ಡಾರ್ಜಿಲಿಂಗ್ ಮೂಲದಯುವತಿ ಆತ್ಮಹತ್ಯೆ
Team Udayavani, Feb 14, 2019, 9:01 AM IST
ಬೆಂಗಳೂರು: ಸಲೂನ್ ಹಾಗೂ ಮಸಾಜ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಡಾರ್ಜಿಲಿಂಗ್ ಮೂಲದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಲಿನಾ ಲೆಪಾc(19) ಮೃತ ಯುವತಿ. ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ರೆಡ್ಡಿ ಲೇಔಟ್‌ನಲ್ಲಿರುವ ದೀಪ್ತಿ ಯುನಿಸೆಕ್ಸ್ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಅಲಿನಾ ಸ್ನೇಹಿತೆ ಜತೆ ಜಿ.ಎಸ್ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ ಸ್ನೇಹಿತೆ ಮನೆಯಲ್ಲಿರದ ವೇಳೆ ಅಲಿನಾ ನೇಣಿಗೆ ಶರಣಾಗಿದ್ದಾರೆ.
ರಾತ್ರಿ 9.30ರ ಸುಮಾರಿಗೆ ಸ್ನೇಹಿತೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಅಲಿನಾಗೆ ವಿವಾಹ ನಿಶ್ಚಯವಾಗಿತ್ತು. ಮದುವೆಯಾಗಲಿರುವ ಹುಡುಗ ಕೂಡ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದು ತಿಂಗಳ ಹಿಂದಷ್ಟೇ ಅಲಿನಾ ನಗರಕ್ಕೆ ಬಂದು ಕೆಲಸಕ್ಕೆ ಸೇರಿಕೊಂಡು ಸ್ನೇಹಿತೆ ಜತೆ ವಾಸಿಸುತ್ತಿದ್ದಳು. ಅಲಿನಾಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಕೂಡ ಸಿಕ್ಕಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಲಿನಾ ಮದುವೆಯಾಗಲಿರುವ ಹುಡುಗನ ಜತೆ ಆಗಾಗ ಜಗಳವಾಡುತ್ತಿದ್ದಳು ಎಂದು ಆಕೆಯ ಸಹೋದರ ಚೇತನ್ ಲೆಪಾ ಹಾಗೂ ಅಲಿನಾ ಸ್ನೇಹಿತೆ ತಿಳಿಸಿದ್ದಾರೆ.ಅನಾರೋಗ್ಯ ಕಾರಣದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಲಿನಾ ಮರಣೋತ್ತರ ಪರೀಕ್ಷೆ ಗುರುವಾರ ನಡೆಯಲಿದೆ. ಬಳಿಕ, ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.