ಆರೋಗ್ಯ-ಶಿಕ್ಷಣ, ಸಾರಿಗೆ, ಕಲ್ಯಾಣ ವಲಯಗಳಿಗೆ ವಿಶೇಷ ಆದ್ಯತೆ​​​​​​​


Team Udayavani, Feb 15, 2019, 12:30 AM IST

14ksde8.jpg

ಕಾಸರಗೋಡು: ಸೇವಾ ವಲಯ, ಆರೋಗ್ಯ-ಶಿಕ್ಷಣ, ಸಾರಿಗೆ, ಕಲ್ಯಾಣ ವಲಯಗಳಿಗೆ ವಿಶೇಷ ಆದ್ಯತೆ ನೀಡಿ ಜಿಲ್ಲಾ ಪಂಚಾಯತ್‌ ಮುಂಗಡಪತ್ರವನ್ನು ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್‌ ಗುರುವಾರ ಮಂಡಿಸಿದರು.

ಶಿಕ್ಷಣ ವಲಯದಲ್ಲಿ ಪ್ಲಸ್‌ ಟು ಸಮತ್ವ ತರಬೇತಿಯಲ್ಲಿ ಕನ್ನಡ ಕಲಿಕಾರ್ಥಿಗಳನ್ನು ಸೇರ್ಪಡೆ ಮಾಡಿದ್ದು, ಕನ್ನಡ ಶಿಕ್ಷಣ ಸಾಮಗ್ರಿಗಳ ಲಭ್ಯತೆಗೆ ಮೊಬಲಗು ಮೀಸಲಿರಿಸಿರುವುದು ಜಿಲ್ಲೆಯ ಕನ್ನಡಿಗರ ವಲಯಕ್ಕೆ ನೀಡಿದ ಅಂಗೀಕಾರವಾಗಿದೆ. ಕನ್ನಡದ ಹಿರಿಯ ಚೇತನ, ನಾಡೋಜ ಡಾ.ಕಯ್ನಾರ ಕಿಞ್ಞಣ್ಣ ರೈ ಅವರ ಸ್ಮಾರಕ ಸಾಕಾರಗೊಳಿಸುವ ನಿಟ್ಟಿನಲ್ಲಿ ಮೊಬಲಗನ್ನು ಮೀಸಲಿರಿಸಿರುವುದು ಗಮನಾರ್ಹವಾಗಿದೆ.ಗುರುವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್‌ ಅವರು 108,02,54,629 ರೂ. ಆದಾಯ, 99,19,00,000 ರೂ. ವೆಚ್ಚ, 8,83,54,629 ರೂ. ಮಿಗತೆ ನಿರೀಕ್ಷಿಸುವ ಬಜೆಟ್‌ ಮಂಡಿಸಿದ್ದಾರೆ. ಹೈನು ಕೃಷಿಕರಿಗೆ ಆರ್ಥಿಕ ಸಹಾಯ ನೀಡುವ ಯೋಜನೆಗೆ 1.75 ಕೋಟಿ ರೂ.ಮೀಸಲಿರಿಸಲಾಗಿದೆ. 

