ಕುಂಭಮೇಳಕ್ಕೆ ನಾಲ್ಕು ತಾತ್ಕಾಲಿಕ ಬಸ್ ನಿಲ್ದಾಣ
Team Udayavani, Feb 15, 2019, 1:13 AM IST
ಮೈಸೂರು: ತಿರುಮಕೂಡಲು ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಫೆ.17ರಿಂದ ನಡೆಯುವ ಕುಂಭಮೇಳದಲ್ಲಿ ಲಕ್ಷಾಂತರ ಜನರು ಪುಣ್ಯಸ್ನಾನ ಮಾಡಲು ಆಗಮಿಸುತ್ತಿದ್ದು, ಸುಗಮ ಸಂಚಾರಕ್ಕಾಗಿ ನಾಲ್ಕು ತಾತ್ಕಾಲಿಕ ನಿಲುಗಡೆ ತಾಣಗಳನ್ನು ಸ್ಥಾಪಿಸಲಾಗಿದೆ. ಭಕ್ತರ ಸಂಚಾರಕ್ಕಾಗಿ ಉಚಿತ ಮಿನಿಬಸ್ ವ್ಯವಸ್ಥೆಮಾಡಲಾಗಿದೆ. ಮೈಸೂರು ಕಡೆಯಿಂದ ಬರುವ ಭಕ್ತರು ಗಗೇìಶ್ವರಿಯಿಂದ ಮುಂದೆ ಹೊಸದಾಗಿ ನಿರ್ಮಿಸಿರುವ ಸೇತುವೆ ಪಕ್ಕದ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ ನಂತರ ವಾಪಸ್ ಅಲ್ಲಿಂದ ಮೈಸೂರು ಕಡೆಗೆ ಸಂಚರಿಸುವುದು.
ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಯಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಅಗ್ನಿಶಾಮಕ ಠಾಣೆ ಎದುರು ನಿರ್ಮಿಸಿರುವ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ, ನಂತರ ಅದೇ ಮಾರ್ಗವಾಗಿ ತೆರಳಬಹುದಾಗಿದೆ. ಬೆಂಗಳೂರು, ಮಂಡ್ಯ, ಮಳವಳ್ಳಿ, ಬನ್ನೂರುನಿಂದ ಬರುವ ಭಕ್ತರು ತಮ್ಮ ವಾಹನ ಗಳನ್ನು ಕಾವೇರಿ ನದಿ ಹಳೇ ಸೇತುವೆ ಬಳಿ ತಾತ್ಕಾಲಿಕ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿ ನಂತರ ಬನ್ನೂರು ಕಡೆಗೆ ವಾಪಸ್ಸಾಗುವುದು. ನಂಜನಗೂಡು, ತಿ.ನರಸೀಪುರ ಪಟ್ಟಣದ ಕಡೆಯಿಂದ ಬರುವ ಭಕ್ತರು ಉತ್ತಮ ವಾಹನಗಳನ್ನು ತಿರುಮಕೂಡಲು ಸೇತುವೆ ಬಳಿ ನಿಲುಗಡೆ ಮಾಡಿ, ನಂತರ ಅದೇ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.