ಕಥೆ ಬರೆಯುವವನೊಬ್ಬ ಕಥೆಯಾಗಿಬಿಟ್ಟ
Team Udayavani, Feb 15, 2019, 12:30 AM IST
ಅವನ ಎರಡೂ ಬೆರಳುಗಳನ್ನು ಕತ್ತರಿಸಿ ತೆಗೆದು, ಡ್ರೆಸ್ಸಿಂಗ್ ಮಾಡಿ ಅವನೆಡೆಗೆ ನೋಡಿದರೆ, ಆತ ಸುಮ್ಮನೆ ಮಲಗಿಬಿಟ್ಟಿದ್ದ, ಯಾವ ನೋವನ್ನೂ ತೋರ್ಪಡಿಸದೆ. ಯಾವುದೋ ಲೋಕದಲ್ಲಿದ್ದಂತೆ. “ರೋಗವಲ್ಲದ ರೋಗ, ನೋವಲ್ಲದ ನೋವು’ ಅವನನ್ನು ಸಂಪೂರ್ಣ ಹಿಂಡಿಬಿಟ್ಟಿತ್ತು.
ಆತ ನಮ್ಮ ಆಪರೇಶನ್ ಟೇಬಲ್ ಮೇಲೆ ಮಲಗಿದ್ದ. ಕಾಂತಿಯಿಲ್ಲದ ಕಣ್ಣು, ಬಿಳಚಿದ ಮುಖ. ಯಾವಾಗಲೂ ಟ್ರಿಮ್ ಆಗಿ ಇರುತ್ತಿದ್ದ, ಈಗ ಎತ್ತೆತ್ತಲೋ ಬೆಳೆದ ಗಡ್ಡ. ಎತ್ತಲೋ ದಿಟ್ಟಿಸುವ ನೋಟ. ಬದುಕಲ್ಲಿ ಆಸಕ್ತಿ ಇಲ್ಲದ ಭಾವ. ಸದಾಕಾಲ ಚೈತನ್ಯದ ಚಿಲುಮೆ ಆಗಿದ್ದ ಆತ ಇಂದು ನಿಶ್ಶಕ್ತನಾಗಿದ್ದ. ಆಪರೇಶನ್ ಥಿಯೇಟರ್‌ನ ಸೀಲಿಂಗ್‌ಗೆ ಜೋತುಬಿಟ್ಟ ಪ್ರಖರ ದೀಪವನ್ನೇ ನೋಡುತ್ತಾ ಮಲಗಿದ್ದ. ಅವನ ಎರಡೂ ಕಾಲುಗಳಲ್ಲಿ ಬಾವು. ಬಲಗಾಲಿನ ಕಿರುಬೆರಳು, ಅದರ ಬದಿಯ ಬೆರಳು ಕಪ್ಪಾಗಿದ್ದವು. ಪಾದ ಮುಟ್ಟಿದರೆ ತಣ್ಣಗಿನ ಅನುಭವ. ನಾಡಿ ಬಡಿತ ಕ್ಷೀಣ. ಅವೆರಡೂ ಬೆರಳುಗಳು ಕೊಳೆತು ಗ್ಯಾಂಗ್ರೀನ್ ಆಗಿದೆಯೆಂದು ಗೊತ್ತಾಗುತ್ತಿತ್ತು. ಅವುಗಳನ್ನು ಕತ್ತರಿಸಿ ತೆಗೆಯದೆ ಬೇರೆ ಉಪಾಯವಿಲ್ಲ.
