ಕಸಬ ಕರಾವಳಿ ನಿವಾಸಿಗಳಿಗೆ ಹೊಸ ಬದುಕಿನ ನಿರೀಕ್ಷೆ
Team Udayavani, Feb 14, 2019, 1:00 AM IST
ಕಾಸರಗೋಡು: ಕಡಲ್ಕೊರೆತದಿಂದ ತೊಡಗಿ ಮೀನು ಲಭಿಸದೇ ಇರುವ ಸಮಸ್ಯೆಗಳ ತೆರೆಯ ಅಪ್ಪಳಿಸುವಿಕೆಯೊಂದಿಗೆ ಬದುಕುತ್ತಿರುವ ಮೀನುಗಾರರ ಕುಟುಂಬಗಳಿಗೆ ಸಾಂತ್ವನದ ಸ್ಪರ್ಶದೊಂದಿಗೆ ರಾಜ್ಯ ಸರಕಾರ ಹೊಸಬದುಕಿಗೆ ನಾಂದಿ ನೀಡುತ್ತಿದೆ.
36 ಕುಟುಂಬಗಳಿಗೆ ಒಲಿದ ಭಾಗ್ಯ
ಜಿಲ್ಲೆಯಲ್ಲಿ ನಡೆಯುವ ಚಟುವಟಿಕೆಗಳ ಮೊದಲ ಹಂತವಾಗಿ ಕಾಸರಗೋಡು ಕಸಬ ಕರಾವಳಿಯಲ್ಲಿ ಸಂಕಷ್ಟಕ್ಕೊಳಗಾಗಿರುವ 36 ಕುಟುಂಬ ಗಳಿಗೆ ಈ ನಿಟ್ಟಿನಲ್ಲಿ ನೂತನ ವಸತಿ ನಿರ್ಮಾಣವಾಗುತ್ತಿದೆ. ಮೀನುಗಾರಿಕಾ ಇಲಾಖೆ ಜಾಗ ಒದಗಿಸಿ ಮನೆ ನಿರ್ಮಿಸಿ ನೀಡುವ ಹೊಣೆ ಹೊತ್ತಿದೆ.
ಖರೀದಿ ಸಮಿತಿ ನೇತೃತ್ವ
ಮೀನುಗಾರರು ಕಸಬ ಕರಾವಳಿಯಲ್ಲೇ ಸೂಚಿಸಿದ ಜಾಗದಲ್ಲಿ ವಿವಿಧ ಯೋಜನೆಗಳನ್ನು ಅಳವಡಿಸಿ ಈ ನಿರ್ಮಾಣ ನಡೆಸಲಾಗುತ್ತಿದೆ. ಜಿಲ್ಲಾ ಧಿಕಾರಿ ಅವರು ಅಧ್ಯಕ್ಷರಾಗಿ, ಮೀನುಗಾರಿಕಾ ಇಲಾಖೆ ನಿರ್ದೇಶಕ ಸಂಚಾಲಕರಾಗಿರುವ ಜಿಲ್ಲಾ ಮಟ್ಟದ ಪರ್ಚೇಸ್ ಸಮಿತಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಾಗ ಪತ್ತೆ ಮಾಡಿದ್ದು, ಬೆಲೆ ನಿಗದಿ ಪಡಿಸಲಾಗಿತ್ತು. ಜನವರಿ ತಿಂಗಳೊಳಗೆ ನೋಂದಣಿ ಕ್ರಮಗಳನ್ನು ಪೂರ್ಣಗೊಳಿಸಲಾಗಿತ್ತು.
ಭೂ, ವಸತಿ ರಹಿತರ ಯೋಜನೆ
2016-17ನೇ ವರ್ಷದ ಭೂರಹಿತ, ವಸತಿ ರಹಿತ ಯೋಜನೆಗಳ ಪ್ರಕಾರ ಜಿಲ್ಲೆಯಲ್ಲಿ 129 ಮನೆಗಳನ್ನು ಮಂಜೂರುಮಾಡಲಾಗಿದೆ. ಅದರಲ್ಲಿ 96 ಮಂದಿಯ ನೋಂದಣಿ ಪೂರ್ಣ ಗೊಳಿಸಿ 29 ಮಂದಿಗೆ ಜಾಗ ಮಂಜೂರು ಮಾಡಲಾಗಿದೆ. ಉಳಿದ ಮಂದಿಗೆ ಜಾಗ ಮತ್ತು ಮನೆ ನೀಡುವ ವಿಚಾರ ಪ್ರಗತಿಯಲ್ಲಿದೆ.
50 ಘಟಕಗಳ ಮಂಜೂರು
2017-18ನೇ ವರ್ಷದಲ್ಲಿ ಜಾರಿ ಗೊಳಿಸಿದ ಕರಾವಳಿ ವಲಯದ 50 ಮೀಟರ್ ಅಂತರದಲ್ಲಿ ವಾಸಿಸುತ್ತಿರುವ ಮಂದಿಯನ್ನು ಜಾಗ ಖರೀದಿಸಿ, ಮನೆ ನಿರ್ಮಿಸಿ ನೀಡುವ ಯೋಜನೆ ಪ್ರಕಾರ ಜಿಲ್ಲೆಯಲ್ಲಿ 50 ಘಟಕಗಳನ್ನು ಮಂಜೂರು ಮಾಡಲಾಗಿತ್ತು. 21 ಫಲಾನುಭವಿಗಳ ನೋಂದಣಿ ಕ್ರಮ ಪೂರ್ತಿಗೊಳಿಸಲಾಗಿದೆ. ಅದರಲ್ಲಿ 7 ಮಂದಿಗೆ ಕಾಸರಗೋಡು ಕಸಬದಲ್ಲಿ ಜಾಗ ಪತ್ತೆಮಾಡಲಾಗಿದೆ. ಯೋಜನೆಗಳ ಪ್ರಕಾರ ಜಾಗ ಖರೀದಿಗೆ 6 ಲಕ್ಷ ರೂ., ಮನೆ ನಿರ್ಮಾಣಕ್ಕೆ 4 ಲಕ್ಷ ರೂ. ಮಂಜೂರು ಮಾಡಲಾಗುತ್ತದೆ. ಮನೆ ನಿರ್ಮಾಣ ಫಲಾನುಭವಿಗಳ ಆಸಕ್ತಿ ಪ್ರಕಾರ ಗುತ್ತಿಗೆ ನೀಡಬಹುದಾಗಿದೆ.
6 ತಿಂಗಳಲ್ಲಿ ಪೂರ್ಣ
ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆ ನಿರ್ಮಾಣಕ್ಕೆ ವಿಳಂಬಗತಿ ನೀಡುತ್ತಿದೆ. 6 ತಿಂಗಳ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳಿಸಲು ಯತ್ನಿಸಲಾಗುತ್ತಿದೆ.
– ಅಜಿತ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.