ವಿವಿಧ ಕೇಸಲ್ಲಿ ವಶಕ್ಕೆ ಪಡೆದಿದ್ದ 334 ಲೀಟರ್ ಮದ್ಯ ನಾಶ
Team Udayavani, Feb 15, 2019, 7:33 AM IST
ಹುಣಸೂರು: ಹುಣಸೂರು ವಲಯ ವ್ಯಾಪ್ತಿಯ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ 334 ಲೀಟರ್ ಮದ್ಯವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ನಾಶಪಡಿಸಲಾಯಿತು. ನಗರದ ಅಬಕಾರಿ ವಲಯ ಕಚೇರಿಯಲ್ಲಿ 70 ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ 277 ಲೀಟರ್ ಮದ್ಯ ಹಾಗೂ 37.85 ಲೀ. ಬಿಯರ್ ಹಾಗೂ 19 ಲೀಟರ್ ಸೇಂದಿಯನ್ನು ತಹಶೀಲ್ದಾರ್ ಬಸವರಾಜು, ಹುಣಸೂರು ಅಬಕಾರಿ ಉಪ ಅಧೀಕ್ಷಕ ಪಿ.ರಮೇಶ್,
ಕೆಎಸ್‌ಬಿಸಿಎಲ್ ಘಟಕದ ವ್ಯವಸ್ಥಾಪಕ ಸಿ.ಸಿದ್ದರಾಜು ಸಮ್ಮುಖದಲ್ಲಿ ನಾಶಪಡಿಸಲಾಯಿತು. ಈ ವೇಳೆ ಅಬಕಾರಿ ನಿರೀಕ್ಷಕರಾದ ಧರ್ಮರಾಜು, ನಟರಾಜ್, ಅಬಕಾರಿ ಉಪ ನಿರೀಕ್ಷಕರಾದ ಮಾನಸ, ಮೋಹನ್ ಹಾಗೂ ಇಲಾಖೆ ಸಿಬ್ಬಂದಿ ಇದ್ದರು. ತಾಲೂಕಿನ ವಿವಿಧೆಡೆ ಅಕ್ರಮ ಮದ್ಯ ಮಾರಾಟ-ಸಾಗಾಟ, ದಾಸ್ತಾನು ಪ್ರಕರಣಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರತಿ ವರ್ಷ ಜಿಲ್ಲಾ ಉಪ ಆಯುಕ್ತರ ಆದೇಶದಂತೆ ನಾಶಪಡಿಸಲಾಗುವುದೆಂದು ನಿರೀಕ್ಷಕ ಧರ್ಮರಾಜ್ ತಿಳಿಸಿದರು.
14ಕ್ಕೆ ವಾಹನ ಹರಾಜು: ಅಕ್ರಮ ಮದ್ಯ ಪ್ರಕರಣಗಳಲ್ಲಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ 2 ಮಾರುತಿ ಕಾರು, ಎರಡು ಆಟೋ, ಮೂರು ಬೈಕ್‌ಗಳನ್ನು ಗುರುವಾರ ಮಧ್ಯಾಹ್ನ 3ಕ್ಕೆ ಹುಣಸೂರು ವಲಯ ಕಚೇರಿಯಲ್ಲಿ ಹರಾಜು ಹಾಕಲಾಗುವುದೆಂದು ಅಬಕಾರಿ ಉಪ ಅಧೀಕ್ಷಕ ಪಿ.ರಮೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.