ಸಮಸ್ಯಾತ್ಮಕ ಮತಗಟ್ಟೆ ವರದಿ ನೀಡಿ: ಹೆಪ್ಸಿಬಾ
Team Udayavani, Feb 13, 2019, 1:00 AM IST
ಉಡುಪಿ: ಜಿಲ್ಲೆಯಲ್ಲಿನ ಸಮಸ್ಯಾತ್ಮಕ ಮತಗಟ್ಟೆಯ ಸಮಗ್ರ ವರದಿಯನ್ನು ಮುಂದಿನ 4 ದಿನಗಳಲ್ಲಿ ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿ¨ªಾರೆ.
ಮಂಗಳವಾರ ರಜತಾದ್ರಿಯಲ್ಲಿ ನಡೆದ ಜಿಲ್ಲೆಯ ಸೆಕ್ಟರ್ ಅಧಿಕಾರಿಗಳ, ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವರದಿಯಲ್ಲಿ ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅತೀ ಕಡಿಮೆ ಮತದಾನವಾದ, ಮತ ದಾರರಿಗೆ ಬೆದರಿಕೆ ಉಂಟುಮಾಡುವ, ಮತದಾರರು ಬರಲು ಹೆದರಿಕೆಯುಳ್ಳ ಮತಗಟ್ಟೆಗಳ ಬಗ್ಗೆ ಸಂಪೂರ್ಣ ವಿವರವನ್ನು ನೀಡಬೇಕು. ಈ ಬಾರಿಯ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲು ಯಾವುದೇ ಅಡೆತಡೆಗಳಿದ್ದರೆ ಕೂಡಲೇ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಬಾರಿ ಅತೀ ಕಡಿಮೆ ಮತದಾನವಾದ ಮತ ಗಟ್ಟೆಗೆ ತೆರಳಿ ನೈಜ ಪರಿಸ್ಥಿತಿಯ ವರದಿ ನೀಡಬೇಕು. ಒಂದು ಮತಗಟ್ಟೆಯಲ್ಲಿ ಒಬ್ಬ ಅಭ್ಯರ್ಥಿಗೆ ಶೇ. 75ಕ್ಕಿಂತಲೂ ಹೆಚ್ಚು ಮತದಾನವಾದ ಪ್ರದೇಶದಲ್ಲಿ ಮತದಾರರಿಗೆ ಭಯ, ಆಮಿಷ ನೀಡಿರುವಂತಹ ಘಟನೆಗಳು ನಡೆದಿದ್ದರೆ ನೈಜ ವರದಿ ನೀಡಿ, ಸ್ಥಳೀಯ ಬಿಎಲ…ಒಗಳು, ಸೆಕ್ಟರ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ, ಫೆ.16ರ ಒಳಗೆ ವರದಿ ನೀಡಬೇಕು ಎಂದರು.
ಚುನಾವಣೆ ಕರ್ತವ್ಯದಲ್ಲಿ ಪ್ರತಿಯೊಬ್ಬರೂ ಸಂಪೂರ್ಣ ವಾಗಿ ತೊಡಗಿಕೊಳ್ಳಬೇಕು. ಲೋಪಗಳಿಗೆ ಆಸ್ಪದ ನೀಡದೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಲೋಕಸಭಾ ಚುನಾವಣೆಗಾಗಿ 92 ಜನ ಸೆಕ್ಟರ್ ಅಧಿಕಾರಿಗಳು ಮತ್ತು 132 ಪೊಲೀಸ್ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಎಎಸ್ಪಿ ಕುಮಾರ ಚಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.