ಇಪ್ಪತ್ತು ವರ್ಷಗಳಿಂದ ನನ್ನ ಒಡನಾಡಿಯಾಗಿದ್ದವನ ಈ ಪರಿಸ್ಥಿತಿ ನೋಡಿ, ಇಂಥ ನೂರಾರು ರೋಗಿಗಳನ್ನು ನೋಡಿದ ನನಗೂ ಸಂಕಟವಾಯಿತು. ಇದಕ್ಕೂ ಮೊದಲು ಅನೇಕ ಬಾರಿ ನನ್ನ ಪರೀಕ್ಷಾ ಟೇಬಲ್ ಏರಿದ್ದ, ಸಣ್ಣ ಸಣ್ಣ ಸಮಸ್ಯೆಗಳಿಗಾಗಿ. ಆದರೆ ಇಂದಿನಂಥ ಗಂಭೀರ ಸಮಸ್ಯೆ ಇರಲಿಲ್ಲ. ಆಗ ಆತನೂ ನಗು ನಗುತ್ತ ಹರಟುತ್ತಿದ್ದ. ಈಗ ಅವನ ಎರಡು ಬೆರಳುಗಳನ್ನು ತೆಗೆಯಬೇಕಾಗುತ್ತದೆ ಎಂಬು ದನ್ನು ಅವನೆದುರಿಗೆ ಹೇಳುವ ಧರ್ಮಸಂಕಟ ನನ್ನದು. ಆದರೆ ಅದು ಅನಿವಾರ್ಯ. “”ಎರಡೂ ಬೆರಳು ತೆಗೀಬೇಕಾಗ್ತದರೀ” ಎಂದೆ. ಆತ ವಿಚಿತ್ರವಾಗಿ ನನ್ನೆಡೆ ನೋಡುತ್ತ “”ತೆಗೀರಿ, ಸರ್. ನನ್ನಾಕ್ ಕೇಳ್ತೀರಿ. ಬಂದ್ದದ್ದ ಬರಲಿ, ಹೊಗೂದೇನದ ಹೋಗಲಿ..” ಅಂದ.
ಅಲ್ಲಿ ಆಧ್ಯಾತ್ಮಕ್ಕಿಂತ ಅನಿವಾರ್ಯತೆಯ ಸಂಕಟವಿತ್ತು. ಮುಂದಿನ ಅರ್ಧಗಂಟೆ ನನ್ನ ವೈದ್ಯಕೀಯ ಬದುಕಿನಲ್ಲೇ ಅತ್ಯಂತ ಸಂಕಟ ಮೂಡಿಸಿದ ಅವಧಿ. ಬೆರಳುಗಳ ಮೂಲಕ್ಕೆ ಮರಗಟ್ಟುವ ಇಂಜೆಕ್ಷನ್ ನೀಡಿ ಅವನ ಎರಡೂ ಬೆರಳುಗಳನ್ನು ಕತ್ತರಿಸಿ ತೆಗೆದು, ಡ್ರೆಸ್ಸಿಂಗ್ ಮಾಡಿ ಅವನೆಡೆಗೆ ನೋಡಿದರೆ, ಆತ ಸುಮ್ಮನೆ ಮಲಗಿಬಿಟ್ಟಿದ್ದ, ಯಾವ ನೋವನ್ನೂ ತೋರ್ಪಡಿಸದೆ. ಯಾವುದೋ ಲೋಕದಲ್ಲಿದ್ದಂತೆ. “ರೋಗವಲ್ಲದ ರೋಗ, ನೋವಲ್ಲದ ನೋವು’ ಅವನನ್ನು ಸಂಪೂರ್ಣ ಹಿಂಡಿಬಿಟ್ಟಿತ್ತು. ಹೌದು, ಆತನಿಗೆ ಡಯಾಬಿಟಿಸ್. ಸುಮಾರು ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದ.
ನನಗೆ ತಮ್ಮನಂತಹ ಗೆಳೆಯನಾತ. 1995, ನಾನು ಲೋಕಾಪುರಕ್ಕೆ ವೈದ್ಯಾಧಿಕಾರಿಯಾಗಿ ಬಂದಾಗ ಮೊದಲ ಭೇಟಿ. ಜೀವವಿಮಾ ಅಭಿವೃದ್ಧಿ ಅಧಿಕಾರಿ. ನನ್ನೆಡೆಗೆ ಬಂದದ್ದೇನೋ ಜೀವ ವಿಮೆ ಮಾಡಿಸಲು. ಆದರೆ ಮುಂದಿನ ಒಂದು ಗಂಟೆಯಲ್ಲಿ ಆತ ನನ್ನನ್ನು ಆವರಿಸಿಕೊಂಡುಬಿಟ್ಟ. ನಾನು