ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
Team Udayavani, Feb 11, 2019, 1:00 AM IST
ಹೆಬ್ರಿ: ಠಾಣಾ ವ್ಯಾಪ್ತಿಯ ವರಂಗ ಗ್ರಾಮದ ಮಾತಿಬೆಟ್ಟಿನಲ್ಲಿ ತಾಯಿಯೋರ್ವಳು ತನ್ನ ಪುಟ್ಟ ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ಸಂತೋಷ ಅವರ ಪತ್ನಿ ದೀಪಾ (35), ಪುತ್ರಿಯರಾದ 3ನೇ ತರಗತಿಯ ಶ್ರೇಯಾ (9) ಹಾಗೂ ಯುಕೆಜಿ ವಿದ್ಯಾರ್ಥಿನಿ ಪ್ರಿಯಾ (6) ಮೃತಪಟ್ಟವರು.
ದೀಪಾ ಹಲವು ಸಮಯಗಳಿಂದ ಗರ್ಭಕೋಶದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದರೂ ಗುಣಮುಖವಾಗದ ಕಾರಣ ಈ ಕೃತ್ಯವೆಸಗಿದ್ದಾರೆ ಎಂದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ ಸಹಿತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಒಟ್ಟಿಗೆ ಊಟ ಮಾಡಿದ್ದರು
ಕಾರ್ಕಳದಲ್ಲಿ ಕೋಳಿ ಫಾರ್ಮ್ ವ್ಯವಹಾರ ಮಾಡಿ ಕೊಂಡಿರುವ ಮೂಲತಃ ಶಿವಮೊಗ್ಗದವರಾದ ಸಂತೋಷ ಅವರು ಶನಿವಾರ ರಾತ್ರಿ 8.45ರ ಹೊತ್ತಿಗೆ ಮನೆಗೆ ಬಂದು ಪತ್ನಿ ಮತ್ತು ಮಕ್ಕಳ ಜತೆಗೆ ಊಟ ಮಾಡಿ ಮಲಗಿದ್ದರು. ರಾತ್ರಿ 10.30ರ ಹೊತ್ತಿಗೆ ಮಕ್ಕಳು ಹೊಟ್ಟೆ ಉರಿ ಎನ್ನುತ್ತಾ ವಾಂತಿ ಮಾಡಿದ್ದು, ಕೂಡಲೇ ಕಾರ್ಕಳ ಆಸ್ಪತ್ರೆಗೆ ಕೊಂಡೊಯ್ದªರು. ಅಲ್ಲಿ ತಾನು ವಿಷ ನೀಡಿದ್ದೇನೆ ಎಂದು ದೀಪಾ ತಿಳಿಸಿದ್ದರಿಂದ ಕೂಡಲೇ ಮಣಿಪಾಲಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ರವಿವಾರ ಕೊನೆಯುಸಿರೆಳೆದರು. ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಲಿಗೆ ವಿಷ ಬೆರೆಸಿದ್ದಳು
ಗಂಡ ಬರುವ ಮೊದಲೇ ದೀಪಾ ತನ್ನ ಎರಡು ಮಕ್ಕಳಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿದ್ದಾರೆ ಎನ್ನಲಾಗಿದೆ.
ಶಾಲೆಗೆ ಹೋಗುತ್ತೇನೆ ಅಪ್ಪ !
ವಿಷ ಕುಡಿದು ಸಾವು ಬದುಕಿನ ನಡುವೆ ಹೊರಳಾಡುತ್ತಿದ್ದ 3ನೇ ತರಗತಿಯ ಶ್ರೇಯಾ ರವಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ “ನಾನು ಶಾಲೆಗೆ ಹೋಗುತ್ತೇನೆ ಅಪ್ಪ’ ಎಂದಿದ್ದಳು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.