ಭತ್ತದ ಕೃಷಿ, ಬೀಜೋತ್ಪಾದನೆ ವಲಯಕ್ಕೆ ಮೊಬಲಗು ಮೀಸಲಿರಿಸಲಾಗಿದೆ. ಅನಿವಾಸಿ ಭಾರತೀಯರ ಕಲ್ಯಾಣಕ್ಕೆ ಅನಿವಾಸಿ ಸ್ವ-ಸಹಾಯ ಸಂಘಗಳ ಉದ್ದಿಮೆಗೆ ಆರ್ಥಿಕ ಸಹಾಯ, ಖಾದಿ ಕೈಗಾರಿಕೆ, ಮಹಿಳಾ ಸಬಲೀಕರಣಕ್ಕೆ ಗುರಿ ಇರಿಸಲಾಗಿದೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಜೈವಿಕ ವೈವಿಧ್ಯ ಸಂರಕ್ಷಣೆ, ನದಿ ಸಂರಕ್ಷಣೆಗೆ ಮೊಬಲಗು ಮೀಸಲಿರಿಸಲಾಗಿದೆ. ಜಲಸಂರಕ್ಷಣೆಗೆ ಜಲಜೀವನ ಯೋಜನೆಗಾಗಿ ಒಂದು ಕೋಟಿ ರೂ. ಮೀಸಲಿರಿಸಲಾಗಿದೆ.ಕೋಳಿ ಮರಿ ಉತ್ಪಾದನೆಗೆ ಯೋಜನೆ, ಮೀನುಗಾರರ ಗ್ರೂಪ್‌ಗ್ಳಿಗೆ ಫೈಬರ್‌ ದೋಣಿ ಖರೀದಿಗೆ ಆರ್ಥಿಕ ಸಹಾಯ ನೀಡುವ ಯೋಜನೆ, ನೀರಾವರಿ ಮೂಲ ಮತ್ತು ತತ್ಸಂಬಂಧಿ ಚೆಕ್‌ ಡ್ಯಾಂ ಸಹಿತ ಕಾಮಗಾರಿಗಳಿಗೆ  2 ಕೋಟಿ ರೂ.ಮೀಸಲಿರಿಸಲಾಗಿದೆ.

ಜಿಲ್ಲಾ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ಒಲಿದು ಬಂದಿರುವುದು ಅಭಿಮಾನಕರ ವಿಚಾರ ಎಂದವರು ಹೇಳಿದರು. ಬಡರೋಗಿಗಳಿಗೆ ಡಯಾಲಿಸಿಸ್‌ ಚಿಕಿತ್ಸೆ ಸಹಾಯ ಯೋಜನೆಗೆ 25 ಲಕ್ಷ ರೂ. ಮೀಸಲಿರಿಸಲಾಗಿದೆ. ಕ್ಯಾನ್ಸರ್‌ ಬಾಧಿತರ ಸಹಾಯಕ್ಕೆ ಯೋಜನೆ ಸಿದ್ಧವಾಗುತ್ತಿದೆ. ಸಾಂತ್ವನ ಚಿಕಿತ್ಸಾ ರಂಗದಲ್ಲಿ ಪಾಲಿಯೇಟಿವ್‌  ಆರೈಕೆ ಸೇರಿದಂತೆ 95 ಲಕ್ಷ ರೂ. ಮೀಸಲಿರಿಸಲಾಗಿದೆ. ಎಚ್‌.ಐ.ವಿ. ಬಾಧಿತರಿಗೆ ಪೌಷ್ಟಿಕಾಹಾರ ನೀಡಲು, ಟಿ.ಬಿ.ರೋಗಿಗಳ ಸರಂರಕ್ಷಣೆ ಇತ್ಯಾದಿಗಳಿಗಿರುವ ಕೈತಾಂಗ್‌(ಕೈಯಾಸರೆ) ಯೋಜನೆಯನ್ನು ಮುಂದುವರಿಸುವುದಾಗಿ ಅವರು ತಿಳಿಸಿದರು. ವಯೋವೃದ್ಧರ  ಸಂರಕ್ಷಣೆಗೆ ಹಗಲು ವಿಶ್ರಾಂತಿ  ಕೇಂದ್ರಗಳು, ವಯೋಮಿತ್ರ, ಸರಕಾರಿ ಅಂಗೀಕೃತ ವಯೋಜನ ಸಂಸ್ಥೆಗಳಿಗೆ ಸಹಾಯ ಯೋಜನೆಗಳಿಗಾಗಿ ಒಂದು ಕೋಟಿ ರೂ.ಮೀಸಲಿರಿಸಲಾಗಿದೆ.ಸ್ಥಳೀಯಾಡಳಿತ ಸಂಸ್ಥೆಗಳ ಜತೆ ಸೇರಿ ಸಂಪೂರ್ಣ ತ್ಯಾಜ

