![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 15, 2019, 12:30 AM IST
ಸ್ಯಾನ್‌ಫ್ರಾನ್ಸಿಸ್ಕೋ: ಮನುಷ್ಯದ ಭೌತಿಕ ಮತ್ತು ಮಾನಸಿಕ ಮಿತಿಯನ್ನೂ ಮೀರಿದ ಕೆಲಸಗಳನ್ನು ಮಾಡುವಲ್ಲಿ ಕೃತಕ ಬುದ್ಧಿ ಮತ್ತೆಯುಳ್ಳ ರೋಬೋಗಳು ಯಶಸ್ವಿಯಾಗಿವೆ. ಆದರೆ, ಅವು ಚರ್ಚೆಗಳಲ್ಲೂ ಮನುಷ್ಯರನ್ನು ಸೋಲಿಸಬಲ್ಲವೇ? ಇಂಥ ಪ್ರಶ್ನೆಯನ್ನಿಟ್ಟುಕೊಂಡು ರೋಬೋಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿವೆ. ಇನ್ನೂ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಖ್ಯಾತ ಐಟಿ ಕಂಪೆನಿಯಾದ ಐಬಿಎಂ ಕೂಡ ಇಂಥ ಪ್ರಯತ್ನ ಮಾಡಿ, ಭಾಗಶಃ ಯಶಸ್ಸು ಕಂಡಿದೆ.
ಮಿಸ್ ಡಿಬೇಟರ್ ಎಂಬ “ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಆಧರಿತ ರೋಬೋವನ್ನು ಐಬಿಎಂ ಅಭಿವೃದ್ಧಿಪಡಿಸಿದ್ದು, ಅದರ ಪ್ರಯೋಗವನ್ನು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆಸಲಾಗಿತ್ತು. ಈ ವೇಳೆ ರೋಬೋ ಎದುರು ಚರ್ಚೆ ನಡೆಸಲು ಭಾರತೀಯ ಮೂಲದ, 2012ರ ಯುರೋಪಿಯನ್ ಡಿಬೇಟ್‌ನ ವಿಜೇತ ಹರೀಶ್ ನಟರಾಜನ್ ಭಾಗವಹಿಸಿದ್ದರು. ಇಲ್ಲಿ ಕೂಡ ಹರೀಶ್ ಜೊತೆ ಚರ್ಚೆ ನಡೆಸುವಲ್ಲಿ ರೋಬೋ ಸೋತಿದೆ. ಪ್ರೀಸ್ಕೂಲ್‌ಗಳನ್ನು ಕಡಿಮೆ ಮಾಡಬೇಕೆ ಅಥವಾ ಬೇಡವೇ ಎಂಬ ವಿಷಯದಲ್ಲಿ 4 ನಿಮಿಷ ವಾದ ಮಂಡನೆಗೆ ಹಾಗೂ ಎರಡು ನಿಮಿಷ ಸಾರಾಂಶಕ್ಕೆ ಅವಕಾಶ ನೀಡಲಾಗಿತ್ತು. ಸುಮಾರು 25 ನಿಮಿಷ ಚರ್ಚೆ ನಡೆದಿದೆ. ಸುಮಾರು 700 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೇಕ್ಷಕರು ಹಾಕಿದ ಮತದ ಆಧಾರದಲ್ಲಿ ಹರೀಶ್ ಗೆದ್ದಿದ್ದಾರೆ. ಚರ್ಚೆ ನಡೆಸುವುದು ಇತರ ಎಲ್ಲ ಕೆಲಸಕ್ಕಿಂತ ಹೆಚ್ಚು ಸಂಕೀರ್ಣವಾದುದು. ಅದು ಯಂತ್ರಕ್ಕೆ ಕಷ್ಟ ಎಂದು ಹರೀಶ್ ಹೇಳಿದ್ದಾರೆ.
ಸೋಲೇ ಗೆಲುವಿನ ಸೋಪಾನ: ಕೃತಕ ಬುದ್ಧಿಮತ್ತೆಯ ಹಾದಿ ಅಗಾಧವಾಗಿದೆ. ಐಬಿಎಂ ರೋಬೋ ಸೋತಿದ್ದು ಇದು ಆರಂಭಿಕ ವೈಫಲ್ಯವಷ್ಟೇ. ಮುಂದೆ ಈ ಕ್ಷೇತ್ರದಲ್ಲೂ ಮಾನವನನ್ನು ರೋಬೋಗಳು ಸೋಲಿಸಬಹುದು ಎನ್ನಲಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.