ಶಾಸಕರ ಖರೀದಿಗೆ ಬಿಜೆಪಿ ಕಪ್ಪು ಹಣ ಬಳಕೆ


Team Udayavani, Feb 16, 2019, 7:27 AM IST

sasakaaa.jpg

ಹಾಸನ: ಬಿಜೆಪಿಯವರು ಕಪ್ಪು ಹಣವನ್ನು ಶಾಸಕರ ಖರೀದಿಗೆ ಬಳಸುತ್ತಿದ್ದಾರೆ. ಯಡಿಯೂರಪ್ಪ ಅವರೇ ಒಬೊಬ್ಬ ಶಾಸಕರಿಗೆ 40 ಕೋಟಿ ರೂ ಆಫ‌ರ್‌ ಕೊಡುತ್ತಾರೆ. ಇಂಥವರು ಯಾವ ಮುಖವಿಟ್ಟುಕೊಂಡು ರಾಜ್ಯಪಾಲರಿಗೆ ದೂರು ಕೊಡಲು ಹೋಗುತ್ತಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಚನ್ನರಾಯಪಟ್ಟಾಣ ತಾಲೂಕು ಬೀರೂರು ಬಳಿ ಹೆಲಿಪ್ಯಾಡ್‌ನ‌ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅವರಿಗೆ ದೂರು ನೀಡುವ ನೈತಿಕತೆ ಇದೆಯೇ ? ಪ್ರಧಾನಿ ನರೇಂದ್ರಮೋದಿ ಅವರು ರಾಷ್ಟ್ರದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ.

ಕಾಳಧನಿಕರನು ಹಿಡಿದು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಾರೆ. ಹಾಗಾದರೆ ಕಪ್ಪು ಹಣದಲ್ಲಿ ಶಾಸಕರನ್ನು ಖರೀದಿಸಲು ಯತ್ನಿಸುತ್ತಿರುವ ರಾಜ್ಯ ಬಿಜೆಪಿ ಮುಖಂಡರಿಗೆ ಮೋದಿಯವರು ಏನು ಹೇಳುತ್ತಾರೆ ? ರಾಜ್ಯದ ಬಿಜೆಪಿ ಮುಖಂಡರಿಗೆ ಎಲ್ಲಿಂದ ಹಣ ಬರುತ್ತಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. 

ಆಪರೇಷನ್‌ ಕಮಲದ ಆಡಿಯೋದಲ್ಲಿನ ದನಿಯನ್ನು ಕೇಳಿದರೆ ಯಡಿಯೂರಪ್ಪ ಅವರದೇ ದನಿ ಎಂಬುದು ಎಂಥವರಿಗೂ ಗೊತ್ತಾಗುತ್ತದೆ. ಇಂಥ ವ್ಯಾಪಾರಕ್ಕೆ ಇಳಿದಿರುವವರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆಯಾಗಲಿ, ಜೆಡಿಎಸ್‌ ಬಗ್ಗೆಯಾಗಲಿ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ ಎಂದರು.

ಸರ್ಕಾರ ಕಲ್ಲು ಬಂಡೆಯಂತಿದೆ: ರಾಜ್ಯದ ಬಿಜೆಪಿ ನಾಯಕರಿಗೆ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂಬ ಮನಸ್ಥಿತಿ ಇಲ್ಲ. ಎಚ್‌.ಡಿ.ಕುಮಾರಸ್ವಾಮಿ ಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕು ಎಂಬುದೊಂದೇ ಗುರಿ. ಆದರೆ ಅವರಿಗೆ ಅದು ಸಾಧ್ಯವಿಲ್ಲ.

