ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಭಗೀರಥ ಪ್ರಯತ್ನ
Team Udayavani, Feb 12, 2019, 1:00 AM IST
ಪಡುಬಿದ್ರಿ: ಪಲಿಮಾರು, ಹೆಜಮಾಡಿ ಗ್ರಾಮಗಳಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆಯು ತಾರಕಕ್ಕೇರಲಿದ್ದು ಇದನ್ನು ಎದುರಿಸಲು ಶಾಸಕರೇ ಅಧ್ಯಕ್ಷರಾಗಿರುವ ಟಾಸ್ಕ್ಫೋರ್ಸ್‌ಗೆ ಮನವಿಗಳನ್ನು ಪಂಚಾಯತ್‌ಗಳಿಂದ ರವಾನಿಸಲಾಗಿದೆ. ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಭಗೀರಥ ಪ್ರಯತ್ನವನ್ನು ನಡೆಸಲಾಗುತ್ತಿರುವುದಾಗಿ ಗ್ರಾ. ಪಂ. ಪಿಡಿಒಗಳು ತಿಳಿಸಿದ್ದಾರೆ.
ಹೆಜಮಾಡಿ ಗ್ರಾಮದ ಕೊಕ್ರಾಣಿ ಭಾಗದ ಮೂರು ಮನೆಗಳಿಗಷ್ಟೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಹೆಜಮಾಡಿ ಶಿವನಗರ ಬಳಿಯ ಓವರ್‌ಹೆಡ್ ಟ್ಯಾಂಕ್‌ನಿಂದ ಸುಮಾರು 2 ಕಿ.ಮೀ. ದೂರದ ಕೊಕ್ರಣಿಗೆ ಹೋಗುವ ಪೈಪ್‌ಲೈನನ್ನು ಸರಿಪಡಿಸಿಕೊಂಡು ಅಲ್ಲಿನ ಸಮಸ್ಯೆಯನ್ನು ಈಗಾಗಲೇ ನಿವಾರಿಸಲಾಗಿದೆ ಎಂದು ಗ್ರಾ. ಪಂ. ಪಿಡಿಒ ಮಮತಾ ಶೆಟ್ಟಿ ಹೇಳಿದ್ದಾರೆ.
ಕುಡಿಯುವ ನೀರಿಗೆ ಮೊದಲ ಆದ್ಯತೆ
ಹೆಜಮಾಡಿ ನಡಿಕುದ್ರು, ಪರಪಟ್ಟ ಪ್ರದೇಶಗಳಿಗೆ ದಿನಕ್ಕೆ ಮುಕ್ಕಾಲು ಗಂಟೆಯಿಂದ ಒಂದು ಗಂಟೆಯವರೆಗೆ ಈಗ ನೀರು ಬಿಡಲಾಗುತ್ತಿದೆ. ಇಲ್ಲಿಗೆ ನೀರು ಹಾಯಿಸಲು ದಯಾನಂದ ಹೆಜಮಾಡಿ ಮನೆಯ ಬಳಿಯ ಟ್ಯಾಂಕ್‌ನಿಂದ ಅಲ್ಪಸ್ವಲ್ಪ ಪೈಪ್‌ಲೈನ್‌ಕಾಮಗಾರಿ ನಡೆಯಬೇಕಿದೆ. ಅಲ್ ಅಝಹರ್ ಶಾಲೆಯ ಬಳಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ತೆರೆದ ಬಾವಿಯನ್ನು ಮತ್ತಷ್ಟು ಆಳಗೊಳಿಸುವ ಕಾಮಗಾರಿ ಜಿ. ಪಂ. ಸದಸ್ಯರ 5.ಲಕ್ಷ ರೂ. ನಿಧಿಯಿಂದ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಇದು ಪೂರ್ಣಗೊಂಡಲ್ಲಿ ಈ ಸಮಸ್ಯೆ ಬಗೆಹರಿಯಬಹುದಾಗಿದೆ. ಆದರೆ ಈ ಬಾರಿ ಹೆಜಮಾಡಿಯಲ್ಲಿ ಬಾವಿಯ ನೀರು ಈಗಾಗಲೇ ಪಾತಾಳಕ್ಕಿಳಿದಿದೆ. ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಬಿಗಡಾಯಿಸಿದೆ. ಇದನ್ನು ಬಗೆಹರಿಸಲು ಗ್ರಾ. ಪಂ. ಮೊದಲ ಆದ್ಯತೆ ನೀಡುತ್ತಿರುವುದಾಗಿಯೂ ಪಿಡಿಒ ಮಮತಾ ಶೆಟ್ಟಿ ತಿಳಿಸಿದ್ದಾರೆ.
