ಮಡಿಕೇರಿಯಲ್ಲಿ ರಥಸಪ್ತಮಿ : 108 ಸೂರ್ಯ ನಮಸ್ಕಾರ
Team Udayavani, Feb 14, 2019, 1:00 AM IST
ಮಡಿಕೇರಿ : ಸೂರ್ಯನು ಏಳು ಕುದುರೆ ಇರುವ ರಥವನ್ನೇರಿ ಸಿಂಹ ರಾಶಿಯಿಂದ ಮಕರ ರಾಶಿಗೆ ಸಾಗುವ ಕಾಲವೇ ರಥಸಪ್ತಮಿ. ಇದು ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗುವ ಮುನ್ಸೂಚನೆಯಾಗಿದ್ದು, ಈ ವಿಶೇಷ ಸಂದರ್ಭದಲ್ಲಿ ಮಂಜಿನ ನಗರಿ ಮಡಿಕೇರಿಯಲ್ಲಿ ನೂರಾರು ವಿದ್ಯಾರ್ಥಿಗಳು ಯೋಗ ಮಾಡುವ ಮೂಲಕ ಸಾರ್ಥಕತೆ ಮೆರೆದರು.
ಭಾರತೀಯ ವಿದ್ಯಾ ಭವನ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಅಶ್ವಿನಿ ಆಸ್ಪತ್ರೆ ಯೋಗ ಕೇಂದ್ರದ ವತಿಯಿಂದ ರಾಜಾಸೀಟು ಉದ್ಯಾನವನದಲ್ಲಿ ರಥಸಪ್ತಮಿ ಪ್ರಯುಕ್ತ ದೀರ್ಘ ದಂಡ ಸೂರ್ಯ ನಮಸ್ಕಾರ ಯೋಗ ಕಾರ್ಯಕ್ರಮ ನಡೆಯಿತು.
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ. ಕೊಡಗು ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ, ಫೀ.ಮಾ.ಕಾರ್ಯಪ್ಪ ಕಾಲೇಜು ಸೇರಿದಂತೆ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು 108 ಬಾರಿ ಸೂರ್ಯ ನಮಸ್ಕಾರ ಮಾಡಿದರು. ಸೂರ್ಯ ಮೂಡುತ್ತಿದ್ದಂತೆಯೇ ದೀರ್ಘ ದಂಡ ಹಾಕುವುದರಿಂದ ಅದರ ಕಿರಣಗಳು ದೇಹಕ್ಕೆ ತಾಗಿ ಆರೋಗ್ಯ ವರ್ಧನೆಯಾಗುತ್ತದೆ ಮತ್ತು ನರಗಳಿಗೆ ಶಕ್ತಿ ತುಂಬುತ್ತದೆ ಎಂದು ಯೋಗ ಶಿಕ್ಷಕರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.