ಮೊದಲೇ ಸಾಹಿತ್ಯಾಸಕ್ತ. ಸಾಹಿತ್ಯದ ಗುಂಗಿನಲ್ಲಿ ಮುಳುಗಿದರೆ ಎಲ್ಲವನ್ನೂ ಮರೆಯುವವ. ಸಾಹಿತಿ, ಕತೆಗಾರ, ಕವಿ, ಭಾವಜೀವಿಯಾಗಿದ್ದ ಆತನೊಡನೆ ಮಾತಾಡುತ್ತಾ ಕುಳಿತರೆ ಹೊತ್ತು ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಹೀಗೆ ಒಮ್ಮೆ ಪರಿಚಯವಾದವರನ್ನು ಜೀವನ ಪರ್ಯಂತ ಸಂಪರ್ಕದಲ್ಲಿಟ್ಟು ಕೊಳ್ಳುವ ಕಲೆ ಆತನಿಗೆ ಸಿದ್ಧಿಸಿತ್ತು. ಒಮ್ಮೆ ಮಾತ್ರ ಸಿಕ್ಕವರನ್ನೂ° ಗೆಳೆಯರನ್ನಾಗಿಸಿಕೊಳ್ಳುವುದು ಆತನ ಅದ್ಭುತ ಗುಣಗಳಲ್ಲೊಂದು. ಸೆಲ್‌ಫೋನಿನಲ್ಲಿ ಸಾವಿರ ಕಾಂಟ್ಯಾಕr…ಗಳು. ಎಲ್ಲರೂ ಗೆಳೆಯರೇ. ಎಲ್ಲರೊಂದಿಗೂ ಸಲುಗೆ. ಹಾಗೆ ಪ್ರಾರಂಭವಾದ ನಮ್ಮ ಗೆಳೆತನ ಅವ್ಯಾಹತ. ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾವಿಬ್ಬರೂ ಜೋಡಿಯಾಗಿಯೇ ಇರುತ್ತಿದ್ದೆವು, ಎಷ್ಟೆಂದರೆ ಒಬ್ಬರು ಬರದಿದ್ದರೆ ಇನ್ನೊಬ್ಬನನ್ನು ಜನ ಕೇಳುವ ಮಟ್ಟಿಗೆ. ನಾನು ಅವನು ಜೊತೆ ಜೊತೆಯಾಗಿಯೇನೋ ಇದ್ದೆವು, ಆದರೆ ತನಗೆ ಮಧುಮೇಹ ಇದ್ದದ್ದನ್ನೇ ಆತ ನನಗೆ ಅನೇಕ ವರ್ಷಗಳವರೆಗೆ ಹೇಳಿರಲಿಲ್ಲ. ಬದುಕನ್ನು ತೀವ್ರವಾಗಿ ಅನುಭವಿಸುವ ಭರಾಟೆಯಲ್ಲಿ ತನ್ನ ಆರೋಗ್ಯವನ್ನು ಕಡೆಗಾಣಿಸಿದ್ದ. ನನಗೆ ಆತನ ರೋಗದ ಬಗೆಗೆ ಗೊತ್ತಾಗುವ ವೇಳೆಗೆ ಅದು ಆತನ ಅನೇಕ ಅಂಗಾಂಗಗಳ ಕಾರ್ಯ ಕ್ಷಮತೆಯನ್ನು ಕಡಿಮೆ ಮಾಡಿಯಾಗಿತ್ತು. ಅದಕ್ಕೆ ಮುಖ್ಯ ಕಾರಣ ಆತನ ಅಲಕ್ಷ. “”ನಿಮ್ಮ ಶುಗರ್ ಭಾಳ ಐತಿ ನೋಡ್ರಿ..” ಅಂದರೆ “”ನನ್ನ ಶುಗರ್ ಎರಡುನೂರು, ಮುನ್ನೂರು ಕಾಮನ್ ರಿ..” ಅಂದು ನಗಾಡುತ್ತಿದ್ದ, ನನ್ನ ಎದೆ ಝಲ್ಲೆನ್ನುವಂತೆ. ನಾನು ತಿಳಿಹೇಳಿದಾಗೊಮ್ಮೆ ಹಾರಿಕೆಯ ಉತ್ತರ. ಇವನು ಬಹಿರಂಗದಲ್ಲಿ ನಗುತ್ತಿದ್ದ, ಆದರೆ ಆ ರೋಗ ಅಂತರಂಗದಲ್ಲಿ ಇವನನ್ನು ಆವರಿಸುತ್ತಿತ್ತು.
