ಬನ್ನಿ ಕುಂಭಮೇಳಕ್ಕೆ…


Team Udayavani, Feb 16, 2019, 12:40 AM IST

12.jpg

ಪ್ರಯಾಗ್‌ ರಾಜ್‌ನಲ್ಲಿ ಇತ್ತೀಚೆಗಷ್ಟೇ ಮುಗಿದ ಕುಂಭಮೇಳದ ದೃಶ್ಯವೈಭವ ಈಗಲೂ ಕಣ್ಮುಂದೆ ನಿಂತಿದೆ. ಹೀಗಿರುವಾಗಲೇ ತಿರುಮಕೂಡಲು ನರಸೀಪುರದಲ್ಲೂ ಕುಂಭಮೇಳದ ಸಡಗರ ಆರಂಭವಾಗಿದೆ. ನದಿಯ ಮಧ್ಯ 63 ಸ್ವಾಮಿಗಳ ನೇತೃತ್ವದಲ್ಲಿ ಈ ಉತ್ಸವ ನಡೆಯಲಿದೆ ಎಂಬುದೇ ರೋಮಾಂಚನ ಉಂಟಮಾಡುವ ವಿಚಾರ…

ಕುಂಭ ಮೇಳದ ಮಹಾ ಸಂಭ್ರಮಕ್ಕೆ ಕ್ಷಣಗಣನೆ ನಡೆಯುತ್ತಿದೆ. ತಿ. ನರಸೀಪುರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ದಕ್ಷಿಣ ಭಾರತದ ಅಲಹಾಬಾದ್‌ ಅಂದರೆ ತಿರಮಕೂಡಲು ನರಸೀಪುರ.  ಪ್ರಯಾಗ್‌ರಾಜಗೆ ಬಂದಂತೆ  ದೇಶ, ವಿದೇಶಗಳಿಂದ ಈ ಮಹಾ ಕುಂಭಮೇಳಕ್ಕೂ ಹಾಜರಾಗಲು ಜನ ಆಗಮಿಸುತ್ತಿದ್ದಾರೆ. ಬಹಶ 10-15  ಲಕ್ಷ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ, 20 ಹಾಸಿಗೆಗಳ ಸಾಮರ್ಥಯ ಹೊಂದಿರುವ ಪ್ರತ್ಯೇಕ ಆಸ್ಪತ್ರೆ ಕೂಡ ತೆರೆದಾಗಿದೆ. ದಿನಕ್ಕೆ ಮೂರು ಪಾಳಿಯಂತೆ ಇಪ್ಪತ್ತು ನಾಲ್ಕು ಗಂಟೆ ಸೇವೆ ನೀಡಲು 10-15ಜನರ ವೈದ್ಯರ ತಂಡ ಸಿದ್ಧವಾಗಿದೆ. ತುರ್ತು ಪರಿಸ್ಥಿತಿ ಎದುರಾದರೆ ಅದಕ್ಕೆಂದೇ ನಾಲ್ಕು ಆಂಬುಲೆನ್ಸ್‌ಗಳು ನಿಂತಿವೆ. ಒಟ್ಟಾರೆ, ಮೂರು ದಿನಗಳ ಈ ಭಕ್ತಿಯ ಮೇಳದಲ್ಲಿ ಜನ ಮಿಂದೆದ್ದು ಪಾವನರಾಗುವ ಸಂಕಲ್ಪ ಈಗಾಗಲೇ ನರಸೀಪುರದಲ್ಲಿ ಕಾಣುತ್ತಿದೆ. 

ಸಡಗರ ಎಷ್ಟಿದೆ ಎಂದರೆ, ಸರ್ಕಾರಿ ಶಾಲೆಯ ಮಕ್ಕಳೂ, ಕಾಲೇಜು ಹುಡುಗರೂ ಸ್ವತ್ಛ ನರಸೀರಪುರ ಅಭಿಯಾನದಲ್ಲಿ  ಕೈ ಜೋಡಿಸಿದ್ದಾರೆ. ಬಿದ್ದ ಕಸವನ್ನು ಶುಚಿ ಮಾಡುವ ಕೆಲಸವನ್ನು ನಾಲ್ಕೈದು ಸಲ ಮಾಡಿದ್ದಾಗಿದೆ. 

