ರಂಭಾಪುರಿ-ಕೇದಾರ ಜಗದ್ಗುರುಗಳಿಂದ ಸದಸ್ಯತ್ವಕ್ಕೆ ಚಾಲನೆ
Team Udayavani, Feb 12, 2019, 8:33 AM IST
ಕಲಬುರಗಿ: ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕಕ್ಕೆ ಸಾವಿರಕ್ಕಿಂತ ಕಡಿಮೆ ಸದಸ್ಯತ್ವ ಇರುವುದರಿಂದ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಸದಸ್ಯತ್ವ ಹೆಚ್ಚಿಸುವ ಕಾರ್ಯಕ್ಕೆ ಬಾಳೆಹೊನ್ನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಭಗವತ್ಪಾದರು ಮಹಾಸಭೆ ಸದಸ್ಯತ್ವಕ್ಕೆ ಚಾಲನೆ ನೀಡಿದರು.
ಮಹಾಸಭೆಗೆ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ದೊಡ್ಡ ಮಟ್ಟದಲ್ಲಿ ಮಹಾಸಭೆ ಬೆಳೆಯಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರು ಮಹಾಸಭೆ ಸದಸ್ಯರಾಗಿ ಧರ್ಮದ ಕೆಲಸದಲ್ಲಿ ನಿರತರಾಗಬೇಕು ಎಂದು ಉಭಯ ಜಗದ್ಗುರುಗಳು ಹೇಳಿದರು. ಮಹಾಸಭೆ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರೀಯ ಘಟಕಗಳಿಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆದರೆ ಕಲಬುರಗಿ ಮಹಾಸಭೆಗೆ ಚುನಾವಣೆ ನಡೆಯುತ್ತಿಲ್ಲ. ಸದಸ್ಯರು ಸಾವಿರಕ್ಕಿಂತ ಕಡಿಮೆ ಇರುವುದರಿಂದ ಚುನಾವಣೆಗೆ ಮುಂದಾಗಿಲ್ಲ. ಮಹಾಸಭೆ ಸ್ಥಾಪನೆಯಾಗಿ 115 ವರ್ಷಗಳಾದರು ಕಲಬುರಗಿಯಲ್ಲಿ ಮಹಾಸಭೆಗೆ ಸಾವಿರ ಸದಸ್ಯರು ಆಗದಿರುವುದು ವಿಚಿತ್ರವಾಗಿದೆ ಎಂದು ಸಂಘಟಕರು ಕಳವಳ ವ್ಯಕ್ತಪಡಿಸಿದರು.
ಅರುಣಕುಮಾರ ಪಾಟೀಲ, ಜಿ.ಡಿ. ಅಣಕಲ್, ಧರ್ಮಪ್ರಕಾಶ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಭೀಮರಾವ ಓಕಳಿ, ಶಿವಶರಣಪ್ಪ ಸಾಹು ಸಿರಿ, ಮಚ್ಚೆಂದ್ರನಾಥ ಮೂಲಗೆ, ರಾಜೇಶ ಹಾಗರಗಿ, ದಿವ್ಯಾ ಹಾಗರಗಿ ಇದ್ದರು. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಬೇಕು. ಸದಸ್ಯರಾಗಲು ಬಯಸುವವರು 9591794555, 9900948316, 9449309811 ಸಂಪರ್ಕಿಸಬೇಕು ಎಂದು ಎಂ. ಎಸ್. ಪಾಟೀಲ ನರಿಬೋಳ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.