ನನ್ನ ಸರ್ಕಾರ ಕಲ್ಲುಬಂಡೆಯ ತರಹ ಗಟ್ಟಿಯಾಗಿದೆ. ಸರ್ಕಾರ ಉರುಳಿಸಲು ಬಿಜೆಪಿಯವರು ಏನೇ ಕುತಂತ್ರ ಮಾಡಿದರೂ ನನ್ನ ಸರ್ಕಾರ ಉರುಳಿಸಲು ಸಾಧ್ಯವಿಲ್ಲ.  ದೇವರ ಆಶೀರ್ವಾದ ಇರುವರೆಗೂ ಯಾರು ಕುತಂತ್ರ ನಡೆಸಿದರೂ ನ್ನ ಸರ್ಕಾರ ಇಳಿಸಲಾಗದು. ದೇವರು ಎಷ್ಟು ದಿನ ನಾನು ಅಧಿಕಾರದಲ್ಲಿರಬೇಕು ಎಂದು ಬರೆದಿದ್ದಾನೋ ಅಲ್ಲಿಯವರೆಗೂ ಮುಖ್ಯಮಂತ್ರಿಯಾಗಿರುವೆ ಎಂದು ಸ್ಪಷ್ಟಪಡಿಸಿದರು. 

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಲೇ ಬಂದಿದ್ದಾರೆ. ಆದರೆ ಅಸ್ಥಿರತೆಯ ಆತಂಕದ ನಡುವೆಯೂ ಸಮ್ಮಿಶ್ರ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗೆ ರೈತರ ಸಮಸ್ಯೆಗಳಿಗೆ ಶ್ರಮಿಸುತ್ತಿದೆ ಎಂದರು. 

ನಾನು ಜನರ ಕ್ಲರ್ಕ್‌, ಆದರೆ ಯಡಿಯೂರಪ್ಪ ಏನು ? 
ಹಾಸನ:
ನಾನು ಯಾವುದೇ ಪಕ್ಷದ ಕ್ಲರ್ಕ್‌ ಅಲ್ಲ. ರಾಜ್ಯದ ಆರೂವರೆ ಕೋಟಿ ಜನರ ಕ್ಲರ್ಕ್‌ನಂತೆ ಕೆಲಸ ಮಾಡುತ್ತಿದ್ದೇನೆ. ಜನರ ಕೆಲಸವನ್ನು ಒಬ್ಬ ಕ್ಲರ್ಕ್‌ನಂತೆ ಮಾಡಲು ನನಗೆ ಹೆಮ್ಮೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ತಿರುಗೇಟು ನೀಡಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಆಳುವ ಪಕ್ಷದ ಅಧ್ಯಕ್ಷನಾಗಿ ಅಮಿತ್‌ ಶಾ ಅವರು ಇಷ್ಟು  ಹಗುರವಾಗಿ ಮಾತನಾಡಬಾರದು. ಅಮಿತ್‌ ಶಾ ಅವರು  ಒಬ್ಬ ಮುಖ್ಯಮಂತ್ರಿಯನ್ನು  ಕ್ಲರ್ಕ್‌ ಎಂದು ಟೀಕಿಸುವುದಾದರೆ ಅವರ ಪಕ್ಷದ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಏನು ಮಾಡುತ್ತಿ¤ದ್ದಾರೆ ಎಂದು ಗೊತ್ತಿಲ್ಲವೇ ? ಅಪರೇಷನ್‌ ಕಮಲ, ಶಾಸಕರ ಖರೀದಿ ಮಾಡುತ್ತಿರುವ ಅವರ ಪಕ್ಷದ ರಾಜ್ಯಾಧ್ಯಕ್ಷರ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಅಮಿತ್‌ಶಾ ಅವರಿಗೆ ನೈತಿಕತೆ ಇದ್ದರೆ ಆಪರೇಷನ್‌ ಕಮಲದ ಬಗ್ಗೆ ಮಾನಾಡಬೇಕಾಗಿತ್ತು. ಆ ಬಗ್ಗೆ ಮಾತನಾಡಲಾರದಷ್ಟು ಮುಜುಗರದ ಸ್ಥಿತಿಯಲ್ಲಿದ್ದಾರೆ ಎಂದು ಚುಚ್ಚಿದ ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರದ ಅಭಿವೃದ್ಧಿಗಿಂತ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಮುಂದಿದೆ ಎಂದು ಹೇಳಿದರು. 

ಶಾಸಕ ಪ್ರೀತಂಗೌಡರ ಸಂಸ್ಕೃತಿ ಏನೆಂದು ಗೊತ್ತಾಗಿದೆ: ದೇವೇಗೌಡರ ಮಕ್ಕಳು ಹತ್ಯೆ ಮಾಡಿಸುವಷ್ಟು ಸಂಸ್ಕಾರ ಹೀನರಲ್ಲ. ಎಚ್‌.ಡಿ.ಕುಮಾರಸ್ವಾಮಿ ಮತ್ತು ಎಚ್‌.ಡಿ.ರೇವಣ್ಣ ನನ್ನನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಆರೋಪ ಮಾಡುವ  ಹಾಸನ ಕ್ಷೇತ್ರದ ಶಾಸಕನ ಸಂಸ್ಕೃತಿ ಏನೆಂದು ಗೊತ್ತಾಗುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು. 

ಶಾಸಕನ ಮನೆಯ ಮುಂದೆ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆಂಬ ಮಾಹಿತಿ ತಿಳಿದ ತಕ್ಷಣ 5 ನಿಮಿಷದೊಳಗೆ ಅವರ ನಿವಾಸದ ಬಳಿ ಪೊಲೀಸ್‌ ರಕ್ಷಣೆಗೆ ಸೂಚನೆ ನೀಡಿದೆ. ಆದರೂ ನಾವು ಹತ್ಯೆ ಸಂಚು ರೂಪಿಸಿದ್ದೇವೆಂದು ಹೇಳುವ ಶಾಸಕನ ಆರೋಪಕ್ಕೆ ಪ್ರತಿಕ್ರಿಯಿಸಲೂ ಬಾರದು ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಅವರ ಹೆಸರು ಹೇಳದೆ ಮುಖ್ಯಮಂತಿರಯವರು ವಾಗ್ಧಾಳಿ ನಡೆಸಿದರು. 

ಹಾಸನದ ಶಾಸಕ ಬ್ರಹ್ಮನೇ?: ನಮ್ಮ ಬಗ್ಗೆ ಮತ್ತು ಜೆಡಿಎಸ್‌ ಕಾರ್ಯಕರ್ತರು ಗೂಂಡಾಗಳು ಎಂದು ಹೇಳುವ ಶಾಸಕ ಎಂತಹ ಹಿಂಬಾಲಕರನಿಟ್ಟುಕೊಂಡಿದ್ದಾರೆ. ಅವರೆಲ್ಲಾ ಎಂತೆಂಥಾ ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ಆ ಶಾಸಕನ ಗನಂದಾರಿ ಕೆಲಸ ಮತ್ತು ಅವರ ಸಹಪಾಠಿಗಳು ಏನೇನು ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕೇ ಎಂದೂ ಪ್ರಶ್ನಿಸಿದರು.

ಶಾಸಕರ ಖರೀದಿಯ ವ್ಯವಹಾರ ಕುದುರಿಸಲು ದೇವದುರ್ಗಕ್ಕೆ ಹೋಗಿ ನನ್ನ ತಂದೆಯವರ ಆಯಸ್ಸಿನ ಬಗ್ಗೆ ಮಾತನಾಡುತ್ತಾರೆ. ಇವರೇನು ಬ್ರಹ್ಮನೇ ಎಂದು ಸಭೆಯಲ್ಲಿಯೂ ಮುಖ್ಯಮಂತ್ರಿಯವರು ಶಾಸಕ ಪ್ರೀತಂಗೌಡ ವಿರುದ್ಧ ಆಕ್ರೋಶದ ನುಡಿಗಳನ್ನಾಡಿದರು. ಆಪರೇಷನ್‌ ಕಮಲದ ಆಡಿಯೋದ ಬಗ್ಗೆ ಎಸ್‌ಟಿ ತನಿಖೆಗಾಗಿ ಗೃಹ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದೂ ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದರು.

ಟಾಪ್ ನ್ಯೂಸ್

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.