ಸಂಸ್ಕರಣೆ ಘಟಕ ಸ್ಥಾಪನೆಗೆ ಒಂದು ಕೋಟಿ ರೂ.ಗೂ ಅಧಿಕ ಮೊಬಲಗು ಮೀಸಲಿರಿಸಲಾಗಿದೆ. ಕಿಫ್‌ ಬಿ ಸಂಸ್ಥೆಯ ಜತೆ ಸೇರಿ ಚಟ್ಟಂಚಾಲ್‌ನಲ್ಲಿ ಅಂತಾರಾಷ್ಟ್ರೀàಯ  ಗುಣಮಟ್ಟದ ಕಸಾಯಿಖಾನೆಯೊಂದನ್ನು ಸ್ಥಾಪಿಸಲು 10 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಅದಕ್ಕಿರುವ ಯತ್ನ ನಡೆಸಲಾಗುತ್ತಿದೆ. ಬೀದಿ ನಾಯಿಗಳ ಕಾಟ ನಿಯಂತ್ರಣದಲ್ಲಿ ಅನಿಮಲ್‌ ಬರ್ತ್‌ ಕಂಟ್ರೋಲ್‌(ಎ.ಬಿ.ಸಿ.) ಯೋಜನೆ ಯಶಸ್ವಿಯಾಗಿದ್ದು, ಅದನ್ನು ಮುಂದುವರಿಸಲು, ಯೋಜನೆ ವಿಸ್ತಾರ ಅಂಗವಾಗಿ ತ್ರಿಕ್ಕ‌ರಿಪುರದಲ್ಲಿ ಎ.ಬಿ.ಸಿ.ಸೆಂಟರ್‌ ಆರಂಭಿಸಲು ನಿರ್ಧರಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಾರ್ವಜನಿಕ ಶ್ಮಶಾನಗಳ ನಿರ್ಮಾಣ ಉದ್ದೇಶವಿದ್ದು, ಮೊಬಲಗು ಮೀಸಲಿರಿಸಲಾಗಿದೆ.

ವಿದ್ಯಾರ್ಥಿಗಳಿಗೆ ನೆರವು
ಜಿಲ್ಲಾ ಮಟ್ಟದಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸುವ ನಿಟ್ಟಿನಲ್ಲಿ 75 ಲಕ್ಷ ರೂ. ಮೀಸಲಿರಿಸಲಾಗಿದೆ. ಬಡ್ಸ್‌ ಶಾಲೆಗಳ ಮೂಲ ಸೌಲಭ್ಯ ಅಭಿವೃದ್ಧಿಗೆ 53 ಲಕ್ಷ ರೂ.ಮೀಸಲಿರಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಅಭಿಯಾನ ಸಹಿತ ವಿವಿಧ ಶೈಕ್ಷಣಿಕ ಯೋಜನೆಗಳಿಗೆ ಮೊಬಲಗು ಮೀಸಲಿರಿಸಲಾಗಿದೆ. ಎಸ್‌.ಎಸ್‌.ಎ. ಯೋಜನೆಗೆ 3 ಕೋಟಿ ರೂ.ಮೀಸಲಿರಿಸಲಾಗಿದೆ. ಶಾಲೆಗಳಲ್ಲಿ ಸೌರಶಕ್ತಿ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ., ಕ್ರೀಡಾ ವಲಯದ ಅಭಿವೃದ್ಧಿಗೆ “ಕುದಿಪ್‌’ ಯೋಜನೆಗೆ ಮೊಬಲಗು ಮೀಸಲಿರಿಲಾಗಿದೆ. ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಡುವ ನಿಟ್ಟಿನಲ್ಲಿ 75 ಲಕ್ಷ ರೂ. ಮೀಸಲಿರಿಸಲಾಗಿದೆ. 

ಕೊರಗ ಜನಾಂಗಕ್ಕೆ ಸೌಲಭ್ಯ
ಕೊರಗ ಜನಾಂಗಕ್ಕೆ ಪೌಷ್ಠಿಕಾಹಾರ ಪೂರೈಕೆ, ಕಾಲನಿಗಳ ಅಭಿವೃದ್ಧಿ ಇತ್ಯಾದಿಗಳಿಗೆ ಮೊಬಲಗು ಮೀಸಲಿರಿಸಲಾಗಿದೆ. ಈ ಜನಾಂಗದ ಮಕ್ಕಳು ಶಾಲೆಗೆ ತೆರಳಲು ಸಹಾಯ ಮಾಡುವ ಗೋತ್ರವಾಹಿನಿ ಯೋಜನೆ ಮುಂದುವರಿಕೆಗೆ ಮೊಬಲಗು ಮೀಸಲಿರಿಸಲಾಗಿದೆ.

