ತಿಂಗಳುಗಳಿಂದ ಸಾಮಾಜಿಕ ಭದ್ರತಾ ಪಿಂಚಣಿ ಇಲ್ಲ
Team Udayavani, Feb 13, 2019, 1:00 AM IST
ಮಣಿಪಾಲ: ಒಂದೇ ಹೆಸರಿನ ವಿವಿಧ ವ್ಯಕ್ತಿಗಳು ಒಂದೇ ಆಧಾರ್ ಕಾರ್ಡ್ ಹೊಂದಿರು ವುದು ಮತ್ತು ಇಬ್ಬರು ಫಲಾನುಭವಿಗಳಿಗೆ ಒಂದೇ ಆಧಾರ್ ದಾಖಲೆ ಸಂಪರ್ಕ (ಲಿಂಕ್)ಗೊಂಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಗಳ ನಿರ್ದೇಶನಾಲಯವು 6 ತಿಂಗಳಿಂದ ಜಿಲ್ಲೆಯಲ್ಲಿ ಪಿಂಚಣಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಇದರಿಂದ 700ಕ್ಕೂ ಹೆಚ್ಚು ಮಂದಿ ಅರ್ಹ ಫಲಾನುಭವಿಗಳು ತಿಂಗಳ ಪಿಂಚಣಿಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಏನಿದು ಡಿ-ಡ್ನೂಪ್ಲಿಕೇಶನ್?
ಸಾಮಾಜಿಕ ಭದ್ರತಾ ಪಿಂಚಣಿಗಳ ಫಲಾನುಭವಿಗಳ ಪಟ್ಟಿಯಲ್ಲಿ ಆಧಾರ್ ಪುನರಾವರ್ತನೆಯನ್ನು ಡಿ- ಡ್ನೂಪ್ಲಿಕೇಶನ್ ತಡೆಯಲಿದೆ. ಇದರಿಂದ ಒಂದೇ ಆಧಾರ್ ಸಂಪರ್ಕ ಹೊಂದಿರುವ ಒಂದಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.
ಒಂದು ಮನೆಯಲ್ಲಿ ಇಬ್ಬರು ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳಿದ್ದರೆ, ಪಿಂಚಣಿ ಪಡೆಯಲು ತಾಯಿ ಅಥವಾ ತಂದೆಯ ಒಂದೇ ಆಧಾರ್ ಕಾರ್ಡನ್ನು ಇಬ್ಬರ ಪಿಂಚಣಿ ಪಾವತಿಗೂ ಲಿಂಕ್ ಮಾಡಿದಾಗ ಪಾವತಿಯ ಆಧಾರ್ ಕಾರ್ಡ್ ಒಂದೇ ಎಂದು ತಂತ್ರಾಂಶ ಪರಿಗಣಿಸುತ್ತದೆ. ಇದರಿಂದ ಅರ್ಹರಾಗಿದ್ದರೂ ಒಬ್ಬರ ಪಿಂಚಣಿ ಸ್ಥಗಿತಗೊಳ್ಳುತ್ತದೆ. ತಂದೆ-ತಾಯಿ ಇಬ್ಬರೂ ಇದ್ದಲ್ಲಿ ಪ್ರತ್ಯೇಕ ಆಧಾರ್ ಸಂಪರ್ಕ ಕಲ್ಪಿಸಬಹುದು. ತಾಯಿ ಮಾತ್ರ ಇದ್ದಲ್ಲಿ ಒಂದೇ ಆಧಾರ್ ಲಿಂಕ್ ಮಾಡಿರುವುದು ಸಕ್ರಮ ಎಂಬುದಾಗಿ ಗ್ರಾಮ ಕರಣಿಕರು ವರದಿ ಸಲ್ಲಿಸಿದರೆ ಸಮಸ್ಯೆ ಬಗೆಹರಿಯಲಿದೆ. ಇತರ ಪಿಂಚಣಿಗಳಲ್ಲೂ ಫಲಾನುಭವಿಗಳು ಪಾವತಿ ಸ್ವೀಕೃತಿ ಪಡೆಯುವುದು ಸಾಧ್ಯವಿಲ್ಲದಾಗ ಅವರ ಪರವಾಗಿ ಸ್ವೀಕರಿಸುವವರ ಆಧಾರ್ ಇಬ್ಬರಿಗೆ ಸಂಪರ್ಕಗೊಂಡಿದ್ದಲ್ಲಿ ಒಬ್ಬರ ಪಿಂಚಣಿ ಸ್ಥಗಿತಗೊಳ್ಳುತ್ತದೆ.