ಕುಡಿಯುವ ನೀರು ಪೋಲಾಗುತ್ತಿದೆ
ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಪ್ರತಿಕ್ರಿಯಿಸಿ ಕುಡಿಯುವ ನೀರಿನ ಕುರಿತಾಗಿ ಗಮನಿಸಿರುವ ಮುಖ್ಯ ಅಂಶವೆಂದರೆ ಕೆಲವರು ಎರಡೆರಡು ನಳ್ಳಿ ನೀರಿನ ಸಂಪರ್ಕ ಹೊಂದಿರುವವರೂ ಗ್ರಾಮದಲ್ಲಿ ಇದ್ದಾರೆ. ಕೆಲವರಂತೂ ನಳ್ಳಿ ನೀರನ್ನು ತೆಂಗಿನ ತೋಟಕ್ಕೂ, ಹೂವಿನ ಗಿಡಗಳಿಗೂ ಬಿಡುತ್ತಾರೆ. ಮತ್ತೂ ಕೆಲವರು ಮುಂದುವರಿದು ನಳ್ಳಿನೀರಿನ ಪೈಪ್ ಲೈನ್‌ಗೆà ಮೋಟಾರು ಅಳವಡಿಸಿಕೊಂಡು ತಮಗೆ ಬೇಕಾದಂತೆ ನೀರು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ನೀರನ್ನು ಪೋಲು ಮಾಡುತ್ತಾರೆ. ಇದೆಲ್ಲವುಗಳತ್ತ ಗ್ರಾ. ಪಂ. ಹದ್ದಿನ ಕಣ್ಣಿರಿಸಿದ್ದು ಅಂತಹ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದಾಗಿ ಎಚ್ಚರಿಸಿದ್ದಾರೆ.
ನೀರಿಗಾಗಿ 100 ಕರೆಗಳು
ಹೆಜಮಾಡಿ ಕೋಡಿ, ಹೆಜಮಾಡಿಯ ಮುಖ್ಯ ಭಾಗ, ನಡಿಕುದ್ರು, ಪರಪಟ್ಟಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ದಿನಕ್ಕೆ ಕೆಲವೊಮ್ಮೆ 100 ಕರೆಗಳನ್ನು ತಾನು ಪಡೆಯುತ್ತಿರುವೆನು. ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಹೊಸ ಪಂಪು ಚಾಲಕನನ್ನು ನೇಮಿಸಿಕೊಳ್ಳಲಾಗಿದೆ. ಅಲ್ಲಲ್ಲಿ ಪೈಪ್‌ಲೈನ್‌ಗಳ ಸಮರ್ಪಕ ನಿರ್ವಹಣೆಯ ಕಾರ್ಯ ನಡೆಯಬೇಕಿದ್ದು ಅದಕ್ಕೆ ಆದ್ಯತೆಯನ್ನೂ ನೀಡಲಾಗಿದೆ. ಅಗತ್ಯಬಿದ್ದಾಗ ನಡಿಕುದ್ರು ಪ್ರದೇಶಕ್ಕೆ ಟ್ಯಾಂಕರ್ ಮೂಲಕವೂ ನೀರು ಸರಬರಾಜು ಮಾಡಲಾಗಿದೆ ಎಂದಿದ್ದಾರೆ.
ಅಂಕಿ ಅಂಶ
ಹೆಜಮಾಡಿ :
ಹೆಜಮಾಡಿ ಗ್ರಾಮದಲ್ಲಿ ಒಟ್ಟು 531 ನಳ್ಳಿನೀರಿನ ಜೋಡಣೆಗಳು ಅಧಿಕೃತವಾಗಿವೆ. ಸಾರ್ವಜನಿಕ ತೆರದ ಬಾವಿ ಒಟ್ಟು 6, ಕೊಳವೆ ಬಾವಿಗಳು 2 ಹಾಗೂ ನವಯುಗ ಟೋಲ್ ಪ್ಲಾಝಾದ ಬೋರ್‌ವೆಲ್‌ನಿಂದಲೂ ದಿನಕ್ಕೊಂದು ಗಂಟೆ ನೀರು ಪಡೆಯಲಾಗುತ್ತಿದೆ. ಕಳೆದ ಬಾರಿಯ ಜಿ. ಪಂ. ಸದಸ್ಯರ ಅನುದಾನದ 5ಲಕ್ಷ ರೂ. ಗಳನ್ನು ಈ ಬಾರಿ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲಾ ಟಾಸ್ಕ್ ಫೋರ್ಸ್ ಅನುದಾನಕ್ಕೂ ಈಗಾಗಲೇ ಬರೆದುಕೊಳ್ಳಲಾಗುತ್ತಿದೆ ಎಂದರು.
