LG v/s AAP: ಸುಪ್ರೀಂ ವಿಭಿನ್ನ ತೀರ್ಪು; ವಿಷಯ ವಿಸ್ತ್ರತ ಪೀಠಕ್ಕೆ
Team Udayavani, Feb 14, 2019, 6:50 AM IST
ಹೊಸದಿಲ್ಲಿ : ದಿಲ್ಲಿ ಸರಕಾರದಲ್ಲಿ ಅಧಿಕಾರಿಗಳ ನಿಯೋಜನೆ, ವರ್ಗಾವಣೆ, ಎಸಿಬಿ ಮತ್ತು ತನಿಖಾ ಆಯೋಗಗಳ ನೇಮಕಾತಿ ಇವೇ ಮೊದಲಾದ ಬಹುಮುಖ್ಯ ವಿಷಯಗಳಲ್ಲಿ ಪರಮೋಚ್ಚ ಅಧಿಕಾರ ದಿಲ್ಲಿ ಸರಕಾರಧ್ದೋ ಅಥವಾ ಲೆಫ್ಟಿನೆಂಟ್ ಗವರ್ನರ್ ಅವರಧ್ದೋ ಎಂಬ ವಿಷಯದಲ್ಲಿ ನ್ಯಾಯಮೂರ್ತಿಗಳಾಗಿರುವ ಎ ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ವಿಭಿನ್ನ ತೀರ್ಪು ನೀಡಿದೆ. ಹಾಗಾಗಿ ಈ ವಿಷಯವನ್ನು ಇದೀಗ ಐವರು ನ್ಯಾಯಾಧೀಶರುಗಳ ಬೃಹತ್ ಪೀಠಕ್ಕೆ ಉಲ್ಲೇಖೀಸಲಾಗಿದೆ.
ಇಂದು ವಿಭಿನ್ನ ತೀರ್ಪು ನೀಡಿದ ಇಬ್ಬರು ನ್ಯಾಯಮೂರ್ತಿಗಳಲ್ಲಿ ಒಬ್ಬರು “ದಿಲ್ಲಿ ಸರಕಾರಕ್ಕೆ ಭೂಮಿ ಮತ್ತು ಪೊಲೀಸ್ ವಿಚಾರವನ್ನು ಹೊರತು ಪಡಿಸಿ ಉಳಿದೆಲ್ಲ ವಿಷಯದಲ್ಲಿ ಸಂಪೂರ್ಣ ಅಧಿಕಾರವಿದೆ’ ಎಂದು ತೀರ್ಪು ನೀಡಿದರು.
ಜಸ್ಟಿಸ್ ಎ ಕೆ ಸಿಕ್ರಿ ಅವರು “ಜಂಟಿ ಕಾರ್ಯದರ್ಶಿ ಮತ್ತು ಈ ಮೇಲಿನ ವರ್ಗದ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಅಧಿಕಾರವು ಲೆಫ್ಟಿನೆಂಟ್ ಗವರ್ನರ್ ಕೈಯಲ್ಲಿರುತ್ತದೆ; ಉಳಿದೆಲ್ಲ ವರ್ಗಗಳ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಅಧಿಕಾರವು ದಿಲ್ಲಿ ಸರಕಾರದ ಕೈಯಲ್ಲಿರುತ್ತದೆ ‘ ಎಂದು ತೀರ್ಪು ನೀಡಿದರು.
ಸುಪ್ರೀಂ ಕೋರ್ಟಿನ ಇಂದಿನ ತೀರ್ಪು ಅನೇಕ ವಿಚಾರಗಳಲ್ಲಿ ದಿಲ್ಲಿ ಸರಕಾರದ ಪರವಾಗಿ ಇದೆಯಾದರೂ ಒಟ್ಟಾರೆಯಾಗಿ ಇದರಲ್ಲಿ ದಿಲ್ಲಿ ಸರಕಾರಕ್ಕೆ ಹಿನ್ನಡೆಯಾದಂತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.