ಪೆರ್ಣಂಕಿಲದ ಒಂದು ಪ್ರಕರಣದಲ್ಲಿ ಪತಿ ನಿಧನ ಹೊಂದಿದ್ದರಿಂದ ಮಹಿಳೆಯೊಬ್ಬರು ಇಬ್ಬರು ಅಂಗವಿಕಲ ಮಕ್ಕಳಿಗೆ ತಮ್ಮ ಆಧಾರ್ ಪಾವತಿ ಸ್ವೀಕೃತಿಗೆ ಸಂಪರ್ಕ ಕಲ್ಪಿಸಿದ್ದರು. ಈಗ ಡಿ-ಡೂಪ್ಲಿಕೇಶನ್ ಸಮಸ್ಯೆಯಿಂದ ಒಬ್ಬರ ಪಿಂಚಣಿ ಸ್ಥಗಿತಗೊಂಡಿದೆ. ಇಂಥ ಸಮಸ್ಯೆಗಳು ಹಲವೆಡೆ ಇವೆ.
ಪರಿಹಾರ ಹೇಗೆ?
ಅರ್ಹ ಪ್ರಕರಣಗಳಲ್ಲಿ ಪಿಂಚಣಿ ಸ್ಥಗಿತಗೊಂಡ ಫಲಾನುಭವಿಗಳ ಮನೆಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುತ್ತಾರೆ. ಇವನ್ನು ಜಿಲ್ಲಾ ಮಟ್ಟದಲ್ಲಿ ಕ್ರೋಡೀಕರಿಸಿ ನಿರ್ದೇಶನಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಪರಿಷ್ಕರಿಸಿ ಅರ್ಹರಿಗೆ ಸೌಲಭ್ಯ ಮುಂದುವರಿಸಲಾಗುತ್ತದೆ.
ವಿಳಂಬದಿಂದ ಪರದಾಟ
ಪಿಂಚಣಿ ಸ್ಥಗಿತಗೊಂಡು ಸುಮಾರು 6 ತಿಂಗಳಿಂದ ಫಲಾನುಭವಿಗಳು ಪರದಾಡುವಂತಾಗಿದೆ. ಪಿಂಚಣಿಗೆ ಆಧಾರ್ ಸಂಪರ್ಕ ಕಲ್ಪಿಸಿದ ಬಳಿಕ ಡಿ-ಡ್ನೂಪ್ಲಿಕೇಶನ್ ಪ್ರಕ್ರಿಯೆ ಆರಂಭಿಸಲಾಗಿದೆ. ಆಧಾರ್ ಲಿಂಕ್ ಇಲ್ಲದೆ ಸ್ಥಗಿತಗೊಂಡಿದ್ದ ಪಿಂಚಣಿಗಳನ್ನು ಟ್ರೆಜರಿ ಮಟ್ಟದಲ್ಲಿ ಆಧಾರ್ ಸೇರಿಸಿ ಸಕ್ರಿಯಗೊಳಿಸಲಾಗಿತ್ತು.
ಆಧಾರ್ ಡ್ನೂಪ್ಲಿಕೇಶನ್‌ನಿಂದ ಪಿಂಚಣಿ ತಾತ್ಕಾಲಿಕ ಸ್ಥಗಿತ ಗೊಂಡಿದ್ದು, ಹಂತ ಹಂತವಾಗಿ ಪ್ರಸ್ತಾವನೆ ಗಳನ್ನು ಬೆಂಗಳೂರಿನ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯಕ್ಕೆ ಕಳುಹಿಸಲಾಗುತ್ತಿದೆ. ಎಲ್ಲ ಪ್ರಕರಣಗಳ ಭೌತಿಕ ಪರಿಶೀಲನೆ ಪೂರ್ಣಗೊಂಡಿದೆ.
-ಕೆ. ವಿದ್ಯಾ ಕುಮಾರಿ, ಅಪರ ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBK11: ಮಂಜಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.