ಭಾವಿಕಟ್ಟಿ ಲೋಕದಲ್ಲಿ…
Team Udayavani, Feb 15, 2019, 11:35 PM IST
ಭಾವಿಕಟ್ಟಿ ಅವರ ಮನೆಯೇ ಒಂದು ಕರಕುಶಲ ವಸ್ತುಗಳ ಸಂಗ್ರಹಾಗಾರ. ಇಲ್ಲಿ ತೆಂಗಿನಕಾಯಿಗಳಿಂದ ತಯಾರಿಸಿದ ಸರಿ ಸುಮಾರು ಇನ್ನೂರಕ್ಕೂ ಮಿಕ್ಕಿದ ವೈವಿಧ್ಯಮಯ ಮೂರ್ತಿಗಳು ಕಾಣಸಿಗುತ್ತವೆ.
ಧಾರವಾಡದ ಕೆಲಗೇರಿಯ ಜಗದೀಶ್ ಬಾವಿಕಟ್ಟಿ ಒಬ್ಬ ವಿಭಿನ್ನ ಕಲಾಕಾರ. ಏಕೆಂದರೆ, ಇವರ ಕೈಯಲ್ಲಿ ತೆಂಗಿನ ಕಾಯಿ ಕೊಟ್ಟು ನೋಡಿ. ಅದು ನಾನಾ ರೂಪಗಳನ್ನು ಪಡೆದು ಕೊಳ್ಳದೇ ಇದ್ದರೆ ಕೇಳಿ. ಜಗದೀಶ್ ವೃತ್ತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಇಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ವಿಭಾಗದ ಮೇಲ್ವಿಚಾರಕರು. ತನ್ನ ಬಿಡುವಿನ ಅವಧಿಯಲ್ಲಿ ನಿರುಪಯುಕ್ತ ವಸ್ತುಗಳಿಂದ ಹಾಗೂ ಬಲಿತ ತೆಂಗಿನಕಾಯಿಗಳಿಂದ ವೈವಿಧ್ಯಮಯ ಕಲಾಕೃತಿಗಳನ್ನು ತಯಾರಿಸುವ ಅಪ್ರತಿಮ ಕಲಾಕಾರರು.
ಇವರ ತಂದೆ ವಿರೂಪಾಕ್ಷ$ ಗೌಡರ ಬಳುವಳಿಯಾಗಿ ಬಂದಿರುವುದು ಈ ಕರಟಕಲೆ.
ಕೇವಲ ತನ್ನ ಕಣ್ಣಿನ ನೋಟದÇÉೇ ತೆಂಗಿನಕಾಯಿಯ ಒಳ ಗಾತ್ರವನ್ನು ಅಳತೆ ಮಾಡುವಷ್ಟು ಹಾಗೂ ಕಾಯಿಯ ಸಿಪ್ಪೆಯ ಗಾತ್ರವನ್ನು ಗಮನಿಸಿ ಅದರಿಂದ ಯಾವ ಮೂರ್ತಿಯನ್ನ ತಯಾರಿಸಬಹುದೆಂದು ಜಗದೀಶ್ ನಿರ್ಧರಿಸುತ್ತಾರೆ. ಬಲಿತ ತೆಂಗಿನ ಕಾಯಿಂದ ಗಣಪತಿ, ಕೋತಿ, ನಾಯಿ, ಗೂಬೆ,ಹೂವುಗಳು, ಬುದ್ಧ, ಗಿಳಿ, ಜೋಡಿ ಎತ್ತುಗಳು, ಶಿವ, ಬಸವಣ್ಣ, ನಾಗರಹಾವು, ಆನೆ, ಕುದುರೆ, ವಾಲ್ಮೀಕಿ, ಸಾಯಿಬಾಬಾ… ಹೀಗೆ ಹಲವಾರು ಮೂರ್ತಿಗಳನ್ನು ಕೆತ್ತುವ ಕೌಶಲ ಇವರಿಗೆ ಸಿದ್ಧಿಸಿದೆ.
ರಚನೆ ಹೇಗೆ?
