ಪಾಕ್‌ನಲ್ಲಿ ಕ್ರಿಕೆಟ್ ಆಡಲು ಮತ್ತೆ ನಿರಾಕರಿಸಿದ ಆಸೀಸ್
Team Udayavani, Feb 11, 2019, 2:08 AM IST
ಕರಾಚಿ: ಪಾಕಿಸ್ತಾನ-ಆಸ್ಟ್ರೇಲಿಯ ನಡುವಿನ 5 ಪಂದ್ಯಗಳ ಏಕದಿನ ಸರಣಿಯ ದಿನಾಂಕಗಳನ್ನು ಪಿಸಿಬಿ ಅಂತಿಮಗೊಳಿಸಿದೆ. ಈ ಸರಣಿ ಮಾ.22ರಿಂದ ಆರಂಭವಾಗಲಿದೆ. ಮೂಲ ವೇಳಾಪಟ್ಟಿ ಪ್ರಕಾರ ಆಸ್ಟ್ರೇಲಿಯ ತಂಡ ಪಾಕಿಸ್ತಾನದಲ್ಲಿ ಈ ಸರಣಿ ಆಡಬೇಕಿತ್ತು. ಆದರೆ ಭದ್ರತಾ ಭೀತಿಯಿಂದ ಕಾಂಗರೂ ಪಡೆ ಪಾಕಿಗೆ ಆಗಮಿಸಲು ನಿರಾಕರಿಸಿದೆ.
ಹೀಗಾಗಿ ಈ ಸರಣಿ ಯುಎಇಯಲ್ಲಿ ನಡೆಯಲಿದೆ. ಎಲ್ಲ ಪಂದ್ಯಗಳು ಹಗಲು-ರಾತ್ರಿಯಾಗಿ ನಡೆಯಲಿವೆ. ಮೊದಲೆರಡು ಪಂದ್ಯಗಳು ಶಾರ್ಜಾದಲ್ಲಿ (ಮಾ. 22, 24), 3ನೇ ಪಂದ್ಯ ಅಬುಧಾಬಿಯಲ್ಲಿ (ಮಾ. 27) ಹಾಗೂ ಕೊನೆಯ 2 ಪಂದ್ಯಗಳು ದುಬೈ ಆತಿಥ್ಯದಲ್ಲಿ ಸಾಗಲಿವೆ (ಮಾ. 29, 31). ಮಾ. 29ಕ್ಕೆ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, ಕೊನೆಯ 2 ಪಂದ್ಯಗಳಲ್ಲಿ ಇವರಿಬ್ಬರು ಆಡಬಹುದು ಎಂಬುದು ‘ಕ್ರಿಕೆಟ್ ಆಸ್ಟ್ರೇಲಿಯ’ದ ಲೆಕ್ಕಾಚಾರ. ಇದು ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಆಸ್ಟ್ರೇಲಿಯ ಆಡಲಿರುವ ಕೊನೆಯ ಏಕದಿನ ಸರಣಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.