ವಸತಿ ನಿರ್ಮಾಣ
ಜಿಲ್ಲೆಯನ್ನು ವಸತಿ ರಹಿತರಿಲ್ಲದ ನಾಡಾಗಿಸುವ ನಿಟ್ಟಿನಲ್ಲಿ ಲೈಫ್‌, ಪಿ.ಎಂ.ಎ.ವೈ. ವಸತಿ ನಿರ್ಮಾಣ ಯೋಜನೆಗಾಗಿ 8 ಕೋಟಿ ರೂ. ಮೀಸಲಿರಿಸಲಾಗಿದೆ. ಜಿಲ್ಲಾ ಪಂಚಾಯತ್‌ ರಸ್ತೆಗಳನ್ನು ಮೆಕ್‌ಡಾಂ ಡಾಮರೀಕರಣ ನಡೆಸುವ ಮಾದರಿ ಯೋಜನೆಗಾಗಿ 9.85 ಕೋಟಿ ರೂ., ಗ್ರಾಮೀಣ ರಸ್ತೆಗಳ ಪುನಶ್ಚೇತನಕ್ಕೆ 14 ಕೋಟಿ ರೂ., ಜಿಲ್ಲಾ ಪಂಚಾಯತ್‌ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಮೀಸಲಿರಿಸಲಾಗಿದೆ.

ಉತ್ಪಾದನೆ ವಲಯಕ್ಕೆ 50 ಕೋಟಿ.ರೂ.
ಉತ್ಪಾದನೆ ವಲಯದಲ್ಲಿ ಅನೇಕ ಯೋಜನೆಗಳಿದ್ದು, 50 ಕೋಟಿ ರೂ. ವೆಚ್ಚದಲ್ಲಿ ಚಟ್ಟಂಚಾಲ್‌ ಗ್ಯಾಸ್‌ ಆಧಾರಿತ ಪವರ್‌ ಪ್ಲಾಂಟ್‌ ಸ್ಥಾಪನೆ, ಗೈಲ್‌ಲೈನ್‌ ಸ್ಥಾಪನೆ ಕುರಿತು ಉಲ್ಲೇಖೀಸಲಾಗಿದೆ. ಹಿಂದಿನ ಮುಂಗಡಪತ್ರದಲ್ಲಿ ತಿಳಿಸಲಾದ ಪೆರಿಯ ಕಿರು ವಿಮಾನ ನಿಲ್ದಾಣದ ಕುರಿತು ಚರ್ಚಿಸಲಾಗಿದೆ.

ಮಹಿಳಾ ಸ್ನೇಹಿ ಯೋಜನೆ 
ಮಹಿಳೆಯರ ಸಬಲೀಕರಣ ಸಂಬಂಧ ನಗರ ಪ್ರದೇಶಗಳಲ್ಲಿ ಶೌಚಾಲಯ ಸಹಿತ ಫೀಲಾಂಜ್‌ ವಿಶ್ರಾಂತಿ ಕೊಠಡಿಗಳ ನಿರ್ಮಾಣ ಮಾಡಲಾಗುವುದು. ಮಹಿಳಾ ಸಹಕಾರಿ ಸಂಘಗಳಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ 85 ಲಕ್ಷ ರೂ. ಮೀಸಲಿರಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮಹಿಳಾ  ಸ್ನೇಹಿ ಕೇಂದ್ರಗಳ ಸ್ಥಾಪನೆ ಮುಂದುವರಿಸಲಾಗುವುದು. ಅಲ್ಪಸಂಖ್ಯಾಕ‌ ವಿಭಾಗ ಟ್ರಾನ್ಸ್‌ ಜೆಂಡರ್ಸ್‌ ಅವರ ಅಭಿವೃದ್ಧಿಗಾಗಿ ಯೋಜನೆಗಳಿಗೆ ಮೊಬಲಗು ಮೀಸಲಿರಿಸಿದೆ.

ಟಾಪ್ ನ್ಯೂಸ್

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.