ಇರಾನಿ ಟ್ರೋಫಿ: ಶೇಷ ಭಾರತ ಕೈಹಿಡಿದ ಮಯಾಂಕ್, ವಿಹಾರಿ
Team Udayavani, Feb 12, 2019, 11:34 AM IST
ನಾಗ್ಪುರ: ರಣಜಿ ವಿಜೇತ ವಿದರ್ಭ ವಿರುದ್ಧ ಇರಾನಿ ಕಪ್ ಆಡಲಿಳಿದ ಅಜಿಂಕ್ಯ ರಹಾನೆ ನೇತೃತ್ವದ ಶೇಷ ಭಾರತ ತಂಡ ಮೊದಲ ದಿನದ ಆಟದ ಕೊನೆಯ ಓವರ್ ನಲ್ಲಿ ಕೊನೆಯ ವಿಕೆಟ್ ಕಳೆದುಕೊಳ್ಳುವುದರ ಮೂಲಕ 330 ಗೆ ಆಲ್ ಔಟ್ ಆಯಿತು. ಹನುಮ ವಿಹಾರಿ ಶತಕ ಸಿಡಿಸಿ ಮಿಂಚಿದರೆ, ಕನ್ನಡಿಗ ಮಯಾಂಕ್ ಅಗರ್ವಾಲ್ 95 ರನ್ ಗೆ ಔಟ್ ಆಗಿ ಶತಕ ವಂಚಿತರಾದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಶೇಷ ಭಾರತ ಸಾಧಾರಣ ಆರಂಭ ಪಡೆಯಿತು. ತಂಡದ ಮೊತ್ತ 46 ರನ್ ಆಗುವಷ್ಟರಲ್ಲಿ ಆರಂಭಿಕ ಆಟಗಾರ ಅನ್ಮೋಲ್ ಪ್ರೀತ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಅನ್ಮೋಲ್ ಗಳಿಕೆ ಕೇವಲ 15.
ಎರಡನೇ ವಿಕೆಟ್ ಗೆ ಜೊತೆಯಾದ ಮಯಾಂಕ್ ಮತ್ತು ಹನುಮ ವಿಹಾರಿ 125 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ನಾಯಕ ಅಜಿಂಕ್ಯ ರಹಾನೆ (13), ಶ್ರೇಯಸ್ ಅಯ್ಯರ್( 19) ದೊಡ್ಡ ಮೊತ್ತವನ್ನು ಕಲೆಹಾಕಲು ವಿಫಲರಾದರು. ವಿಕೆಟ್ ಕೀಪರ್ ಇಶಾನ್ ಕಿಶನ್ (2) ಕರ್ನಾಟಕದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ (7 ) ಸಂಪೂರ್ಣ ವಿಫಲರಾದರು. ಎಂಟನೇ ವಿಕೆಟ್ ರೂಪದಲ್ಲಿ ಔಟ್ ಆದ ಹನುಮ ವಿಹಾರಿ 211 ಎಸೆತ ಎದುರಿಸಿ 114 ರನ್ ಗಳಿಸಿ ಸರ್ವಾಟೆಗೆ ವಿಕೆಟ್ ಒಪ್ಪಿಸಿದರು.
ವಿದರ್ಭ ಪರ ರಣಜಿ ಫೈನಲ್ ಪಂದ್ಯದ ಹೀರೋ ಆದಿತ್ಯ ಸರ್ವಾಟೆ ಮತ್ತು ಅಕ್ಷಯ್ ವಾಖರೆ ತಲಾ 3 ವಿಕೆಟ್ ಪಡೆದರೆ, ರಜನೀಶ್ ಗುರಬಾನಿ ಎರಡು ವಿಕೆಟ್ ಪಡೆದರು.
ಶೇಷ ಭಾರತ ತಂಡ ಈ ಸಾಲಿನ ರಣಜಿ ಋತುವಿನ ಯಶಸ್ವಿ ಆಟಗಾರರಾದ ಸ್ನೆಲ್ ಪಟೇಲ್ ಮತ್ತು ರೋನಿತ್ ಮೋರೆಯನ್ನು ಬೆಂಚ್ ಕಾಯಿಸಿದರೆ ವಿದರ್ಭ ತಂಡ ದೇಶಿ ಕ್ರಿಕೆಟ್ ನ ಚಾಂಪಿಯನ್ ಆಟಗಾರ ವಸೀಂ ಜಾಫರ್ ರನ್ನು ಆಡುವ ಬಳಗದಿಂದ ಕೈ ಬಿಟ್ಟಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.