ಪಲಿಮಾರು:
ಪಲಿಮಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅವರಾಲು ಮಟ್ಟು ಹೊಯಿಗೆ ಮತ್ತು ಬೆಳ್ಳಿಬೆಟ್ಟು ಪ್ರದೇಶಗಳಲ್ಲಿ ಉಲ್ಬಣಿಸಲಿರುವುದಾಗಿ ಪಲಿಮಾರು ಗ್ರಾ.ಪಂ. ಪಿಡಿಒ ಸತೀಶ್ ಹೇಳುತ್ತಾರೆ. 9 ಬೋರ್‌ವೆಲ್, 4 ಸಾರ್ವಜನಿಕ ತೆರೆದ ಬಾವಿಗಳು ಮತ್ತು 350 ನಳ್ಳಿನೀರಿನ ಸಂಪರ್ಕಗಳು ಪಲಿಮಾರು ಗ್ರಾಮದಲ್ಲಿವೆ.
ಅರ್ಧ ಟಾಂಕಿಯಷ್ಟು ಮಾತ್ರ ನೀರು
ಪಲಿಮಾರು ಪೇಟೆಗೆ ಕೇವಲ 15 ದಿನಗಳಿಗಾಗುವಷ್ಟು ನೀರನ್ನು ನಾವು ಹೊಂದಿದ್ದೇವೆ. ಕೇವಲ ಅರ್ಧ ಟ್ಯಾಂಕಿಯಷ್ಟು ಮಾತ್ರ ನೀರು ತುಂಬುತ್ತಿದೆ. ಅವರಾಲು ಮಟ್ಟು ಹೊಯಿಗೆ ಭಾಗದಲ್ಲಿ ಕೊಕ್ರಾಣಿ ಭಾಗಕ್ಕೆ ನೂತನ ಸೇತುವೆ ಕಾಮಗಾರಿಯೊಂದು ನಡೆಯುತ್ತಿದೆ. ಅದಕ್ಕಾಗಿ ಹೊಳೆಗೆ ಮಣ್ಣು ಪೇರಿಸಿರುವುದರಿಂದ ಹೊಯಿಗೆ ಭಾಗದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿತ್ತು. ಮುಂದೆ ಇಲ್ಲಿ ಪೈಪ್ ಅಳವಡಿಸಿ ಪರಿಸ್ಥಿತಿಯನ್ನು ಸರಿಪಡಿಸಲಾಗಿದೆ. ಇಲ್ಲಿ ಗುತ್ತಿಗೆದಾರರೇ ಪರಿಸ್ಥಿತಿಯನ್ನು ಸಂಭಾಳಿಸುತ್ತಿದ್ದು ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ ಎಂದು ಸತೀಶ್ ವಿವರಿಸಿದ್ದಾರೆ.
ಅಂತರ್ಜಲ ಮಟ್ಟ ಕುಸಿಯುತ್ತಿದೆ
ಎಲ್ಲೆಡೆಯಲ್ಲೂ ಅಂತರ್ಜಲ ಮಟ್ಟ ಇಳಿಯುತ್ತಿದೆ. ಕಳೆದ ಬಾರಿ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಬೆಟ್ಟು ಪ್ರದೇಶದಲ್ಲಿ ಪಂಪು ಕೆಟ್ಟು ಹೋಗಿ ನೀರಿನ ಸಮಸ್ಯೆ ಎದುರಾಗಿತ್ತು. ಅದನ್ನು ನಾವು ಟ್ಯಾಂಕರ್ ಮೂಲಕ ನೀರು ಸರಬರಾಜುಗೊಳಿಸಿ ನಿಭಾಯಿಸಿದ್ದೆವು. ಆದರೆ ಈ ಬಾರಿ ನೆರೆ ಬರುವ ರೀತಿ ಮಳೆ ಬಂದಿದ್ದು ಒಂದೇ ಸವನೆ ನೀರು ಸಮುದ್ರವನ್ನು ಸೇರಿತ್ತು. ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಟಾಸ್ಕ್ ಫೋರ್ಸ್ ಮೂಲಕ ಎರಡು ಬೋರ್ ವೆಲ್‌ಗಳಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ.
ಪಲಿಮಾರು ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿತ
ಪಲಿಮಾರು ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿದಿದೆ. ಹಾಗಾಗಿ ಪಲಿಮಾರು ಗ್ರಾಮದಲ್ಲಿ ಬಾವಿಗಳಲ್ಲಿ ನೀರಿನ ಮಟ್ಟವೂ ಕುಸಿದಿದೆ. ಗ್ರಾಮದಲ್ಲಿ ಸದ್ಯ ನೀರಿನ ನಿರ್ವಹಣೆಯನ್ನು ಎರಡು ದಿನಗಳಿಗೊಮ್ಮೆ ಒಂದು ಗಂಟೆಗಳ ಕಾಲ ಮಾಡಲಾಗುತ್ತಿದೆ. ಈಗ ನಿರ್ವಹಿಸಲಾಗುತ್ತಿದ್ದರೂ ಎಪ್ರಿಲ್, ಮೇ ತಿಂಗಳಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು.
-ಜಿತೇಂದ್ರ ಫುರ್ಟಾಡೋ, ಪಲಿಮಾರು ಗ್ರಾ. ಪಂ. ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.