ಫಲಕ ಹಾಕಲು ಎಚ್‌ಎಎಲ್‌ಗೆ ತಾತ್ಕಾಲಿಕ ಅನುಮತಿ
Team Udayavani, Feb 15, 2019, 6:38 AM IST
ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಫೆ.20ರಿಂದ 24ರವರೆಗೆ ನಡೆಯಲಿರುವ “ಏರೋ ಇಂಡಿಯಾ-2019′ ವೈಮಾನಿಕ ಪ್ರದರ್ಶನದ ಪ್ರಚಾರ ಹಾಗೂ ಮಾಹಿತಿಗಾಗಿ ನಗರದ ಆಯ್ದ ಕೆಲವೆಡೆ ತಾತ್ಕಾಲಿಕವಾಗಿ ಹೋರ್ಡಿಂಗ್‌ಗಳನ್ನು ಅಳವಡಿಸಲು ಎಚ್‌ಎಎಲ್‌ಗೆ ಹೈಕೋರ್ಟ್ ಗುರುವಾರ ಶರತ್ತುಬದ್ಧ ಅನುಮತಿ ನೀಡಿದೆ.
ಎಚ್‌ಎಎಲ್ ಮನವಿ ಹಿನ್ನೆಲೆಯಲ್ಲಿ ಹೋರ್ಡಿಂಗ್ ಅಳವಡಿಕೆಗೆ ಅನುಮತಿ ಕೋರಿ ಬಿಬಿಎಂಪಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಶರತ್ತುಬದ್ಧ ಅನುಮತಿ ನೀಡಿ ಆದೇಶಿಸಿತು.
ಅದರಂತೆ, ಎಚ್‌ಎಎಲ್ ಮನವಿಯಲ್ಲಿ ಗುರುತಿಸಲಾದ ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಲಾಲ್‌ಬಾಗ್ ಮುಖ್ಯ ರಸ್ತೆಯ ಪಾಸ್‌ಪೋರ್ಟ್ ಕಚೇರಿ ಬಳಿ, ವಿಮಾನ ನಿಲ್ದಾಣ ರಸ್ತೆಯ ಕೋಗಿಲು ಜಂಕ್ಷನ್ ಬಳಿ, ಯಲಹಂಕ ಕೋಗಿಲು ಜಂಕ್ಷನ್, ಯಲಹಂಕದ ಎನ್‌ಇಎಸ್ ಬಸ್ ನಿಲ್ದಾಣ, ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಮುಖ ಆಗಮನ ಮತ್ತು ನಿರ್ಗಮನ ಮಾರ್ಗಗಳಲ್ಲಿ ಜಾಹೀರಾತು ಫಲಕ ಅಳವಡಿಸಲು ನ್ಯಾಯಪೀಠ ಅನುಮತಿ ನೀಡಿದೆ.
ಈ ಕುರಿತ ಆಯುಕ್ತರ ಅಫಿಡವಿಟ್ ಅನ್ನು ನ್ಯಾಯಪೀಠಕ್ಕೆ ಸಲ್ಲಿಸಿದ ಬಿಬಿಎಂಪಿ ಪರ ವಕೀಲರು, ಕೇಂದ್ರ ರಕ್ಷಣಾ ಸಚಿವಾಲಯದ ನಿರ್ದೇಶನದಂತೆ ಏರೋ ಇಂಡಿಯಾ-2019 ಇದರ ಪ್ರಚಾರ ಅಭಿಯಾನಕ್ಕಾಗಿ ಅನುಮತಿ ನೀಡುವಂತೆ ಎಚ್‌ಎಎಲ್ ಬಿಬಿಎಂಪಿಗೆ ಮನವಿ ಸಲ್ಲಿಸಿದೆ.
