ಆರಾಧನೆಗಳಿಂದ ಎಲ್ಲ ವರ್ಗಗಳಲ್ಲಿ ಒಗ್ಗಟ್ಟು: ಕೋಟ


Team Udayavani, Feb 11, 2019, 6:28 AM IST

11-february-8.jpg

ಬಡಗನ್ನೂರು: ಅಸ್ಪೃಶ್ಯತೆ ಇಲ್ಲದ ರಾಜ್ಯದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿನ ಆರಾಧನೆಗಳ ಮೂಲಕ ಎಲ್ಲ ವರ್ಗಗಳನ್ನು ಒಂದೇ ಸೂರಿನಡಿಗೆ ತಂದು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದೆರ್ಕಳ ನೇಮದ ಅಂಗವಾಗಿ ಫೆ. 9ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿಂಗಾರ ಅರಳಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕಾರ್ಯಕ್ರಮಗಳು ವಿಶಿಷ್ಟವಾಗಿರುತ್ತವೆ. ಎಲ್ಲ ವರ್ಗಗಳ ಜನರೂ ಸೇರುತ್ತಾರೆ. ದೈವಾರಾಧನೆಯಲ್ಲಿ ದೈವವು ಎಲ್ಲ ಜಾತಿಯ ಪ್ರಮುಖರನ್ನು ಉಲ್ಲೇಖೀಸುತ್ತದೆ. ಸಮಾಜದ ಕೆಡುಕುಗಳ ವಿರುದ್ಧ ಹೋರಾಡಿದ ಕೋಟಿ-ಚೆನ್ನಯರ ಆರಾಧನೆಯಲ್ಲಿಯೂ ಇದನ್ನು ಕಾಣಲು ಸಾಧ್ಯ. ತುಳುನಾಡಿನ ಗರಡಿಗಳಿಗೆ ಸಾಕಷ್ಟು ಪ್ರಾಧಾನ್ಯ ಇದೆ. ಸಮಪಾಲು-ಸಮಬಾಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಕೋಟಿ-ಚೆನ್ನಯರು, ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ತಲುಪಿದರು. ಅವರ ಜೀವನದ ಎಳೆ ಎಳೆಯೂ ನಮ್ಮ ಜೀವನದಲ್ಲಿ ಮೇಳೈಸಿದೆ. ಸ್ವಾಭಿಮಾನ, ನ್ಯಾಯಪರತೆಯ ಸಂಕೇತ ಕೋಟಿ-ಚೆನ್ನಯರು. ಈ ಕಾರಣದಿಂದಾಗಿ ಅವರು ಸದಾ ಪ್ರಸ್ತುತ. ಗರಡಿಗಳಲ್ಲಿ ಕಾಲ ಕಾಲಕ್ಕೆ ಆಗುತ್ತಿರುವ ಆರಾಧನೆಗಳು ನಡೆಯುತ್ತಿದ್ದರೆ ಸಮಾಜದ ಶ್ರೇಯೋಭಿವೃದ್ಧಿ ಸಾಧ್ಯ ಎಂದರು.

ಸತ್ವ – ಸತ್ಯ
ಬಾಳೆಕೋಡಿ ಕಾಲಭೈರವೇಶ್ವರ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ ಮಾತನಾಡಿ, ಮಠ, ಮಂದಿರ, ಸಂಸ್ಥೆ, ಆರಾಧನಾಲಯ ಹಾಗೂ ಇದರಲ್ಲಿ ಪಾಲ್ಗೊಳ್ಳುವ ನಮ್ಮ ನಡುವೆ ಜೀವ – ದೇವ ಸಂಬಂಧ ಇದೆ. ಇದರಿಂದಾಗಿ ನಾವೆಲ್ಲ ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ತುಳುನಾಡಿನ ಗರಡಿಗಳು ಶಾಶ್ವತವಾಗಿ ಉಳಿದುಕೊಂಡಿವೆ. ಇದರ ನಿದರ್ಶನ ನಮ್ಮ ಮುಂದಿದೆ. ಸತ್ವ ಹಾಗೂ ಸತ್ಯಕ್ಕೆ ಭಕ್ತಿಯ ಲೇಪನ ನೀಡಿ ಜೀವ – ದೇವ ಸಂಬಂಧಕ್ಕೆ ಭಾವ ಸಂಬಂಧವನ್ನು ಸೇರಿಸಿದ್ದೇವೆ. ಭಾರತೀಯ ಧರ್ಮ ಎಂದರೆ ಒಗ್ಗಟ್ಟು. ಇದನ್ನು ತುಳುನಾಡಿನಲ್ಲೂ ಜೀವಂತವಾಗಿ ಇರಿಸಿಕೊಂಡಿದ್ದೇವೆ ಎಂದರು.

