ಮಸ್ಕತ್ ಘಟಕಕ್ಕೆ ಐಸಿಎಐ ಶ್ರೇಷ್ಠ ಸಾಗರೋತ್ತರ ಘಟಕ ಪ್ರಶಸ್ತಿ
Team Udayavani, Feb 12, 2019, 6:01 AM IST
ಹೊಸದಿಲ್ಲಿ : ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇದರ ಪ್ಲಾಟಿನಂ ಜ್ಯುಬಿಲಿ ವಾರ್ಷಿಕ ಸಮಾರಂಭ ಕಳೆದ ಫೆ.4ರಂದು ಇಲ್ಲಿ ನಡೆದ ಸಂದರ್ಭದಲ್ಲಿ ಐಸಿಎಐ ಇದರ ಮಸ್ಕತ್ ಘಟಕಕ್ಕೆ “2018ರ ಶ್ರೇಷ್ಠ ಸಾಗರೋತ್ತರ ಘಟಕ ಪ್ರಶಸ್ತಿ’ ಯಾಗಿ ಸಂದ ಮೊದಲ ಬಹುಮಾನವನ್ನು ಮಸ್ಕತ್ ಘಟಕದ ಆಡಳಿತ ಮಂಡಳಿಯ ಸದಸ್ಯರಾಗಿರುವ ಸಿಎ ರಮಾನಂದ ಪ್ರಭು (ಕೋಶಾಧಿಕಾರಿ), ಸಿಎ ಭವಾನಿ ಪ್ರಸಾದ್ ಮತ್ತು ಸಿಎ ಶಾ ನವಾಜ್ ಖಾನ್ ಅವರು ಸ್ವೀಕರಿಸಿದರು. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಶ್ರೀ ರಾಜೀವ್ ಮಹರ್ಷಿ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದು ಉತ್ತಮವಾಗಿ ಕಾರ್ಯನಿರ್ವಹಿಸಿದ ಶಾಖೆಗಳಿಗೆ, ಮೆರಿಟ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.
ಚಾರ್ಟರ್ಡ್ ಅಕೌಂಟೆಂಟ್ಸ್‌ಗಳು ವಿಶ್ವದರ್ಜೆಯ ಶ್ರೇಷ್ಠ ಕೆಲಸಗಾರರಾಗಿದ್ದಾರೆ, ಮತ್ತು ಅವರನ್ನು ಜಾಗತಿಕವಾಗಿ ಗುರುತಿಸಲ್ಪಡುತ್ತಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ಸ್‌ಗಳಿಂದ ತುಂಬಾ ಹೆಚ್ಚಿನ ಕೆಲಸಗಳನ್ನು ನಿರೀಕ್ಷಿಸಲಾಗುತ್ತದೆ. ಆ ನಿಟ್ಟಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಗಳು ಮುಂಬರುವ ಸವಾಲುಗಳನ್ನು ತುಂಬಾ ಸಮರ್ಪಕವಾಗಿ ಎದುರಿಸಬಲ್ಲರು ಎಂಬ ವಿಶ್ವಾಸ ಹೊಂದಿರುವುದಾಗಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಶ್ರೀ ರಾಜೀವ್ ಮಹರ್ಷಿ ವಿಶ್ವಾಸ ವ್ಯಕ್ತಪಡಿಸಿದರು.
ರಮಾನಂದ ಪ್ರಭು ಮೂಲತಃ ನಾಯ್ಕನಕಟ್ಟೆಯವರು:
ಸಿಎ ರಮಾನಂದ ಪ್ರಭು ಅವರನ್ನು ಮಸ್ಕತ್ ಐಸಿಎಐ ಘಟಕದ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಅವರು ಬ್ಯುಸಿನೆಸ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಡಿಯನ್ ಸೋಶಿಯಲ್ ಕ್ಲಬ್ ನ ಕರ್ನಾಟಕ ವಿಭಾಗದ ಪ್ರತಿನಿಧಿಯಾಗಿದ್ದಾರೆ. ಅಷ್ಟೇ ಅಲ್ಲ 2018ರ ಸೆಪ್ಟೆಂಬರ್ ನಿಂದ ಉಡುಪಿ ಜಿಲ್ಲೆಯ ಬೈಂದೂರು ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.
ರಮಾನಂದ ಪ್ರಭು ಅವರು ಮಧ್ಯ ಏಷ್ಯಾ ಚಾರ್ಟರ್ಡ್ ಅಕೌಂಟೆಂಟ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಸಹ ಸಂಸ್ಥಾಪಕರು. ಸುಮಾರು 25ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಸಿಎ ಆಗಿ ಕಾರ್ಯನಿರ್ವಹಿಸಿದ್ದಾರೆ. ದೊಡ್ಡ ಬ್ಯಾಂಕ್ ಗಳು, ದೊಡ್ಡ ಕಂಪನಿ ಹಾಗೂ ಅಂತಾರಾಷ್ಟ್ರೀಯ ಆಡಿಟ್ ಫರ್ಮ್ ಗಳ ಜೊತೆ ಕಾರ್ಯನಿರ್ವಹಿಸಿದ್ದರು.
ರಮಾನಂದ ಪ್ರಭು ಅವರು ಮೂಲತಃ ಬೈಂದೂರು ತಾಲೂಕಿನ ನಾಯ್ಕನಕಟ್ಟೆಯ ಪ್ರಭು ಕೇರಿಯವರು. ದಿ.ಎನ್.ಪುಂಡಲೀಕ್ ಪ್ರಭು ಅವರ ಪುತ್ರರಾಗಿರುವ ರಮಾನಂದ ಅವರು ನಾಯ್ಕನಕಟ್ಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಬಳಿಕ ಕಂಬದಕೋಣೆಯ ಸರ್ಕಾರಿ ಪ್ರೌಢಶಾಲೆ, ಉಪ್ಪುಂದದ ಪ್ರಿ ಯೂನಿರ್ವಸಿಟಿ ಕಾಲೇಲು, 1990ರಲ್ಲಿ ಬೈಂದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ ಕಾಂ ಪದವಿ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.