ಮಧುಮೇಹವೇ ಹಾಗೆ. ಒಂದು ರೀತಿ ನೋಡಿದರೆ ಅದು ರೋಗವಲ್ಲದ ರೋಗ. ಯಾವುದೇ ಬಾಹ್ಯ ರೋಗಕಾರಕಗಳಿಲ್ಲದೆ ಆಂತರ್ಯದ ಅವ್ಯವಸ್ಥೆಯಿಂದಾಗಿ ಕಾಡುವ ರೋಗ. ಅದೊಂದು “ಮೌನ ಕೊಲೆಗಾರ’. ಲಕ್ಷಿಸಿದರೆ ಸೌಮ್ಯ, ನಿರ್ಲಕ್ಷಿಸಿದರೆ ಮಹಾಕ್ರೂರಿ. ಮೇದೋಜೀರಕ ಗ್ರಂಥಿಯ ಬಾಲದಲ್ಲಿನ ಲ್ಯಾಂಗರ್ ಹ್ಯಾನ್ಸ್ನ ದ್ವೀಪಗಳೆಂದು ಕರೆಯಲ್ಪಡುವ ಅಂಗಾಂಶಗಳಲ್ಲಿ ತಯಾರಾಗುವ ಇನ್ಸುಲಿನ್ ಎಂಬ ಅಂತರ್‌ಸ್ರವಿಕೆ ಇಡೀ ಶರೀರದಲ್ಲಿನ ಜೀವ ಕೋಶಗಳ ಚಯಾಪಚಯ ಕ್ರಿಯೆಗೆ ಅತ್ಯವಶ್ಯ. ಮನುಷ್ಯನ ಶರೀರದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾದಾಗ ಮಧುಮೇಹ ಬರುತ್ತದೆ. ಡಯಾಬಿಟಿಸ್ ರೋಗಿಗಳ ರಕ್ತದಲ್ಲಿ ಸಾಕಷ್ಟು ಸಕ್ಕರೆಯ ಪ್ರಮಾಣವೇನೋ ಇರುತ್ತದೆ, ಆದರೆ ಅದು ಜೀವಕೋಶಗಳ ಬಳಕೆಗೆ ಲಭ್ಯವಾಗುವುದಿಲ್ಲ. ಸುತ್ತಲೂ ಸಂಪತ್ತು, ಆದರೆ ಬಳಕೆಗೆ ದೊರಕದ ಸ್ಥಿತಿ. ಜೀವಕೋಶಗಳು ಗ್ಲುಕೋಸ್ ದೊರಕದೆ ಸೊರಗುತ್ತವೆ, ಕಾರ್ಯಕ್ಷಮತೆ ಕುಂದುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶ ತೀರ ಹೆಚ್ಚಾದಾಗ ಮೂತ್ರಪಿಂಡಗಳು ಅದನ್ನು ಸೋಸಿ ಮೂತ್ರದ ಮುಖಾಂತರ ಹೊರಹಾಕತೊಡಗುತ್ತವೆ. ತಿಂದ¨ªೆಲ್ಲ ಹೊರಹೋಗ ತೊಡಗಿ ಮನುಷ್ಯ ಸೊರಗುತ್ತಾನೆ. ಮುಖದ ಕಳೆ ಕಡಿಮೆಯಾಗುತ್ತದೆ. “ನೀರಡಿಕೆ’, “ಹಸಿವು’, “ಹೆಚ್ಚು ಮೂತ್ರವಿಸರ್ಜನೆ’ ಎಂಬ ತ್ರಿವಳಿ ಲಕ್ಷಣಗಳು ಮಧುಮೇಹದ ಮೊದಲ ಚಿಹ್ನೆಗಳು.