ಕೋಟಿ-ಚೆನ್ನಯರಿಲ್ಲದೆ ತುಳುನಾಡೇ ಅಲ್ಲ
ಶಾಸಕ ಸಂಜೀವ ಮಠಂದೂರು ಮಾತನಾಡಿ, ತುಳುನಾಡು ಪರಶುರಾಮನ ಸೃಷ್ಟಿ. ಇಂತಹ ತುಳುನಾಡಿನಲ್ಲಿ ಹುಟ್ಟಿ ಬೆಳೆದ ಕೋಟಿ-ಚೆನ್ನಯರು ಇಂದು ಜಗತ್ತಿಗೆ ದೇವಮಾನವರು. ಕೋಟಿ ಚೆನ್ನಯರಿಲ್ಲದ ತುಳುನಾಡನ್ನು ಊಹಿಸಲು ಸಾಧ್ಯವಿಲ್ಲ. ಕೋಟಿ-ಚೆನ್ನಯರಿಲ್ಲದಿದ್ದರೆ ಅದು ತುಳುನಾಡೇ ಅಲ್ಲ ಎಂದು ಹೇಳಿದರು.

ಸ್ವಾಭಿಮಾನದ ಸಂಕೇತ
ಸಹಾಯಕ ಆಯುಕ್ತ ಡಾ| ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ, ಧರ್ಮವನ್ನು ಬಿಟ್ಟು ಯೋಚನೆ ಮಾಡಿದರೆ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ, ನಮ್ಮ ಅಸ್ತಿತ್ವ ಉಳಿದಿರುವುದೇ ಧರ್ಮದಿಂದ. ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರು ಆದರ್ಶ, ತ್ಯಾಗ, ಭಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಜಗತ್ತಿಗೆ ಗೋಚರಿಸುತ್ತಾರೆ ಎಂದರು.

ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ| ಸದಾನಂದ ಪೆರ್ಲ ಧಾರ್ಮಿಕ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಗರಡಿಯ ಆಡಳಿತ ಮೊಕ್ತೇಸರ ಕೆ. ಸಂಜೀವ ಪೂಜಾರಿ ಕೂರೇಲು ಮಾತನಾಡಿ, ಎಲ್ಲವೂ ಕೋಟಿ-ಚೆನ್ನಯರ ಕೃಪೆ. ನಾನು ಇಲ್ಲಿ ನಿಮಿತ್ತ ಮಾತ್ರ. ತುಳುನಾಡಿನ ದೈವ ಶಕ್ತಿಗಳಾದ ಕೋಟಿ-ಚೆನ್ನಯರ, ದೇಯಿ ಬೈದೇತಿಯ ಆಶೀರ್ವಾದದಿಂದ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.

ರಾಯಲ್‌ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ದಂಬೆಕ್ಕಾನ ಸದಾಶಿವ ರೈ, ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಪಾಲ್ತಾಡು, ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಲಯದ ಪ್ರಾಧ್ಯಾಪಕ ಡಾ| ನವೀನ್‌ ಕುಮಾರ್‌ ಮರಿಕೆ, ಕೂರೇಲು ಸರಸ್ವತಿ ಸಂಜೀವ ಪೂಜಾರಿ ಉಪಸ್ಥಿತರಿದ್ದರು. ಶಿವಶಂಕರ ಮಯ್ಯ ಪ್ರಾರ್ಥಿಸಿದರು. ಕೂರೇಲು ಹರ್ಷಿತ್‌ ಕುಮಾರ್‌ ಸ್ವಾಗತಿಸಿದರು. ನೇಮಾಕ್ಷ ಸುವರ್ಣ ವಂದಿಸಿದರು. ಬಾಲಕೃಷ್ಣ ಪೊರ್ದಾಳ್‌ ಕಾರ್ಯಕ್ರಮ ನಿರೂಪಿಸಿದರು. ಐದು ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಿಕ ‘ಬಂಜಿಗ್‌ ಹಾಕೊಡ್ಚಿ ಇತ್ತ್ನಾತ್‌ ದಿನ’ ತುಳುನಾಟಕ ಪ್ರದರ್ಶನಗೊಂಡಿತು.