ಆಕೃತಿಯ ಸ್ವರೂಪಕ್ಕೆ ಅನುಗುಣವಾಗಿ ವಿವಿಧ ಗಾತ್ರದ ಕಾಯಿಯನ್ನು ಆಯ್ದುಕೊಂಡು, ಆಕಾರವನ್ನು ಪೆನ್ನಿನ ಮೂಲಕ ಕಾಯಿಯ ಮೇಲ್ಭಾಗದಲ್ಲಿ ರೇಖಾಚಿತ್ರದ ರೂಪದಲ್ಲಿ ಚಿತ್ರಿಸುತ್ತಾರೆ. ನಂತರ ಹರಿತವಾದ ಪ್ಲಾಸ್ಟಿಕ್ ಕತ್ತರಿಸುವ ಬ್ಲೇಡ್ ಮೂಲಕ ಇವರ ಸೂಕ್ಷ್ಮವಾದ ಕೆತ್ತನೆಯ ಪ್ರಾರಂಭಗೊಳ್ಳುತ್ತದೆ. ಪೆನ್ನಿನಿಂದ ತಯಾರಿಸಲಾದ ರೇಖಾಚಿತ್ರದ ಹೊರಗಿನ ನಿರುಪಯುಕ್ತ ಭಾಗವನ್ನು ಕೆತ್ತಿ ತೆಗೆದ ನಂತರ ಎರಡನೇ ಹಂತದ ಕೆಲಸ ಪ್ರಾರಂಭಗೊಳ್ಳುತ್ತದೆ. ಈ ಹಂತದಲ್ಲಿ ಕೆತ್ತಲಾದ ತೆಂಗಿನಕಾಯಿಯನ್ನು ಸಂಪೂರ್ಣವಾಗಿ ಒ¨ªೆಯಾಗುವಂತೆ ಫೆವಿಕಾಲ… ಹಚ್ಚಿ, ನಂತರದಲ್ಲಿ ಒಣಗಲು ಬಿಸಿಲಿನಲ್ಲಿ ಇಡುತ್ತಾರೆ. ನಂತರ, ಈ ಮೂರ್ತಿಯು ಸಂಪೂರ್ಣವಾಗಿ ಕಟ್ಟಿಗೆಯಂತೆ ಗಟ್ಟಿಯಾಗಿ ಬಿಡುತ್ತದೆ. ಒಣಗಿದ ಮೂರ್ತಿಗೆ ಸಂಪೂರ್ಣವಾಗಿ ಟಚ್‌ವುಡ್ ಲೇಪಿಸಿ, ಹದವಾದ ಬಿಸಿಲಿನಲ್ಲಿ ಒಣಗಿಸಿ, ನೈಸರ್ಗಿಕ ಬಣ್ಣಗಳನ್ನು ಬಳಸಿ ಅಂತಿಮ ಸ್ಪರ್ಶ ನೀಡಿ ಜೀವ ತುಂಬುತ್ತಾರೆ. ಮನಸ್ಸಿನಲ್ಲಿ ರೂಪಿಸಿಕೊಂಡ ವೈವಿಧ್ಯಮಯ ಆಕೃತಿಗಳು ಕೇವಲ 1-2 ಗಂಟೆಗಳಲ್ಲಿ ರೂಪುಗೊಳ್ಳುತ್ತವೆ.
ವಿವಿಧ ಹಬ್ಬ, ಹರಿದಿನಗಳಿಗೆ ಅನುಗುಣವಾಗಿ ಇವರೊಳಗೆ ಅಡಗಿರುವ ಕೌಶಲವು ಜಾಗೃತಗೊಂಡು ಜೀವಂತಿಕೆಯ ಸ್ಪರ್ಶವನ್ನು ಪಡೆಯುತ್ತದೆ. ಗಣೇಶ ಚತುರ್ಥಿ ಬಂತೆಂದರೆ ಸುಂದರವಾದ ಪರಿಸರ ಸ್ನೇಹಿ ನಾರಿಕೇಳ ಗಣಪತಿ, ಶಿವರಾತ್ರಿಯಲ್ಲಿ ಶಿವನಮೂರ್ತಿ, ನವರಾತ್ರಿ ಬಂದರೆ ನವದುರ್ಗೆಯರ ಮೂರ್ತಿ, ಕ್ರಿಸ್ಮಸ್ ಬಂತೆಂದರೆ ಐಸ್‌ಕ್ರೀಮ್ ಕಡ್ಡಿಯಿಂದ ತಯಾರಿಸಲಾದ ಚರ್ಚ್‌ಗಳು, ಹುಲ್ಲುಕಡ್ಡಿ ಬಳಸಿ ತಯಾರಿಸಿದ ಗುಡಿಸಲು ಹಾಗೂ ನಕ್ಷತ್ರಗಳು, ದೀಪಾವಳಿ ಸಂದರ್ಭದಲ್ಲಿ ಐಸ್‌ಕ್ರೀಮ್ ಕಡ್ಡಿಯ ಆಕಾಶಬುಟ್ಟಿಗಳು ತಯಾರಾಗುತ್ತದೆ.
ಭಾವಿಕಟ್ಟಿ ಅವರ ಮನೆಯೇ ಒಂದು ಕರಕುಶಲ ವಸ್ತುಗಳ ಸಂಗ್ರಹಾಗಾರ. ಇಲ್ಲಿ ತೆಂಗಿನಕಾಯಿಗಳಿಂದ ತಯಾರಿಸಿದ ಸರಿ ಸುಮಾರು ಇನ್ನೂರಕ್ಕೂ ಮಿಕ್ಕಿದ ವೈವಿಧ್ಯಮಯ ಮೂರ್ತಿಗಳು ಕಾಣಸಿಗುತ್ತವೆ. ತನ್ನ ತೆಂಗಿನಕಾಯಿಯ ಕಲಾಕೃತಿಗಾಗಿ ಉತ್ತರ ಕನ್ನಡದ ಕರಾವಳಿಯಲ್ಲಿ ಹಾಗೂ ಯÇÉಾಪುರದಲ್ಲಿ ದೊರೆಯುವ ದೊಡ್ಡ ಗಾತ್ರ ತೆಂಗಿನ ಕಾಯಿಗಳನ್ನು ಖರೀದಿಸುತ್ತಾರೆ.
ಸಂತೋಷ್ ರಾವ್ ಪೆರ್ಮುಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.