ವಿಶೇಷ ಎಂದರೆ, ಸಂಗಮದ ಮಧ್ಯ ಭಾಗದಲ್ಲಿ ವೇದಿಕೆ. ಅಂದರೆ, ಸೇತುವೆ- ಗಂಜಾನರಸಿಂಹ ಸ್ವಾಮಿ ದೇವಾಲಯದಿಂದ ಕುಂಭಮೇಳ ನಡೆಯುವ ಅಗಸೆöàಶ್ವರ ದೇವಾಲಯದ ವರೆಗೆ ಸೇನೆಯ ನೆರವಿನಿಂದ ತಾತ್ಕಾಲಿಕ ಸೇತುವೆ ನಿರ್ಮಾಣವಾಗಿದೆ.  ಅಲ್ಲಿಗೆ ಸಾಗಲು ತಾತ್ಕಾಲಿಕ ರಸ್ತೆ ನಿರ್ಮಿಸವಾಗಿದೆ. ಹನುಮಂತ ಲಂಕೆಗೆ ಹಾದಿ ನಿರ್ಮಿಸಿದಂತೆಯೇ ನದಿ ಆಳ ಇರುವ ಕಡೆ ಮರಳು ಚೀಲಗಳನ್ನು ಪೇರಿಸಿ, ಸುಸಜ್ಜಿತವಾದ ಹಾದಿ ರೂಪಗೊಂಡಿದೆ. ಕುಂಭ ಮೇಳದ ಸಡಗರ ನದಿಯ ಮಧ್ಯೆ 63 ಸ್ವಾಮೀಜಿಗಳ ಸಾನಿಧ್ಯದಲ್ಲಿ ಶುರುವಾಗಲಿದೆ ಅನ್ನೋದು ರೋಮಾಂಚನದ ಸಂಗತಿ. 

ಹುಟ್ಟಿದ್ದು ಹೇಗೆ?
ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಗಳಲ್ಲಿ ಕುಂಭಮೇಳ ಉತ್ಸವಗಳನ್ನಾಚರಿಸಿ, ಪರ್ವಕಾಲದಲ್ಲಿ ಪುಣ್ಯಸ್ನಾನ ಮಾಡುವ ಪದ್ಧತಿ ಪ್ರಾಚೀನಕಾಲದಿಂದಲೂ ಜಾರಿಯಲ್ಲಿದೆ. ಉತ್ತರ ಭಾರತದ ಪ್ರಯಾಗ, ಹರಿದ್ವಾರ,ನಾಸಿಕ್‌,ಉಜ್ಜಯಿನಿಗಳಂಥ ಸಂಗಮ ಕ್ಷೇತ್ರಗಳಲ್ಲಿ ಜರುಗುವ ಕುಂಭಮೇಳಗಳಲ್ಲಿ ಕೋಟ್ಯಂತರ ಮಂದಿ ಶ್ರದ್ಧಾಭಕ್ತಿಗಳಿಂದ ಭಾಗವಹಿಸಿ ಪುಣ್ಯಸ್ನಾನ ಮಾಡಿ ಧನ್ಯರಾಗುವುದನ್ನು ಕಾಣುತ್ತಿದ್ದೇವೆ. ಆದರೆ, ಪುಣ್ಯಾರ್ಜನೆಯ ಈ ಸೌಭಾಗ್ಯದಿಂದ ದಕ್ಷಿಣ ಭಾರತದವರು ವಂಚಿತರಾಗುತ್ತಿದ್ದರು.  ಇದನ್ನು ಮನಗಂಡ  ಕೈಲಾಸಾಶ್ರಮದ ಪ್ರಾತಃಸ್ಮರಣೀಯರಾದ ತಿರುಚ್ಚಿ ಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಓಂಕಾರದ ಶಿವಪುರಿ ಸ್ವಾಮೀಜಿಗಳು ಸೇರಿ  ತಿ. ನರಸೀಪುರ ಕ್ಷೇತ್ರದಲ್ಲಿ ಕುಂಭಮೇಳ ಆಚರಿಸುವ ನಿರ್ಧಾರ ಕೈಗೊಂಡರು.  1989ರಲ್ಲಿ, ಪ್ರಪ್ರಥಮ ಬಾರಿಗೆ ಕುಂಭಮೇಳ ಪ್ರಾರಂಭಿಸಲಾಯಿತು. ಈ ತನಕ ಯಶಸ್ವಿಯಾಗಿ ನಡೆಯುತ್ತಲೇ ಇದೆ.  