ಸುಬ್ಬಪ್ಪ ಪೂಜಾರಿ ಪ್ರಶಸ್ತಿ ಪ್ರದಾನ
ಉದ್ಯಮಿ, ಕೇಂದ್ರ ಯುವವಾಹಿನಿ ಅಧ್ಯಕ್ಷ ಜಯಂತ ನಡುಬೈಲು ಅವರಿಗೆ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಪ್ರಶಸ್ತಿ – 2019 ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳ 7 ಮಂದಿ ಸಾಧಕರನ್ನು ಸಮ್ಮಾನಿಸಲಾಯಿತು. ಕೃಷಿ ಕ್ಷೇತ್ರದ ಬಾರಿಕೆ ನಾರಾಯಣ ರೈ, ವಾಸು ಪೂಜಾರಿ ಗುಂಡ್ಯಡ್ಕ, ಎ.ಕೆ. ರೈ ಅರಿಯಡ್ಕ, ನಿವೃತ್ತ ಸೈನಿಕ ರಘುರಾಮ ಕೆ., ಸಂಶೋಧಕ, ಪ್ರಾಧ್ಯಾಪಕ ಡಾ| ನವೀನ್‌ ಕುಮಾರ್‌ ಮರಿಕೆ, ಶಿಕ್ಷಕ ಮಹಮ್ಮದ್‌ ಅಶ್ರಫ್‌, ಪತ್ರಕರ್ತ ಸಿಶೇ ಕಜೆಮಾರ್‌ ಅವರನ್ನು ಸಮ್ಮಾನಿಸಲಾಯಿತು. ಜನಸ್ನೇಹಿ ಅಧಿಕಾರಿ ಡಾ| ಕೃಷ್ಣಮೂರ್ತಿ ಮತ್ತು ಜನಸ್ನೇಹಿ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೌರವಿಸಲಾಯಿತು.

ವಿವಿಧ ಧಾರ್ಮಿಕ ಕಾರ್ಯ
ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿ ನೇಮ ಫೆ. 9ರಂದು ರಾತ್ರಿ ಜರಗಿತು.ಸಂಜೆ ಭಂಡಾರ ತೆಗೆದು, ಅನ್ನಸಂತರ್ಪಣೆ ಜರಗಿತು. ಬಳಿಕ ಬೈದೆರುಗಳ ಗರಡಿ ಇಳಿಯುವ ಕಾರ್ಯಕ್ರಮ, ಸುಡುಮದ್ದು ಪ್ರದರ್ಶನ, ಬೈದೆರುಗಳ ಮೀಸೆ ಧರಿಸುವ ಕಾರ್ಯಕ್ರಮ ನಡೆಯಿತು.ಮಧ್ಯರಾತ್ರಿ ಮಾಯಂದಾಲೆ ಗರಡಿ ಇಳಿದು, ಫೆ. 10ರ ಮುಂಜಾನೆ ಕೋಟಿ-ಚೆನ್ನಯ ದರ್ಶನ ಪಾತ್ರಿಗಳ ಸೇಟ್, ಬೈದೆರುಗಳ ಸೇಟ್ ನಡೆಯಿತು. ಬಳಿಕ ಪ್ರಸಾದ ವಿತರಿಸಲಾಯಿತು. ಕಂಚಿಕಲ್ಲಿಗೆ ಕಾಯಿ ಸೇಚನೆಯೊಂದಿಗೆ ನೇಮ ಸಮಾಪನೆಗೊಂಡಿತು. 10 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು ಸ್ವಾಗತಿಸಿ, ವಂದಿಸಿದರು.

ಆದರ್ಶ ಪಾಲನೆ ಅವಶ್ಯ
ನಾರಾಯಣ ಗುರುಗಳ ಚಿಂತನೆಯನ್ನು ವಿಮರ್ಶೆ ಮಾಡಿದರೆ ಜೀವನಕ್ಕೆ ಬೇಕಾದ ಹಲವು ವಿಚಾರಗಳು ಸಿಗುತ್ತವೆ. ಅಳಿಯ ಕಟ್ಟಿನ ತತ್ವಾದರ್ಶಗಳನ್ನು ಕೋಟಿ – ಚೆನ್ನಯರಲ್ಲಿ ಕಾಣಬಹುದು. ಇಂದು ಕೋಟಿ -ಚೆನ್ನಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಏಕಭಾವದಿಂದ ತುಳುನಾಡಿನ ದೈವಾಂಶ ಸಂಭೂತರಾದ ಈ ವೀರರನ್ನು ಆರಾಧಿಸಬೇಕಿದೆ. ರಾಮಜಾಲು ಗರಡಿ ಇನ್ನಷ್ಟು ಅಭಿವೃದ್ಧಿ ಕಾಣಲಿ.
– ಶಶಿಕಾಂತ ಮಣಿ ಸ್ವಾಮೀಜಿ
 ಶ್ರೀ ಕಾಲಭೈರವೇಶ್ವರ ಕ್ಷೇತ್ರ, ಬಾಳೆಕೋಡಿ

ಟಾಪ್ ನ್ಯೂಸ್

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

1-qeqwewq

Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.