ಬಂಟರ ಸಂಘ ಪಿಂಪ್ರಿ-ಚಿಂಚ್ವಾಡ್ 24ನೇ ವಾರ್ಷಿಕೋತ್ಸವ ಸಂಭ್ರಮ
Team Udayavani, Feb 13, 2019, 5:29 PM IST
ಪುಣೆ: ನಮ್ಮ ತುಳುನಾಡನ್ನು ಬಿಟ್ಟು ಹೊರನಾಡನ್ನು ಕರ್ಮ ಭೂಮಿಯನ್ನಾಗಿಸಿಕೊಂಡರೂ ಕಠಿನ ದುಡಿಮೆ, ದೈವ ದೇವರ ಅನುಗ್ರಹ, ಹಿರಿಯರ ಆಶೀರ್ವಾದದ ಶ್ರೀರಕ್ಷೆಯಿಂದ ಇಂದು ಬಂಟ ಸಮಾಜ ಕೇವಲ ಹೊಟೇಲ್ ಉದ್ಯಮದಲ್ಲಿ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆಯೊಂದಿಗೆ ಗುರುತಿಸಿಕೊಂಡು ಪ್ರತಿಷ್ಠಿತ ಸಮಾಜವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ನಾವು ಕೇವಲ ನಮ್ಮ ಸಮಾಜ ಮಾತ್ರವಲ್ಲ ಅನ್ಯ ಸಮಾಜವನ್ನೂ ಪ್ರೀತಿಸಿಕೊಂಡು ಸಹಕಾರ ನೀಡುತ್ತಾ ಬಂದವರಾಗಿದ್ದೇವೆ. ಇಂದು ನಮ್ಮ ಸಮಾಜದಲ್ಲಿ ಬಹಳಷ್ಟು ಬಂಧುಗಳು ಜೀವನದಲ್ಲಿ ನೊಂದು ಅನಾರೋಗ್ಯ, ಶಿಕ್ಷಣಕ್ಕೆ ಹಣ ಹೊಂದಿಸಲಾಗದೆ ಆದರೆ ಯಾರೊಂದಿಗೂ ಕೈಚಾಚದೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಕಷ್ಟದ ದಿನಗಳಿಂದಲೇ ಜೀವನ ಸಾಗಿಸುತ್ತಿ¨ªಾರೆ. ಅಂತಹ ಸಮಾಜ ಬಾಂಧವರನ್ನು ನಾವು ಗುರುತಿಸಿ ಅವರ ಕಷ್ಟಗಳಿಗೆ ಮಾನವೀಯತೆಯಿಂದ ಸ್ಪಂದಿಸಿ ಸಾಧ್ಯವಾದಷ್ಟು ನೆರವು ನೀಡಿ ಕಣ್ಣೊರೆಸುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದು ಭವಾನಿ ಫೌಂಡೇಶನ್ ಸ್ಥಾಪಕಾಧ್ಯಕ್ಷ ರಾದ ಕುಸುಮೋಧರ ಡಿ. ಶೆಟ್ಟಿ ನುಡಿದರು.
ಅವರು ಫೆ. 9ರಂದು ಚಿಂಚಾÌಡ್‌ನ ರಾಮಕೃಷ್ಣ ಮೊರೆ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಪಿಂಪ್ರಿ-ಚಿಂಚಾÌಡ್ ಇದರ 24 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯ ಎಷ್ಟೇ ದೊಡ್ಡವನಾದರೂ ತಾನು ಬೆಳೆದು ಬಂದ ಕಷ್ಟದ ದಿನಗಳನ್ನು ಮರೆಯಬಾರದು. ಅಂತಹ ನೆನಪುಗಳೇ ಜೀವನವನ್ನು ಪರಿಪೂರ್ಣಗೊಳಿಸುವಲ್ಲಿ ಸಾಧನೆಗೆ ಸ್ಫೂರ್ತಿ ನೀಡುತ್ತವೆ. ಮುಖ್ಯವಾಗಿ ತಾಯಂದಿರು ನಮ್ಮ ಮಕ್ಕಳಿಗೆ ವಿದ್ಯೆಯೊಂದಿಗೆ ನಮ್ಮ ತುಳು ಭಾಷೆ, ಸಂಸ್ಕೃತಿ, ಭವಿಷ್ಯದ ಜೀವನವನ್ನು ಉತ್ತಮ ಹಾದಿಯಲ್ಲಿ ಮುನ್ನಡೆಸುವ ಮೌಲಿಕ ಸಂಸ್ಕಾರವನ್ನು ನೀಡುವ ಅಗತ್ಯತೆಯಿದೆ. ನಮ್ಮ ಸಮಾಜ ಶ್ರೇಷ್ಠ ಸಮಾಜವೆಂಬ ಹೆಗ್ಗಳಿಕೆ ಹೊಂದಿದ್ದರೂ ಇಂದು ನಮ್ಮ ಸಮಾಜದಲ್ಲಿ ಸಂಸ್ಕಾರದ ಕೊರತೆಯಿಂದ ಅಂತರ್ಜಾತಿ ವಿವಾಹಗಳು ಹೆಚ್ಚಾಗುತ್ತಿರುವುದು ಆತಂಕದ ವಿಚಾರವಾಗಿದೆ. ಇದರ ಬಗ್ಗೆ ನಾವು ಜಾಗರೂಕರಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ. ನಾವು ನಮ್ಮ ಸಮಾಜದ ಸಂಘಗಳನ್ನು ಗೌರವ ಭಾವನೆಯಿಂದ ಕಾಣಬೇಕಾಗಿದೆ ಯಾಕೆಂದರೆ ನಮ್ಮ ಹಿರಿಯರು ಇಂತಹ ಸಂಘಗಳನ್ನು ಸ್ಥಾಪಿಸಿರುವುದರಿಂದಲೇ ನಾವಿಂದು ಎಲ್ಲರೆದುರಲ್ಲಿ ಹೆಮ್ಮೆ ಯಿಂದ ಗುರುತಿಸಿಕೊಳ್ಳುತ್ತಿದ್ದೇವೆ. ಪಿಂಪ್ರಿ-ಚಿಂಚಾÌಡ್ ಬಂಟರ ಸಂಘವು ಬಹಳ ಉತ್ತಮವಾದ ಕಾರ್ಯಕ್ರಮಗಳ ಮೂಲಕ ಸಮಾಜ ಬಾಂಧವರ ಮಕ್ಕಳಿಗೆ ಸೂಕ್ತ ವೇದಿಕೆಯನ್ನು ಒದಗಿಸುವುದಲ್ಲದೆ ಸಾಮಾಜಿಕ ಒಗ್ಗಟ್ಟನ್ನೂ ಕಾಯ್ದುಕೊಂ ಡಿರುವುದಕ್ಕೆ ಅಭಿನಂದನೆಗಳು. ಸಂತೋಷ್ ಶೆಟ್ಟಿಯವರು ಸಮಾಜ ಬಾಂಧವರ ಕಣ್ಮಣಿಯಾಗಿದ್ದು ಪುಣೆಯಲ್ಲಿ ಸಮಾಜದ ಮೇಲಿನ ಪ್ರೀತಿಯೊಂದಿಗೆ ಬಂಟರ ಭವನವನ್ನು ತನ್ನ ನೇತೃತ್ವದಲ್ಲಿ ನಿರ್ಮಿಸಿ ಮಾಡಿದ ಸಾಧನೆ ಗುರುತರವಾಗಿದೆ ಎಂದರು.
ಸಂಘದ ಅಧ್ಯಕ್ಷರಾದ ವಿಜಯ್ ಎಸ್. ಶೆಟ್ಟಿ ಕಟ್ಟಣಿಗೆ ಮನೆ ಬೋರ್ಕಟ್ಟೆ ಇವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ಸಮಾಜದ ಅಭ್ಯುದಯದ ಕಾಯಕದಲ್ಲಿ ತೊಡಗಿಸಿಕೊಳ್ಳುವ ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ನೇತೃತ್ವ ವಹಿಸುವ ಅವಕಾಶ ಒದಗಿರುವುದು ನನ್ನ ಸೌಭಾಗ್ಯವಾಗಿದೆ. ನಮ್ಮ ಸಂಘದ ಇಂದಿನ ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳು ಆಗಮಿಸಿ ಯುವ ಪೀಳಿಗೆಗೆ ಮಾರ್ಗದರ್ಶನ, ಸ್ಫೂರ್ತಿ ನೀಡಿರುವುದಕ್ಕೆ, ಪುಣೆ ಬಂಟರ ಭವನವನ್ನು ತನ್ನ ನೇತೃತ್ವದಲ್ಲಿ ನಿರ್ಮಿಸಿದ ಸಾಧನೆಗೈದ ಬಂಟರ ಅನಘÂì ರತ್ನ ಸಂತೋಷ್ ಶೆಟ್ಟಿಯವರು ಸಂಘದ ಪ್ರೀತಿಯಸಮ್ಮಾನ ಸ್ವೀಕರಿಸಿರುವುದಕ್ಕೆ, ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಕಾರ್ಯಕ್ರಮದ ಯಶಸ್ಸಿಗೆ ನೀಡಿರುವ ಸಹಕಾರಕ್ಕೆ, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಎಲ್ಲ ಮಕ್ಕಳಿಗೆ ಸದಸ್ಯರಿಗೆ ಚಿರಋಣಿಯಾಗಿದ್ದೇನೆ. ಸಂಘವು ಆರ್ಥಿಕ ಅಡಚಣೆಯಲ್ಲಿರುವ ಮಕ್ಕಳಿಗೆ, ತುರ್ತು