ತೆಕ್ಕಟ್ಟೆ : ನಿವೇಶನ ಇದ್ದರೂ ಕಟ್ಟಡವಿಲ್ಲ !
Team Udayavani, Feb 12, 2019, 1:00 AM IST
ತೆಕ್ಕಟ್ಟೆ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಅಂಚೆ ಕಚೇರಿ ಕಟ್ಟಡಕ್ಕೆ ನಿವೇಶನ ಕಾದಿರಿಸಲಾಗಿದ್ದರೂ ಕಟ್ಟಡ ನಿರ್ಮಾಣದ ಆಲೋಚನೆ ಇನ್ನೂ ಆಗಿಲ್ಲ. ಅದಿನ್ನೂ ಖಾಸಗಿ ಕಟ್ಟಡದಲ್ಲೇ ಕಾರ್ಯನಿರ್ವಹಣೆ ನಡೆಸುತ್ತಿದೆ.
ಅಂಚೆ ಕಚೇರಿಗೆ ನಿವೇಶನ ಮೀಸಲಿರಿಸಿ ಹಲವು ವರ್ಷಗಳೇ ಸಂದಿವೆ. ಆದರೆ ಕಟ್ಟಡ ನಿರ್ಮಾಣಕ್ಕೆ ಅಂಚೆ ಇಲಾಖೆ ಮುಂದಾಗಿಲ್ಲ. ಕಾರಣ ಈ ನಿವೇಶನ ತುಸು ದೂರದಲ್ಲಿರುವುದು ಮತ್ತು ಕಟ್ಟಡ ನಿರ್ಮಾಣ, ನಿರ್ವಹಣೆ ವೆಚ್ಚಕ್ಕಿಂತಲೂ ಸದ್ಯ ಖಾಸಗಿ ಕಟ್ಟಡದಲ್ಲಿರುವ ಪುಟ್ಟ ಜಾಗದಲ್ಲೇ ದಿನದ ವ್ಯವಹಾರ ನಡೆಯುತ್ತಿದೆ.
ಗಿಡಗಂಟಿಗಳಿಂದ ಆವೃತ
ಅಂಚೆ ಕಚೇರಿಗಾಗಿ ಸ.ನಂ. 233/4 ಬಿ2ರಲ್ಲಿ ತೆಕ್ಕಟ್ಟೆ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡದ ಸಮೀಪ ಸುಮಾರು 15 ಸೆಂಟ್ಸ್ ಜಾಗ ಕಾದಿರಿಸಲಾಗಿದೆ. ಅಂಚೆ ಕಚೇರಿ ಜಾಗ ಎಂದು ಫಲಕವಿದೆ.
ಸದ್ಯ ಖಾಸಗಿ ಕಟ್ಟಡದ ಮೊದಲ ಮಹಡಿಯಲ್ಲಿ ಕಚೇರಿ ಇದೆ. ಹಿರಿಯ ನಾಗರಿಕರಿಗೆ, ಅಶಕ್ತರಿಗೆ ಅಲ್ಲಿಗೆ ತೆರಳುವುದು ಕಷ್ಟವಾಗುತ್ತಿದೆ. ಆದ್ದರಿಂದ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣ ಮಾಡಿ, ಹೆಚ್ಚಿನ ಸೇವೆ ನೀಡುವಂತಾಗಬೇಕು. ಪೋಸ್ಟಲ್ ಬ್ಯಾಂಕಿಂಗ್‌ನ ಎಲ್ಲ ಸೌಲಭ್ಯ ಇಲ್ಲಿ ದೊರಕಬೇಕೆಂಬುದು ಜನರ ಆಗ್ರಹವಾಗಿದೆ.
ಸಿಬಂದಿ ಕೊರತೆ
ಈಗಿರುವ ಕಚೇರಿಯಲ್ಲಿ ಉಳೂ¤ರು, ಕೆದೂರು, ಕೊರ್ಗಿ ಸೇರಿದಂತೆ ಗ್ರಾಮೀಣ ಶಾಖೆಗಳ ಆರ್‌ಡಿ, ರೂರಲ್ ಪೋಸ್ಟಲ್ ಲೈಫ್ ಇನ್ಸೂರೆನ್ಸ್ ದಾಖಲೆಗಳ ಕ್ರೋಡೀಕರಣ ಸೇರಿ ದಂತೆ ಇನ್ನಿತರ ಕಾರ್ಯ ಒತ್ತಡಗಳು ಹೆಚ್ಚಾಗಿವೆ.
ಪ್ರಸ್ತುತ ಅಂಚೆ ಕಚೇರಿಯಲ್ಲಿ ಉಪ ಅಂಚೆ ಪಾಲಕರು ಹಾಗೂ ಇಡಿಡಿ ಅಡಿಯಲ್ಲಿ ಇಬ್ಬರು ಸಿಬಂದಿ ಕಾರ್ಯನಿರ್ವಹಿಸುತ್ತಿದ್ದು ಓರ್ವ ಸಿಬಂದಿ ನಿವೃತ್ತಿ ಹೊಂದಿದ್ದು, ಹುದ್ದೆ ಖಾಲಿ ಇದೆ.
ಮರು ಸರ್ವೆ ಆಗಬೇಕು
ಅಂಚೆ ಇಲಾಖೆಗೆ ಸಂಬಂಧಪಟ್ಟ ಕಾದಿರಿಸಿದ ಜಾಗದ ಮರು ಸರ್ವೆ ಕಾರ್ಯವಾಗಬೇಕಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ರಿಗೆ ಪತ್ರ ಬರೆದಿದ್ದು, ಸರ್ವೆಗೆ ದಿನಾಂಕ ನಿಗದಿ ಪಡಿಸಿದ್ದಾರೆ. ವರದಿ ಕೈಸೇರಿದ ಬಳಿಕವಷ್ಟೇ ಕೇಂದ್ರ ಕಚೇರಿಗೆ ವರದಿ ಕಳುಹಿಸುತ್ತೇವೆ. ಮುಂದಿನ ದಿನಗಳಲ್ಲಿ ಕೇಂದ್ರ ಕಚೇರಿಯ ಫಂಡ್ಸ್‌ನ ಸ್ಥಿತಿಗತಿಯ ಆಧಾರದ ಮೇಲೆ ಕಾದಿರಿಸಿದ ಸ್ಥಳದಲ್ಲಿಯೇ ಅಂಚೆ ಕಚೆೇರಿಯ ಕಟ್ಟಡ ನಿರ್ಮಾಣವಾಗಲಿದೆ.
– ರಾಜಶೇಖರ್ ಭಟ್, ಅಂಚೆ ಅಧೀಕ್ಷಕರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಕ್ಸಲ್ ಚಟುವಟಿಕೆ 15 ವರ್ಷ ಬಳಿಕ ಬಹಿರಂಗವಾದ ಕಾರಣ ಸರಕಾರ ತಿಳಿಸಲಿ: ಸುನೀಲ್
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!
MUST WATCH
ಹೊಸ ಸೇರ್ಪಡೆ
Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ
Karkala: ನಕ್ಸಲ್ ಚಟುವಟಿಕೆ 15 ವರ್ಷ ಬಳಿಕ ಬಹಿರಂಗವಾದ ಕಾರಣ ಸರಕಾರ ತಿಳಿಸಲಿ: ಸುನೀಲ್
BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.