ಮೆದುಳು ಮತ್ತು ಯಕೃತ್ತನ್ನು ಹೊರತುಪಡಿಸಿ ದೇಹದ ಇನ್ನುಳಿದ ಪ್ರತಿಯೊಂದು ಅಂಗಾಂಗಗಳ ಜೀವಕೋಶವೂ ರಕ್ತದಲ್ಲಿರುವ ಗುÉಕೋಸನ್ನು ಬಳಸಿಕೊಳ್ಳಬೇಕಾದರೆ ಇನ್ಸುಲಿನ್ ಅತ್ಯವಶ್ಯ. ಹೀಗಾಗಿ ಮೆದುಳು ಹಾಗೂ ಯಕೃತ್ತನ್ನು ಬಿಟ್ಟು ಉಳಿದೆಲ್ಲ ಅಂಗಗಳೂ ಮಧುಮೇಹದ ದುಷ್ಪರಿಣಾಮಕ್ಕೆ ಈಡಾಗುತ್ತವೆ. ಸಣ್ಣ ರಕ್ತನಾಳಗಳು, ನರಗಳು, ಕಣ್ಣು, ಮೂತ್ರಪಿಂಡಗಳು ಮಧುಮೇಹ ದಿಂದ ಜರ್ಜರಿತವಾಗುತ್ತವೆ. ಹೀಗಾಗಿ ಕಾಲುಗಳ ಬೆರಳುಗಳು ಕೊಳೆಯುವುದು, ಜುಮ್ ಎನ್ನುವುದು, ಸ್ಪರ್ಶಜ್ಞಾನವಿಲ್ಲದಂತಾ ಗುವುದು, ಮೂತ್ರಪಿಂಡಗಳು ವಿಫಲಗೊಳ್ಳುವುದು, ಕಣ್ಣಿನ ಕ್ಷಮತೆ ಕಡಿಮೆಯಾಗುವುದು ಸಾಮಾನ್ಯ. ಹಿಂದಿನ ದಿನಗಳಲ್ಲಿ ಶ್ರಮಜೀವಿ ಗಳಾಗಿದ್ದ ಭಾರತೀಯರಲ್ಲಿ ಮಧುಮೇಹದ ಪ್ರಮಾಣ ಕಡಿಮೆ ಯಿತ್ತು. ಪಾಶ್ಚಿಮಾತ್ಯರ ಅನುಕರಣೆ ಮಾಡುತ್ತ, “ಜಂಕ್ ಫುಡ್’ಗಳನ್ನು ಫ್ಯಾಶನ್ ಎಂದು ಬಗೆಯುತ್ತ, ಕಡಿಮೆ ಸಮಯದಲ್ಲಿ ಹೆಚ್ಚು ಸಾಧಿಸುವ ಹುಂಬತನವನ್ನು ಮೈಮೇಲೆಳೆದುಕೊಂಡು ಹೆಚ್ಚು ಸಂಪತ್ತು ಗಳಿಸುವ ಹಂಬಲದಿಂದ ಆಫೀಸಿನ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ನಮ್ಮ ಯುವಜನ ಮಧುಮೇಹವನ್ನು ಆಹ್ವಾನಿಸುತ್ತಿ¨ªಾರೆ.
25 ವರ್ಷದೊಳಗಿನ ಪ್ರತಿ ನಾಲ್ಕು ಯುವಕರಲ್ಲಿ ಒಬ್ಬನಿಗೆ ಮಧುಮೇಹವಿದೆ. ಕಡಿಮೆ ಕೆಲಸ ಹೆಚ್ಚು ತಿನ್ನುವುದು, ಅದಕ್ಕೆ ಕಾರಣಗಳÇÉೊಂದು. ಜೊತೆಗೆ, ಬಿಳಿಯಾಗಿದ್ದದ್ದೇ ಚೆಂದ ಎಂದು ಅಕ್ಕಿಯನ್ನೆಲ್ಲ ಪಾಲಿಶ್ ಮಾಡಿ, ತಿಂದ ಮರುಕ್ಷಣವೆ ಅದು ಜೀರ್ಣ ಗೊಂಡು ರಕ್ತದ ಗುÉಕೋಸ್ ಪ್ರಮಾಣ ವನ್ನು ಭರ್ರನೆ ಏರಿಸುವ ಕ್ರಿಯೆಯೂ ಕಾರಣ. ಆನುವಂಶೀ ಯತೆಯನ್ನೂ ಅಲ್ಲಗಳೆಯ ಲಾಗದು. ಭಾರತ ಈಗ ಜಾಗತಿಕ ಮಧುಮೇಹದ ಹೆಚ್ಚಿನ ಭಾರ ಹೊರುತ್ತಿದೆ. 