ಪಾನ್‌ವಾಲಾಗೆ ಕಾಯಂ ಗಿರಾಕಿ!
Team Udayavani, Feb 14, 2019, 11:24 AM IST
ಹಾವೇರಿ: ಈ ಪಾನ್‌ವಾಲಾಗೆ ಇವು ಕಾಯಂ ಗಿರಾಕಿಗಳು. ಹಾಗಂತ ಹಣ ಕೊಟ್ಟು ವಸ್ತುಗಳನ್ನು ಕೊಳ್ಳುವ ಗಿರಾಕಿಗಳಂತೂ ಅಲ್ಲವೇ ಅಲ್ಲ. ಹೆದರಿಸಿ-ಬೆದರಿಸಿ ಸಿಕ್ಕಿದ್ದನ್ನೆಲ್ಲ
ಕಸಿದುಕೊಂಡು ಒಯ್ಯುವುದೂ ಇಲ್ಲ.
ಈ ಗಿರಾಕಿಗಳು ಬೇರೆ ಯಾರೂ ಅಲ್ಲ ಮಂಗಗಳು(ಕಪಿಸೈನ್ಯ). ಹೌದು. ಮಂಗಗಳೆಂದರೆ ಎಲ್ಲೆಂದರಲ್ಲಿ ಜಿಗಿಯುತ್ತ, ಭಯ ಹುಟ್ಟಿಸುತ್ತ ಅಂಗಡಿ-ಮನೆಗಳಿಗೆ ನುಗ್ಗಿ ಸಿಕ್ಕಿದ್ದನ್ನು ಕಸಿದುಕೊಂಡು ಹೋಗುತ್ತವೆ. ಆದರೆ ಇಲ್ಲಿಯ ತಾಲೂಕು ಪಂಚಾಯತ್ ಕಚೇರಿ ಬಳಿ ಇರುವ ಮಾಲತೇಶ ಪಾನ್ ಅಂಗಡಿಗೆ ನಿತ್ಯ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬರುವ ಪರ್ಮೆಂಟ್ ಬರುವ ಗಿರಾಕಿಗಳಾಗಿವೆ. ಅಂಗಡಿ ತೆರೆಯುವ ಮುನ್ನವೇ ಬಂದು ಕುಳಿತುಕೊಳ್ಳುವ ಈ ಅತಿಥಿಗಳು, ಮಾಲಕ ಶಿವಾಜಿ ಹಂಚಿ ಬರುವುದನ್ನೇ ಕಾಯ್ದು
ಕುಳಿತಿರುತ್ತವೆ. ಅಂಗಡಿ ತೆರೆಯುವುದೇ ತಡ ಅಂಗಡಿಯಲ್ಲಿರುವ ವಿವಿಧ ಡಬ್ಬಿಗಳ ಮೇಲೆ
ಕುಳಿತುಕೊಳ್ಳುತ್ತವೆ. ಅಂಗಡಿ ಮಾಲಿಕ ತಿನ್ನಲು ಏನೂ ಕೊಡದಿದ್ದರೆ ಸುಮ್ಮನೆ ಕುಳಿತುಕೊಳ್ಳುವ ಈ ಕೆಂಪು ಕೋತಿಗಳು ಏನಾದರೆ ಕೊಟ್ಟರೆ ತಿನ್ನುತ್ತವೆ. ಇನ್ನು ಅಂಗಡಿಗೆ ಗ್ರಾಹಕರು ಏನಾದರೂ ಕೊಟ್ಟರೆ ಪ್ರೀತಿಯಿಂದ ಇಸಿದುಕೊಂಡು ತಿಂದು ಸುಮ್ಮನೆ ಹೋಗುತ್ತವೆ.
ಅಂಗಡಿ ಮಾಲೀಕ ಶಿವಾಜಿಗೆ ಈ ಕೋತಿಗಳೆಂದರೆ ತುಂಬಾ ಪ್ರೀತಿ. ಅವು ಅಂಗಡಿಗೆ ಬಂದರೆ ಹೊಡೆಯೋದು, ಓಡಿಸೋದು ಮಾಡಲ್ಲ. ಅವುಗಳಿಗೆ ನಿತ್ಯ ಬಾಳೆಹಣ್ಣು, ಪೇಡಾ, ಶೇಂಗಾ ಚಕ್ಕಿ, ಚಕ್ಕುಲಿ ಸೇರಿದಂತೆ ವಿವಿಧ ತಿನಿಸು ಕೊಡುತ್ತಾರೆ. ಕೆಲವು ಸಲ ತಮಗೆ ಬೇಕಾದ ತಿನಿಸುಗಳ ಡಬ್ಬದ ಮೇಲೆ ಕೈಯಿಟ್ಟು ಅದನ್ನು ಕೊಡುವಂತೆ ಸೂಚಿಸುತ್ತವೆ ಇದನ್ನರಿತ ಶಿವಾಜಿ ಅದೇ ತಿನಿಸನ್ನು ಕೊಡುತ್ತಾರೆ. ಸಹಜವಾಗಿ ಎಲ್ಲೆಡೆ ಸಿಗುವ ಕೋತಿಗಳಿಗೆ ತಮ್ಮ ಹಾವಭಾವಗಳ ಮೂಲಕ ಇವು ವಿಭಿನ್ನವಾಗಿ ಕಂಡು ಬರುತ್ತವೆ.
ಕಳೆದ ನಾಲ್ಕೈದು ವರ್ಷಗಳಿಂದ ಈ ಕೋತಿಗಳು ನಮ್ಮ ಅಂಗಡಿಗೆ ಬರುತ್ತವೆ. ನಾವಾಗಿಯೇ ಪ್ರೀತಿಯಿಂದ ಏನಾದರೂ ತಿನಿಸು ಕೊಟ್ಟರೆ ಮಾತ್ರ ತೆಗೆದುಕೊಂಡು ಹೋಗಿ ತಿನ್ನುತ್ತವೆ. ಯಾವತ್ತೂ ಅವೇ ಕೈ ಹಾಕಿ ಕಿತ್ತುಕೊಂಡು ಹೋಗುವುದು, ಕಿತ್ತಾಡುವುದು ಮಾಡಲ್ಲ. ಅವು ನಮಗೆ ಹಾಗೂ ನಮ್ಮ ಗ್ರಾಹಕರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಇವು ಬರುವುದರಿಂದ ನಮಗೆ ಒಳ್ಳೆಯದೇ ಆಗಿದೆ.
. ಶಿವಾಜಿ ಹಂಚಿ,
ಪಾನ್ ಅಂಗಡಿ ಮಾಲೀಕ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.