ವೈದ್ಯಕೀಯ ನೀಡುವಲ್ಲಿ ನಮ್ಮ ಸಂಘವು ಸದಾ ಕ್ರಿಯಾಶೀಲವಾಗಿದ್ದು ಭವಿಷ್ಯದಲ್ಲಿ ಇದಕ್ಕಾಗಿ ಶಾಶ್ವತ ನಿಧಿಯ ಕ್ರೋಡೀಕರಣಕ್ಕೆ ಸಂಸ್ಥೆ ಮುಂದಾಗಲಿದೆ, ನಮ್ಮ ಸಂಘವನ್ನು ಮಾದರಿ ಸಂಘವಾಗಿಸುವಲ್ಲಿ ಸಮಾಜ ಬಾಂಧವರೆಲ್ಲರ ಸಹಕಾರ ಅಗತ್ಯ ಎಂದು ನುಡಿದು ಶುಭಹಾರೈಸಿದರು.
ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ವಿಜಯಬ್ಯಾಂಕ್, ಉಪಾಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ, ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಸಮಿತ್ ಚೌಟ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಪ್ರಿಯಾ ಜೆ. ಶೆಟ್ಟಿ, ಜ್ಯೋತಿ ವಿಜಯ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಪುಣೆಯಲ್ಲಿ ನಿಸ್ವಾರ್ಥ ಸಮಾಜಸೇವೆಯ ಮೂಲಕ ಸಮಾಜ-ಬಾಂಧವರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿ ತನ್ನ ನೇತೃತ್ವದಲ್ಲಿ ಪುಣೆ ಬಂಟರ ಭವನವನ್ನು ನಿರ್ಮಿಸಿ ಸಮಾಜಕ್ಕೆ ನೀಡಿದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ದಿವ್ಯಾ ಎಸ್. ದಂಪತಿಯನ್ನು ಸಂಘದ ವರ್ಷದ ಸಾಧಕರನ್ನಾಗಿ ಶಾಲು ಹೊದೆಸಿ, ಪೇಟ ತೊಡಿಸಿ, ಬೃಹತ್ ಹಾರ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ-ಪತ್ರಗಳನ್ನು ನೀಡಿ ವಿಶೇಷ ರೀತಿಯಿಂದ ಸಮ್ಮಾನಿಸಲಾಯಿತು.
ಪ್ರಾರ್ಥನೆ ಹಾಗೂ ಬಂಟ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ರೇಖಾ ಕೆ. ಶೆಟ್ಟಿ, ತಾರಾ ಜೆ. ಶೆಟ್ಟಿ ಹಾಗೂ ಸುನೀತಾ ಜಿ. ಶೆಟ್ಟಿ ಪ್ರಾರ್ಥಿಸಿದರು. ಅತಿಥಿ-ಗಣ್ಯರನ್ನು ಶಾಲು, ಸ್ಮರಣಿಕೆ, ಪುಷ್ಪಗುತ್ಛದೊಂದಿಗೆ ಸತ್ಕರಿಸಲಾಯಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ರಾಕೇಶ್ ಎ. ಶೆಟ್ಟಿ ಬೆಳ್ಳಾರೆ ಸ್ವಾಗತಿಸಿದರು. ಅವಿನಾಶ್ ಶೆಟ್ಟಿ ಮಂದಾಡಿಗುತ್ತು, ನಿಧೀಶ್ ಶೆಟ್ಟಿ ನಿಟ್ಟೆ ಅತಿಥಿಗಳನ್ನು ಪರಿಚಯಿಸಿದರು. ಗೌರವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿ ಯನ್ನು ಹಾಗೂ ಸಮ್ಮಾನ ಪತ್ರವನ್ನು ವಾಚಿಸಿದರು. ಮಹಿಳಾ ವಿಭಾಗದ ವರದಿಯನ್ನು ಮಹಿಳಾ ವಿಭಾಗದ ಕಾರ್ಯದರ್ಶಿ ತಾರಾ ಜೆ. ಶೆಟ್ಟಿ ವಾಚಿಸಿದರು. ಸ್ನೇಹಾ ಸುಧಾಕರ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರೆ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀನಿಧಿ ಶೆಟ್ಟಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸದಸ್ಯರು ಹಾಗೂ ಮಕ್ಕಳಿಂದ ವಿವಿಧ ನೃತ್ಯ ವೈವಿಧ್ಯಗಳು, ಹಾಸ್ಯ ಪ್ರಹಸನ ಹಾಗೂ ಕಿರುನಾಟಕ ಪ್ರದರ್ಶನ ನಡೆಯಿತು. ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಎರ್ಮಾಳ್ ನಾರಾಯಣ ಕೆ. ಶೆಟ್ಟಿ, ಎರ್ಮಾಳ್ ವಿಶ್ವನಾಥ ಶೆಟ್ಟಿ, ಕೆ. ಪದ್ಮನಾಭ ಶೆಟ್ಟಿ, ಎರ್ಮಾಳ್ ಸೀತಾರಾಮ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಮಹೇಶ್ ಹೆಗ್ಡೆ ಕಟ್ಟಿಂಗೇರಿಮನೆ ಹಾಗೂ ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಪದಾಧಿಕಾರಿಗಳಾದ ಶ್ರೀನಿಧಿ ಶೆಟ್ಟಿ, ಪ್ರಭಾಕರ ಶೆಟ್ಟಿ ಕೃಷ್ಣನಗರ, ಪ್ರಭಾಕರ ಶೆಟ್ಟಿ ಬೋರ್ಕಟ್ಟೆ, ನಿಧೀಶ್ ಶೆಟ್ಟಿ ನಿಟ್ಟೆ, ಪ್ರಭಾಕರ ಶೆಟ್ಟಿ ಬಿರ್ಲಾ, ಜೀವನ್ ಶೆಟ್ಟಿ ದೊಂಡೇರಂಗಡಿ, ರವಿರಾಜ್ ಶೆಟ್ಟಿ ಲೋನವಾಲಾ, ಜಯ ಶೆಟ್ಟಿ ರೆಂಜಾಳ ಮತ್ತು ರಾಜಾರಾಮ್ ಶೆಟ್ಟಿ ತಲೆಗಾಂವ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಎಸ್. ಶೆಟ್ಟಿ, ಕಾರ್ಯದರ್ಶಿ ತಾರಾ ಜೆ. ಶೆಟ್ಟಿ, ಕೋಶಾಧಿಕಾರಿ ಸುನೀತಾ ಜಿ. ಶೆಟ್ಟಿ, ಸದಸ್ಯರಾದ ಸ್ಮಿತಾ ಚೌಟ, ಸುನೀತಾ ಆರ್. ಶೆಟ್ಟಿ, ಸೌಮ್ಯಾ ಶೆಟ್ಟಿ, ಮಲ್ಲಿಕಾ ಡಿ. ಶೆಟ್ಟಿ ಮತ್ತು ಜ್ಯೋತಿ ವಿ. ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಕ್ಷಮಾ ಎಲ್. ಶೆಟ್ಟಿ, ಪ್ರೇಮಾ ವಿ. ಶೆಟ್ಟಿ, ಜಯಲಕ್ಷ್ಮೀ ಪಿ. ಶೆಟ್ಟಿ ಮತ್ತು ತನುಜಾ ಎ. ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ನಮ್ಮ ಸಮಾಜವು ಇಷ್ಟೊಂದು ಮುಂದುವರಿದು ಶ್ರೇಷ್ಠ ಸ್ಥಾನದಲ್ಲಿ ಗುರುತಿಸಿಕೊಂಡಿರುವುದಕ್ಕೆ ಬಂಟರ ನಿಸ್ವಾರ್ಥ ಸಮಾಜಸೇವೆ ಹಾಗೂ ಪರರೆಲ್ಲರನ್ನೂ ನಮ್ಮವರೆಂದು ಪ್ರೀತಿಸುವ ಗುಣ ಮುಖ್ಯ ಕಾರಣವಾಗಿದೆ. ಅನ್ಯ ಬಂಧುಗಳ ಕಷ್ಟಗಳಿಗೆ ಸ್ಪಂದಿಸಿ ಆಸರೆಯಾಗುವ ಶಕ್ತಿಯನ್ನು ನಮಗೆ ದೇವರು ಕರುಣಿಸಿರುವುದು ಬಂಟರ ವಿಶೇಷತೆಯಾಗಿದೆ. ನಿಸ್ವಾರ್ಥ ಭಾವದಿಂದ ಸಮಾಜದ ಒಳಿತನ್ನು ಬಯಸಿ ತನ್ನನ್ನು ಸಮಾಜ ಸೇವೆಗೆ ಸಮರ್ಪಿಸಿಕೊಂಡವರಿಗೆ ದೇವರ ಅನುಗ್ರಹ ಖಂಡಿತಾ ಇದೆ ಎನ್ನುವುದಕ್ಕೆ ಪುಣೆಯ ಸಾಧಕ ಸಂತೋಷ್ ಶೆಟ್ಟಿಯವರು ಉತ್ತಮ ಸಾಕ್ಷಿಯಾಗಿ¨ªಾರೆ. ಜನ್ಮಭೂಮಿಗೂ, ಕರ್ಮಭೂಮಿಗೂ ಅನನ್ಯ ಸೇವೆ ಸಲ್ಲಿಸುತ್ತಿರುವ ಕೆ. ಡಿ. ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿಯವರು ಬಂಟ ಸಮಾಜಕ್ಕೆ ಮಾದರಿಯಾಗಿ ಗುರುತಿಸಿಕೊಳ್ಳುತ್ತಾರೆ. ಮುಂದಿನ ವರ್ಷ ಬೆಳ್ಳಿ ಹಬ್ಬದ ಸಂಭ್ರಮವನ್ನು ಕಾಣಲಿರುವ ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಸಾಮಾಜಿಕ ಕಾರ್ಯಗಳು ಸಮಾಜದ ಏಳಿಗೆಗೆ ಒಳಿತಾಗಲಿ
-ಪೇತ್ರಿ ವಿಶ್ವನಾಥ ಶೆಟ್ಟಿ ಮುಂಬಯಿ ,
ಕವಿ, ಲೇಖಕ, ಕಥೆಗಾರ
ಪಿಂಪ್ರಿ-ಚಿಂಚಾÌಡ್ ಬಂಟರ ಸಂಘ ಪ್ರೀತ್ಯಾಭಿಮಾನದಿಂದ ಸಲ್ಲಿಸಿದ ಗೌರವಕ್ಕೆ ಋಣಿಯಾಗಿದ್ದೇನೆ. ಈ ಅರ್ಥಪೂರ್ಣವಾದ ಸಮ್ಮಾನವನ್ನು ಭವನದ ಕಾರ್ಯಕ್ಕೆ ಸಹಕರಿಸಿದ ಮಹಾದಾನಿಗಳಿಗೆ, ಸಂಘದ ಪದಾಧಿಕಾರಿಗಳಿಗೆ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಪ್ರಾದೇಶಿಕ ಸಮಿತಿಗಳ ಸದಸ್ಯರಿಗೆ ಸಮರ್ಪಿಸುತ್ತಿದ್ದೇನೆ. ನಾನು ಬದುಕಿನಲ್ಲಿ ಬಾಲ್ಯದ ದಿನಗಳಲ್ಲಿ ಕಂಡ ಕಷ್ಟದ ದಿನಗಳೇ ಇಂದು ಯಶಸ್ಸಿನ ಮಾರ್ಗವಾಗಿ ಬದಲಾಗಿದೆ. ನಾವು ಬಂಟ ಸಮಾಜ-ಬಾಂಧವರು ನಮ್ಮೊಳಗೆ ಯಾವುದೇ ವೈಷಮ್ಯ ಬೆಳೆಸಿಕೊಳ್ಳದೆ ನಮ್ಮಲ್ಲಿ ನಡೆಯುವ ಸಾಮಾಜಿಕ ಸಮಸ್ಯೆಗಳಿಗೆ ನಾವೇ ಪರಿಹಾರವನ್ನು ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ. ಪುಣೆ ಬಂಟರ ಸಂಘದ ಮೂಲಕ ಭವಿಷ್ಯದ ಸಾಮಾಜಿಕ ಚಿಂತನೆಗಳಿಗೆ ದಾರಿ ದೀಪವಾಗಲೆಂಬ ಆಶಯದೊಂದಿಗೆ ಕಲ್ಪವೃಕ್ಷ ಎನ್ನುವ ಯೋಜನೆಯನ್ನು ಆರಂಭಿಸಿದ್ದೇವೆ. ಸಮಾಜ ಬಾಂಧವರ ಪ್ರೋತ್ಸಾಹ ಅಗತ್ಯ.
-ಸಂತೋಷ್ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು ,
ಅಧ್ಯಕ್ಷರು , ಪುಣೆ ಬಂಟರ ಸಂಘ
ಚಿತ್ರ- ವರದಿ : ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.