2017 ಸಮೀಕ್ಷೆಯಂತೆ ಭಾರತದಲ್ಲಿ 72 ಮಿಲಿಯನ್ ಮಧುಮೇಹಿಗಳು. ಇನ್ನೂ ಕಂಡುಹಿಡಿಯಲಾರದವರೆಷ್ಟೋ ಜನ. 2025ರ ವೇಳೆಗೆ ಈ ಸಂಖ್ಯೆ ದ್ವಿಗುಣಗೊಳ್ಳುವ ಶಂಕೆ. ಇಡೀ ಜಗತ್ತಿನ ಸುಮಾರು 50 ಪ್ರತಿಶತ ಮಧುಮೇಹಿಗಳು ಭಾರತದಲ್ಲಿದ್ದಾರೆಂದರೆ ಅದರ ಅಗಾಧತೆ ಅರ್ಥವಾಗುತ್ತದೆ. ಒಂದು ಲಕ್ಷ ಜನಸಂಖ್ಯೆಯಲ್ಲಿ 53 ಜನ ಮಧುಮೇಹ ದಿಂದ ಸಾಯುತ್ತಿದ್ದಾರೆ. ಅರಿವು, ಆಹಾರ, ಇರುವಿಕೆ, ಉಪಚಾರ ಇವು ಮಧುಮೇಹ ರೋಗದ ನಿಯಂತ್ರಣಕ್ಕೆ ಅವಶ್ಯಕ. ರೋಗದ ಕಾರಣ ಅರಿತರೆ ಅದನ್ನು ನಿಯಂತ್ರಣದಲ್ಲಿ ಡುವುದೂ ಸಾಧ್ಯವಾಗುತ್ತದೆ. ಕಾಲ ಕಾಲಕ್ಕೆ ರಕ್ತ ತಪಾಸಣೆ ಮಾಡುವುದರಿಂದ ಮಾತ್ರ ಅದರ ಇರುವಿಕೆಯನ್ನು ಅರಿಯಲು ಸಾಧ್ಯ. ಜೊತೆಗೇ ಆರೋಗ್ಯಪೂರ್ಣ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ನಿಯಮಿತ ಹಾಗೂ ನಿರಂತರ ವ್ಯಾಯಾಮ, ಒತ್ತಡರಹಿತ ಜೀವನ ಶೈಲಿ ಹಾಗೂ ಅವಶ್ಯಕ ಔಷಧೋಪಚಾರಗಳು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿ. “ಒಮ್ಮೆ ಮಧುಮೇಹಿ ಯಾದರೆ ಜೀವನಪೂರ್ತಿ ಮಧುಮೇಹಿ’ ಎಂಬುದನ್ನು ನೆನಪಿಡ ಬೇಕು. ಅದನ್ನು ತಹಬದಿಗೆ ತಂದು ಆರೋಗ್ಯಪೂರ್ಣ ಜೀವನ ಸಾಗಿಸಬಹುದೇ ಹೊರತು ಪೂರ್ಣ ಗುಣಮುಖರಾಗುವುದು ಅಸಾಧ್ಯ. “ಪೂರ್ಣ ಗುಣಪಡಿಸುತ್ತೇವೆ’ ಎಂಬಂಥ ಯಾವ್ಯಾ ವುದೋ ಜಾಹೀರಾತಿಗೆ ಮರುಳಾಗಿ ರೋಗ ಉಲ್ಬಣಗೊಂಡ ವರೆಷ್ಟೋ ಮಂದಿ.
ಆತನ ಬೆರಳುಗಳನ್ನು ತೆಗೆದಾದ ಮೇಲೆ ಆತನಲ್ಲಿ ಧೈರ್ಯ ತುಂಬಲು ಪ್ರಯತ್ನಿಸಿದೆ. ಇನ್ನೂ ಕಾಲ ಮಿಂಚಿಲ್ಲ, ದೂರ ಗಗನದ ಅಂಚಲ್ಲಿ ಆಶಾಕಿರಣವಿದೆ, ಎಂದು. ಆತ ನಿರ್ಲಿಪ್ತ. ಸಾವನ್ನು ನಿರೀಕ್ಷಿಸು ತ್ತಿದ್ದಂತೆ ಸುಮ್ಮನಾಗಿಬಿಟ್ಟ. ಅದಾಗಲೇ ಅವನ ಮೂತ್ರಪಿಂಡಗಳ ಕಾರ್ಯಕ್ಷಮತೆ ಕುಗ್ಗಿಬಿಟ್ಟಿತ್ತು. ಅದಕ್ಕೆ ಮೂತ್ರ ಪಿಂಡ ಕಸಿಯೊಂದೇ ದಾರಿ. ಈಗಾಗಲೇ ಡಯಾಲಿಸಿಸ್ ಮೇಲಿದ್ದ ಆತನಿಗೆ ಮೂತ್ರಪಿಂಡ ಕಸಿ ಮಾಡುವ ಭರವಸೆ ನೀಡತೊಡಗಿದೆ. ಎಲ್ಲದಕ್ಕೂ ಮೌನವೇ ಉತ್ತರ. ಮುಂದೆ ಒಂದೇ ವಾರಕ್ಕೆ ನಾನು ಯೂರೋಪಿನ ಪ್ರವಾಸಕ್ಕೆ ತೆರಳಬೇಕಾದಾಗ ನನ್ನೆಡೆಗೆ ಆರ್ತನೋಟ ಬೀರಿದ್ದ. ನಾನೂ ಭಾರವಾದ ಮನಸ್ಸಿನಿಂದಲೇ ಹೊರಟಿ¨ªೆ, ಅವನನ್ನು ನನ್ನ ಮಗನ ಸುಪರ್ದಿಗೆ ಬಿಟ್ಟು.
