ಕ್ಯಾಲಿಕಟ್ ಹೀರೋಸ್ ಅಜೇಯ ಓಟ
Team Udayavani, Feb 14, 2019, 12:55 AM IST
ಕೊಚ್ಚಿ: ಪ್ರೊ ವಾಲಿಬಾಲ್ ಲೀಗ್ ಕೊಚ್ಚಿ ಚರಣದ ಮುಖಾಮುಖೀಯಲ್ಲಿ ಕ್ಯಾಲಿಕಟ್ ಹೀರೋಸ್ ಅಜೇಯ ಅಭಿಯಾನ ಮುಂದುವರಿಸಿದೆ. ಬುಧವಾರದ ಪಂದ್ಯದಲ್ಲಿ ಅಹ್ಮದಾಬಾದ್ ಡಿಫೆಂಡರ್ಗೆ 4-1 ಅಂತರದ ಸೋಲುಣಿಸಿ ಸತತ 5 ಜಯ ಸಾಧಿಸಿ ಮೆರೆದಿದೆ.
ಕೂಟದ ಆರಂಭದಿಂದಲೂ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದ ಕ್ಯಾಲಿಕಟ್, ಬುಧವಾರ ಮೇಲಾಟದಲ್ಲಿ ನಾಯಕ ಜೆರೋಮ್ ವಿನಿತ್ (17 ಅಂಕ), ಪೌಲ್ ಲೋಟ್‌ಮನ್ (14 ಅಂಕ) ಸಾಹಸದಿಂದ ಮೇಲುಗೈ ಸಾಧಿಸಿತು. ಪರಾಜಿತ ತಂಡದ ಪರ ನೊಲಿಕ ಬೆಲಿಕ್, ವೈಷ್ಣವ್ ಮತ್ತು ಮನ್‌ದೀಪ್ ಸಿಂಗ್ ತಲಾ 8 ಅಂ ಕ ಸಂಪಾದಿಸಿದರು. ದ್ವಿತೀಯ ಸೆಟ್ ಮಾತ್ರ ಗೆಲ್ಲಲು ಅಹ್ಮದಾಬಾದ್ ವಿಫಲವಾಯಿತು (15-11). ಉಳಿದಂತೆ ಕ್ಯಾಲಿಕಟ್ 15-14, 15-11, 15-9, 15-8 ಅಂತರದ ಮೇಲುಗೈ ಸಾಧಿಸಿತು. ಅಹ್ಮದಾಬಾದ್ ಆಡಿದ ಮೂರೂ ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ತಳ ಕಂಡಿದೆ.
ಇದರೊಂದಿಗೆ ಕೊಚ್ಚಿ ಸ್ಪರ್ಧೆಗಳು ಮುಕ್ತಾಯಗೊಂಡಿದ್ದು, ಶನಿವಾರದಿಂದ ಚೆನ್ನೈ ಚರಣದ ಸುತ್ತು ಮೊದಲ್ಗೊಳ್ಳಲಿದೆ. ಇಲ್ಲಿನ ಕೊನೆಯ 3 ಲೀಗ್ ಪಂದ್ಯಗಳ ಬಳಿಕ ನಾಕೌಟ್ ಸ್ಪರ್ಧೆಗಳು ಆರಂಭವಾಗುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.