ಈ ಸ್ಥಳ ಏಕೆ ಮುಖ್ಯ?
ತಿರುಮಕೂಡಲು ನರಸೀಪುರ ಕ್ಷೇತ್ರವು ಕಾವೇರಿ, ಕಪಿಲ ಮತ್ತು ಸ್ಫಟಿಕಸರೋವರಗಳ ಸಂಗಮ ಕ್ಷೇತ್ರ. ಸ್ಪಟಿಕ ಸರೋವರ ಗುಪ್ತಗಾಮಿನಿಯಾಗಿ ಹರಿಯುತ್ತಿದೆ.  ಹೀಗಾಗಿ ಪುರಾಣ-ಇತಿಹಾಸಗಳಲ್ಲಿ ತಿ. ನರಸೀಪುರ ಮಹತ್ವದ ಮನ್ನಣೆಗಳಿಸಿದೆ. ಇಲ್ಲಿನ ಎರಡೂ ದಂಡೆಗಳಲ್ಲಿರುವ ಅತ್ಯಂತ ಪ್ರಾಚೀನ ಕಾಲದ ಗುಂಜಾನರಸಿಂಹಸ್ವಾಮಿ ಮತ್ತು ಅಗಸೆöàಶ್ವರಸ್ವಾಮಿ ದೇವಸ್ಥಾನಗಳು ಹರಿ-ಹರರ ಸಾಮರಸ್ಯಕ್ಕೆ  ಸಾಕ್ಷಿಭೂತವಾಗಿವೆ. ಅಗಸ್ತÂಮುನಿಗಳು ಸ್ವತಃ ತಾವೇ ಇಲ್ಲಿನ ಮರಳಿನಿಂದ ಲಿಂಗವನ್ನು ಮಾಡಿ, ಇಲ್ಲಿಯೇ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದರೆಂಬುದನ್ನು ಶ್ರೀ ಅಗಸೆöàಶ್ವರಸ್ವಾಮಿ ದೇವಸ್ಥಾನವು ಉದ್ಘೋಷಿಸುತ್ತಿದೆ. ಇಲ್ಲಿ ಹರಿಯುವ ತೀರ್ಥ ಗಂಗಾತೀರ್ಥಕ್ಕಿಂತಲೂ ಒಂದು ಗುಲಗಂಜಿ ಪ್ರಮಾಣದಷ್ಟು ಶ್ರೇಷ್ಠವೆಂದು ಶ್ರೀ ಗಂಜಾ ನರಸಿಂಹಸ್ವಾಮಿಯ ಹಸ್ತದಲ್ಲಿರುವ ತಕ್ಕಡಿ ಸಂಕೇತಿಸುತ್ತದೆ.  ಜೊತೆಗೆ,  ಅತ್ಯಂತ ಪ್ರಾಚೀನವಾದ ಇಲ್ಲಿನ ಶ್ರೀ ಭಾರದ್ವಾಜ ಋಷ್ಯಾಶ್ರಮ, ಶ್ರೀಚೌಡೇಶ್ವರಿ ದೇವಸ್ಥಾನ, ಶ್ರೀ ಹನುಮಂತೇಶ್ವರ ದೇವಸ್ಥಾನ, ರುದ್ರಪಾದ, ಅಕ್ಷಯ ವಟವೃಕ್ಷ, ಅಶ್ವತ್ಥವೃಕ್ಷ, ಗುಡಿ-ಮಂಟಪಗಳು, ಶ್ರೀ ವ್ಯಾಸರಾಜ ಮಠ ಮೊದಲಾದವು ಈ ಕ್ಷೇತ್ರದ ಪಾವಿತ್ರ್ಯವನ್ನು ನೂರ್ಮಡಿಗೊಳಿಸಿವೆ. ಅನೇಕ ಮತ-ಪಂಥ-ಧರ್ಮಗಳು ಏಕತ್ರ ಸಮ್ಮಿಲನಗೊಂಡು ಸರ್ವಧರ್ಮಗಳ ಸಂಗಮ ಕ್ಷೇತ್ರವೂ ಆಗಿ ಈ ತಿರುಮಕೂಡಲು ಶ್ರೀಕ್ಷೇತ್ರ ಕಂಗೊಳಿಸುತ್ತಿದೆ.   

ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.