ಎಂಟರ ಸುತ್ತಿಗೆ ಹಾಲೆಪ್, ಎಲಿನಾ ಸ್ವಿಟೋಲಿನಾ
Team Udayavani, Feb 15, 2019, 5:47 AM IST
ದೋಹಾ: ಅಗ್ರ ಶ್ರೇಯಾಂಕದ ರೊಮೇನಿಯನ್ ಆಟಗಾರ್ತಿ ಸಿಮೋನಾ ಹಾಲೆಪ್ ಮತ್ತು ಉಕ್ರೇನಿನ ಎಲಿನಾ ಸ್ವಿಟೋಲಿನಾ “ಕತಾರ್ ಓಪನ್’ ಕೂಟದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಸಿಮೋನಾ ಹಾಲೆಪ್ ಉಕ್ರೇನಿನ ಲೆಸಿಯಾ ಸುರೆಂಕೊ ವಿರುದ್ಧ 6-2, 6-3 ನೇರ ಸೆಟ್‌ಗಳಿಂದ ಸುಲಭ ಜಯ ದಾಖಲಿಸಿದರು. ಸುರೆಂಕೊ ವಿರುದ್ಧ 6-0 ಗೆಲುವಿನ ದಾಖಲೆ ಹೊಂದಿರುವ ಹಾಲೆಪ್ ಎರಡೂ ಸೆಟ್‌ಗಳಲ್ಲಿ ಅಮೋಘ ಆಟವಾಡಿದರು. ಕ್ವಾರ್ಟರ್ ಫೈನಲ್‌ನಲ್ಲಿ ಹಾಲೆಪ್ 9ನೇ ಶ್ರೇಯಾಂಕದ ಜರ್ಮನ್ ಆಟಗಾರ್ತಿ ಜೂಲಿಯಾ ಜಾರ್ಜ್‌ಸ್ ಅವರನ್ನು ಎದುರಿಸಲಿದ್ದಾರೆ. ಜೂಲಿಯಾ 6-1, 6-7 (5), 6-4 ಅಂತರದಿಂದ ಅಮೆರಿಕದ ಅಲಿಸನ್ ರಿಸ್ಕೆ ವಿರುದ್ಧ ಗೆದ್ದು ಬಂದರು.
ಸ್ವಿಟೋಲಿನಾಗೆ ಸುಲಭ ಜಯ
4ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅವರನ್ನು 6-4, 6-4 ನೇರ ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು. ಸ್ವಿಟೋಲಿನಾ ವಿರುದ್ಧ ಅನುಭವಿಸಿದ ಹಿಂದಿನೆರಡು ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದ ಒಸ್ಟಾಪೆಂಕೊ ಅವರಿಗೆ ಈ ಕೂಟದಲ್ಲಿಯೂ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಸ್ವಿಟೋಲಿನಾ ಜೆಕ್ ಗಣರಾಜ್ಯದ ಅರ್ಹತಾ ಆಟಗಾರ್ತಿ ಕ್ಯಾರೋಲಿನಾ ಮುಖೋವಾ ವಿರುದ್ಧ ಆಡಲಿದ್ದಾರೆ.
ಗಾಯಾಳು ಪ್ಲಿಸ್ಕೋವಾ ಹೊರಕ್ಕೆ
ಜೆಕ್ ಗಣರಾಜ್ಯದ ಕ್ಯಾರೋಲಿನ್ ಪ್ಲಿಸ್ಕೋವಾ ಅನಾರೋಗ್ಯದಿಂದಾಗಿ ಈ ಕೂಟದಿಂದ ಹಿಂದೆ ಸರಿದಿದ್ದಾರೆ. ಪ್ಲಿಸ್ಕೋವಾ, ಡ್ರಾ ಪ್ರಕಟವಾದ ಬಳಿಕ ಕೂಟದಿಂದ ನಿರ್ಗಮಿಸುತ್ತಿರುವ 5ನೇ ಆಟಗಾರ್ತಿ. ಇದಕ್ಕೂ ಮುನ್ನ ಡೆನ್ಮಾರ್ಕ್ ನ ಕ್ಯಾರೋಲಿನ್ ವೋಜ್ನಿಯಾಕಿ, ಫ್ರಾನ್ಸ್ ನ ಕ್ಯಾರೋಲಿನ್ ಗಾರ್ಸಿಯಾ ಕೂಡ ಕೂಟದಿಂದ ಹೊರನಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.