ಅಂದು ನಾನು ನಾರ್ವೆಯಲ್ಲಿದ್ದೆ. ರಾತ್ರಿಯ ಒಂದು ಗಂಟೆ, ಮಗ ನಿಂದ ಫೋನ್ ಕಾಲ್. ಆತ ಹೋಗಿಬಿಟ್ಟಿದ್ದ. ಒಮ್ಮಿಂದೊಮ್ಮೆಲೆ ರಕ್ತದಲ್ಲಿನ ಕ್ರಿಯಾಟಿನಿನ್ ಪ್ರಮಾಣ ಹೆಚ್ಚಾಯಿತೆಂದೂ, ಬೆಂಗಳೂರಿಗೆ ಕಳಿಸಿದರೆಂದೂ ಅಲ್ಲಿಯೇ ಅಸುನೀಗಿದನೆಂದೂ ದುಃಖೀತನಾಗಿ ತಿಳಿಸಿದ. ನನ್ನ ಮನಸ್ಸು ಭಾರ. ನಾರ್ವೆಯ ಪ್ರವಾಸ ರುಚಿಸಲಿಲ್ಲ. ಹೀಗೆ ಸುಸಂಗತವಾದ ಜೀವವೊಂದು ಅಸಂಗತ ವಾಗಿ ಅಸ್ತವಾಯಿತು. ಎಲ್ಲ ಬದುಕುಗಳೂ ಅಸಂಗತವೇ. ಆದರೆ ಅಕಾಲದಲ್ಲಿ ಬದುಕು ಮುಗಿದರೆ ಅದರಂಥ ಅನ್ಯಾಯ ಬೇರೊಂದಿರಲಾರದು. ಚೈತನ್ಯದ ಚಿಲುಮೆ, ಬದುಕನ್ನು, ಬದುಕಲ್ಲಿ ದೊರಕಿದ ಎಲ್ಲರನ್ನೂ, ಎಲ್ಲವನ್ನೂ ಅಗಾಧವಾಗಿ ಪ್ರೀತಿಸಿದ ಆತನ ಅಗಲಿಕೆ ನಂಬಲ ಸಾಧ್ಯವಾದ ಕಹಿಸತ್ಯ.
ಹಲವು ಪ್ರತಿಭೆಗಳ ಸಂಗಮ, ಮನೆಗೆ ಬಂದವರ ಮನದಲ್ಲಿ ಸದಾ ನೆನಪಲ್ಲಿ ಉಳಿಯುವ ವ್ಯಕ್ತಿತ್ವ. “ಉಪ’ಜೀವನಕ್ಕಾಗಿ ಜೀವವಿಮೆಯ ಅಧಿಕಾರಿ. ಅದನ್ನೂ ತೀವ್ರವಾಗಿ ಪ್ರೀತಿಸುತ್ತ ಕರ್ತವ್ಯದ ಉತ್ತುಂಗ ತಲುಪಿದವ. ಇಲಾಖೆಯಿಂದ ದೊರೆತ ಮೆಚ್ಚುಗೆಯ “ಶಹಬ್ಟಾಶ್’. ಅಂಚೆ ಚೀಟಿಯಲ್ಲಿ ಮೂಡಿದ ಕಾಂತಿ ತುಂಬಿದ, ಮಾಸದ ಮುಗುಳ್ನಗೆಯ ಮುಖ. ಜೀವವಿಮೆಯೆಂಬ “ಉಪ’ ಜೀವನವನ್ನೇ ಅದ್ಭುತವಾಗಿ ನಿಭಾಯಿಸಿದ ಆತ, ಬದುಕೆಂಬ “ಮುಖ್ಯ’ ಜೀವನದಲ್ಲಿ ಹತ್ತು ಹಲವು ಬದ್ಧತೆಗಳನ್ನು ಮೈಮೇಲೆಳೆದುಕೊಂಡು ಪ್ರತಿ ಗಳಿಗೆಯನ್ನೂ ಸಾರ್ಥಕವಾಗಿಸಿಕೊಂಡ ಸಾಧಕ. ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ನಿತ್ಯಬದುಕಿನ ಉಸಿರಾಗಿಸಿಕೊಂಡು ಅದಕ್ಕೆ ತಕ್ಕುದಾಗಿ ಬದುಕಿದ ಧೀಮಂತ. ತಾನಾಗೇ ದೊರಕಿದ ಹಲವು ಅವಕಾಶಗಳನ್ನೂ, ಶತಪ್ರಯತ್ನ ಮಾಡಿ ದಕ್ಕಿಸಿಕೊಂಡ, ಇನ್ನು ಕೆಲವನ್ನು ಜಾಣತನದಿಂದ ನಿಭಾಯಿಸಿದ ಚತುರಮತಿ. ಅವನೊಂದು ಪ್ರತಿಭಾಸಂಗಮ. ಆದರೇನು. ಎಲ್ಲ ವ್ಯರ್ಥ. ಎಲ್ಲ ಇದ್ದೂ ಏನೂ ಇಲ್ಲದಂತಾಗಿಬಿಟ್ಟ.. ಹಲವು ಕೆಲಸಗಳನ್ನು ಮೈಮೇಲೆಳೆದುಕೊಂಡು ಆರೋಗ್ಯವನ್ನು ಅಲಕ್ಷಿಸಿದ. ಮಧುಮೇಹದ ಬಗ್ಗೆ ಎಲ್ಲ ಗೊತ್ತಿದ್ದೂ ಅದನ್ನು ನಿರ್ಲಕ್ಷಿಸಿದ. ನಾನು ಸಾವಿರ ಬಾರಿ ಎಚ್ಚರಿಸಿ¨ªೆ, ತನ್ನನ್ನು ಗೌರವಿಸದವರನ್ನು ನಿರ್ದಾಕ್ಷಿಣ್ಯವಾಗಿ ಮುಗಿಸಿಬಿಡುವ ರೋಗ ಅದೆಂದು. ಆತ ನಕ್ಕುಬಿಡುತ್ತಿದ್ದ. ಬದುಕಿನಾದ್ಯಂತ ಹಲವು ಸಾಧನೆಗಳ ಸಂತಸ ಮೂಡಿಸಿದವನು ಅಕಾಲದಲ್ಲಿ ಕೈಕೊಸರಿಕೊಂಡು ಆಘಾತದ ನೀಡಿಬಿಟ್ಟ. ಆತನ ಬದುಕೇ ಒಂದು ಕವಿತೆ. ಆದರೆ ಇನ್ನೂ ಆಸ್ವಾದಿಸಬೇಕೆನ್ನುವಾಗಲೇ ಒಮ್ಮೆಲೆ ಸ್ಥಬ್ದವಾದ ಗೀತೆ. ಆತ ಇನ್ನೂ ಹಲವು ವರ್ಷ ಬದುಕಬಹುದಿತ್ತು, ಮಧುಮೇಹದ ಜೊತೆಗೇ ಸುಂದರ ಸಹಬಾಳ್ವೆ ಮಾಡುತ್ತ. ಸ್ವಲ್ಪ ಎಚ್ಚರದಿಂದಿರಬೇಕಿತ್ತು.
ಇತ್ತೀಚೆಗೆ ಮಹಾಲಿಂಗಪುರದಲ್ಲಿ ಜರುಗಿದ ಜಿಲ್ಲಾ ಸಾಹಿತ್ಯ ಸಮ್ಮೇಳನದ ದ್ವಾರಕ್ಕೆ ಅವನದೇ ಹೆಸರು. ಯಾವ ಸಮ್ಮೇಳನದಲ್ಲಿ ಸರ್ವಾಧ್ಯಕ್ಷನಾಗಿ ಸಂಭ್ರಮಿಸಬಹುದಿತ್ತೋ ಆ ಸಮ್ಮೇಳನದ ದ್ವಾರಕ್ಕೆ ಹೆಸರಾಗಿಬಿಟ್ಟ…
ಡಾ. ಶಿವಾನಂದ ಕುಬಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.