ಏರೋ ಇಂಡಿಯಾ ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನವಾಗಿದ್ದು, ಇದರಲ್ಲಿ ಹಲವು ದೇಶಗಳು ತಮ್ಮ ವಿಮಾನಗಳನ್ನು ಪ್ರದರ್ಶಿಸುತ್ತಾರೆ. ಈ ಪ್ರದರ್ಶನದಲ್ಲಿ ಸ್ಥಳೀಯರು ಮತ್ತು ವಿದೇಶಿಯರು ಸೇರಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಹಾಗಾಗಿ ಪ್ರಚಾರ ಹಾಗೂ ಮಾಹಿತಿಗಾಗಿ ತಾತ್ಕಾಲಿಕವಾಗಿ ಜಾಹೀರಾತು ಫಲಕಗಳನ್ನು ಅಳವಡಿಸಬೇಕಾಗಿದೆ.
ಶೇ.100ರಷ್ಟು ಕಾಟನ್ ಬಳಕೆ: ಅದೇ ರೀತಿ ಹೋರ್ಡಿಂಗ್‌ಗಳಲ್ಲಿ ಶೇ.100ರಷ್ಟು ಕಾಟನ್ ಬಳಕೆ ಮಾಡುತ್ತೇವೆ. ಫೆ.15ರಿಂದ 25ವರೆಗೂ ಹೋರ್ಡಿಂಗ್ಸ್ ಅಳವಡಿಸಿ, ಏರ್ ಶೋ ಮುಗಿದ ಕೂಡಲೇ ತೆರವುಗೊಳಿಸಿ ಬಿಬಿಎಂಪಿಗೆ ವರದಿ ಸಲ್ಲಿಸುವಂತೆ ಎಚ್‌ಎಎಲ್‌ಗೆ ಸೂಚಿಸಲಾಗುವುದು. ಆದ್ದರಿಂದ ಏರೋ ಇಂಡಿಯಾಗೆ ಸಿಮೀತವಾಗಿ ಆಯ್ದ ಕಡೆಗಳಲ್ಲಿ ಜಾಹಿರಾತು ಅಳವಡಿಕೆಗೆ ಅನುಮತಿ ನೀಡುವಂತೆ ಬಿಬಿಎಂಪಿ ಅಫಿಡವಿಟ್‌ನಲ್ಲಿ ನ್ಯಾಯಪೀಠವನ್ನು ಮನವಿ ಮಾಡಿತು. ಇದನ್ನು ನ್ಯಾಯಪೀಠ ಮಾನ್ಯ ಮಾಡಿದೆ.
ಡಿಸಿಪಿ ಖುದ್ದು ಹಾಜರಿಗೆ ಸೂಚನೆ: ನಗರದ ಕೋರಮಂಗಲ, ಜಾನ್ಸನ್ ಮಾರುಕಟ್ಟೆ ಹಾಗೂ ರೆಸ್‌ಕೋರ್ಸ್ ರಸ್ತೆಗಳಲ್ಲಿ ಅನಧಿಕೃತವಾಗಿ ಜಾಹೀರಾತುಗಳನ್ನು ಅಳವಡಿಸಿರುವ ಫೋಟೋಗಳನ್ನು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಈ ಜಾಹೀರಾತು ಅವಳವಡಿಸಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆಯೇ?
ಎಂದು ಬಿಬಿಎಂಪಿಯನ್ನು ಪ್ರಶ್ನಿಸಿತು. ನಂತರ ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ? ಎಫ್ಐಆರ್ ದಾಖಲಿಸಲಾಗಿದೆಯೇ? ದಾಖಲಿಸಿದ್ದರೆ, ಅವುಗಳನ್ನು ಕೋರ್ಟ್‌ಗೇಕೆ ಸಲ್ಲಿಸಲ್ಲ? ಎಂದು ಪ್ರಶ್ನಿಸಿದ್ದು, ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಫೆ.22ರಂದು ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನಗರ ಅಪರಾಧ ವಿಭಾಗದ ಡಿಸಿಪಿ ಅವರಿಗೆ ತಾಕೀತು ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.