2001ರ ಸಂಸತ್ ದಾಳಿ ಮತ್ತೆ ನೆನಪಿಗೆ:ಕಾಂಗ್ರೆಸ್ ಸಂಸದನ ಕಾರು ಅವಾಂತರ
Team Udayavani, Feb 12, 2019, 11:13 AM IST
ಹೊಸದಿಲ್ಲಿ : 2001ರ ಡಿಸೆಂಬರ್ 13ರಂದು ಪಾಕಿಸ್ಥಾನದ ಲಷ್ಕರ್ ಎ ತಯ್ಯಬ ಮತ್ತು ಜೈಶ್ ಎ ಮೊಹಮ್ಮದ್ ಉಗ್ರರು ಸಂಸತ್ತಿನ ಮೇಲೆ ಹಠಾತ್ ದಾಳಿ ನಡೆಸಿ ಒಂಬತ್ತು ಮಂದಿ ಭದ್ರತಾ ಸಿಬಂದಿಗಳನ್ನು ಕೊಂದಿದ್ದ ಘಟನೆಯನ್ನು ನೆನಪಿಸಿಕೊಳ್ಳುವ ಒಂದು ಆತಂಕದ ಪ್ರಸಂಗ ಇಂದು ಸಂಸತ್ ಆವರಣದಲ್ಲಿ ನಡೆಯಿತು.
ಸಂಸತ್ ಆವರಣವನ್ನು ನಿರ್ಗಮನದ ಗೇಟ್ ಮೂಲಕ ಕಾರೊಂದು ಒಳ ಪ್ರವೇಶಿಸಿದಾಗ ಭದ್ರತಾ ಪಡೆಗಳು ಒಡನೆಯೇ ಚುರುಕಾದರು. ಈ ಕಾರನ್ನು ಭದ್ರತಾ ಸಿಬಂದಿಗಳು ಕೂಡಲೇ ತಡೆದು ನಿಲ್ಲಿಸಿ ಅದರ ಕೂಲಂಕಷ ತಪಾಸಣೆಯನ್ನು ನಡೆಸಿದರು.
ತಪಾಸಣೆ ವೇಳೆ ಈ ಕಾರು ಕಾಂಗ್ರೆಸ್ ಲೋಕಸಭಾ ಸದಸ್ಯ ಡಾ. ತೋಕೋಚೋಮ್ ಮೆನ್ಯಾ ಅವರಿಗೆ ಸೇರಿದ್ದೆಂದು ಗೊತ್ತಾಯಿತು. ಇವರು ಇನ್ನರ್ ಮಣಿಪುರ ಕ್ಷೇತ್ರದ ಎಂಪಿ. ಇವರು ಕಾರು ‘Member of Parliament’ ಸ್ಟಿಕರ್ ಹೊಂದಿತ್ತು ಮತ್ತು ಅದರ ನಂಬ್ರ ಡಿಎಲ್ 12 ಸಿಎಚ್ 4897 ಎಂದಿತ್ತು.
ಬಿಗಿ ಭದ್ರತೆ ಇದ್ದ ಹೊರತಾಗಿಯೂ ಈ ಕಾರು ತಪ್ಪು ಗೇಟ್ ಮೂಲಕ ಹೇಗೆ ಒಳಗೆ ಬಂತೆಂಬುದು ಭದ್ರತಾ ಸಿಬಂದಿಗಳಿಗೆ ಯಕ್ಷ ಪ್ರಶ್ನೆಯಾಯಿತು.
ಸಂಸತ್ ಆವರಣವನ್ನು ಸಂಸದರ ಕಾರೊಂದು ಹಿಂಬದಿಯ ತಪ್ಪು ಗೇಟ್ ಮೂಲಕ ಪ್ರವೇಶಿಸಿದ ಘಟನೆಯ ಬಗ್ಗೆ ಈಗ ಕೂಲಂಕಷ ತನಿಖೆ ನಡೆಯುತ್ತಿದ್ದು ಭದ್ರತಾ ಲೋಪದ ಪ್ರಶ್ನೆಯನ್ನು ತೀವ್ರವಾಗಿ ವಿಚಾರಿಸಲಾಗುತ್ತಿದೆ.
2001ರಲ್ಲಿ ಉಗ್ರರಿಂದ ನಡೆದಿದ್ದ ಸಂಸತ್ ದಾಳಿಯಲ್ಲಿ ಹತರಾಗಿದ್ದ 9 ಭದ್ರತಾ ಸಿಬಂದಿಗಳ ಪೈಕಿ ಐವರು ದಿಲ್ಲಿ ಪೊಲೀಸರು, ಓರ್ವ ಮಹಿಳಾ ಸಿಆರ್‌ಪಿಎಫ್ ಟ್ರೂಪರ್, ಇಬ್ಬರು ಪಾರ್ಲಿಮೆಂಟ್ ವಾಚ್ ಮ್ಯಾನ್ ಗಳು, ಓರ್ವ ವಾರ್ಡ್ ಸ್ಟಾಫ್ ಮತ್ತು ಓರ್ವ ಗಾರ್ಡನರ್ ಸೇರಿದ್ದರು.
ದಾಳಿ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಪತ್ರಕರ್ತ ಅನಂತರ ಕೊನೆಯುಸಿರೆಳೆದಿದ್ದರು.
ಅಂದು ಸಂಸತ್ತನ್ನು ಪ್ರವೇಶಿಸಿದ್ದ ಐವರು ಉಗ್ರರ ಬಳಿ ಎಕೆ47 ರೈಫಲ್, ಗ್ರೆನೇಡ್ ಲಾಂಚರ್‌ಗಳು, ಪಿಸ್ತೂಲುಗಳು, ಗ್ರೆನೇಡ್‌ಗಳು ಇದ್ದವು. ಇವರೆಲ್ಲರನ್ನೂ ಭದ್ರತಾ ಪಡೆಗಳು ಹತ್ಯೆಗೈದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.