭರದಲ್ಲಿ ನಾಯ್ಡು ಅವರು, ಮೋದಿ ಪತ್ನಿಯ ಹೆಸರನ್ನು ಎಳೆದುತಂದಿದ್ದಾರೆ. “ನಾನು ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನೀವು ನಿಮ್ಮ ಭಾಷಣದಲ್ಲಿ ನನ್ನ ಮಗನ ಹೆಸರನ್ನು ಪ್ರಸ್ತಾವಿಸಿದ್ದೀರಿ. ಅದಕ್ಕೆ ನಾನು ನಿಮ್ಮ ಪತ್ನಿಯ ಬಗ್ಗೆ ಪ್ರಸ್ತಾವಿಸುತ್ತಿದ್ದೇನೆ. ನೀವು ನಿಮ್ಮ ಪತ್ನಿಯನ್ನೇ ಬಿಟ್ಟು ಬಂದವರು. ನಿಮಗೆ ಕುಟುಂಬ ವ್ಯವಸ್ಥೆಯ ಬಗ್ಗೆ ಸ್ವಲ್ಪವಾದರೂ ಗೌರವವಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.