ಆಜ್ರಿ – ಬಡಬಾಳು ರಸ್ತೆಗೆ ಇನ್ನೂ ದಕ್ಕದ ಡಾಮರು ಭಾಗ್ಯ
Team Udayavani, Feb 17, 2019, 12:30 AM IST
ವಿಶೇಷ ವರದಿ- ಆಜ್ರಿ: ಬಡಬಾಳುನಿಂದ ಆಜ್ರಿಗೆ ಸಂಪರ್ಕ ಕಲ್ಪಿಸುವ 8 ಕಿ.ಮೀ. ದೂರದ ಮಣ್ಣಿನ ರಸ್ತೆಗೆ 2 ದಶಕಕ್ಕೂ ಹೆಚ್ಚು ಕಾಲದಿಂದ ಬೇಡಿಕೆಯಿದ್ದರೂ, ಇನ್ನೂ ಡಾಮರೀಕರಣ ಆಗಿಲ್ಲ. ರಸ್ತೆಯನ್ನೇ ಅವಲಂಬಿಸಿಕೊಂಡಿರುವ ಈ ಭಾಗದ ಜನ ಧೂಳಿನಿಂದಾಗಿ ಹೈರಾಣಾಗಿದ್ದಾರೆ.
ಆಜ್ರಿಯಿಂದ ಜಡ್ಡಿನಮೂಲೆ, ಯಡೂರು, ಯಡ್ನಾಡಿಯಾಗಿ ಬಡಬಾಳುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಮಳೆಗಾಲದಲ್ಲಿ ಕೆಸರುಮಯ ರಸ್ತೆಯಾದರೆ, ಬೇಸಿಗೆಯಲ್ಲಿ ಧೂಳುಮಯ ರಸ್ತೆಯಿಂದಾಗಿ ಇಲ್ಲಿನ ಜನ ವರ್ಷವಿಡೀ ಸಂಕಷ್ಟಪಡುತ್ತಿದ್ದಾರೆ.
ಹತ್ತಿರದ ಮಾರ್ಗ
ಈ ಮಾರ್ಗವಾಗಿ ಆಜ್ರಿಯಿಂದ ಬಡಬಾಳು ಮೂಲಕವಾಗಿ ಜನ್ಸಾಲೆ, ಅಂಪಾರು, ಕುಂದಾಪುರಕ್ಕೂ ಸಂಚರಿಸಲು ಹತ್ತಿರದ ಮಾರ್ಗ ಇದಾಗಿದೆ. ಡಾಮರೀಕರಣವಾದರೆ ಸಾವಿರಾರು ಮಂದಿಗೆ ಪ್ರಯೋಜನ ವಾಗಲಿದೆ. ಈ ಮಾರ್ಗದಲ್ಲಿ 3-4 ಶಾಲಾ ಬಸ್‌ಗಳು, ನೂರಾರು ಬೇರೆ ಬೇರೆ ವಾಹನಗಳು ಸಂಚರಿಸುತ್ತವೆ. ಸುಮಾರು 3 ರಿಂದ 4 ಸಾವಿರ ಜನ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.
2 ದಶಕದ ಬೇಡಿಕೆ
ಈ ಮಣ್ಣಿನ ರಸ್ತೆಗೆ ಡಾಮರು ಆಗಬೇಕು ಎನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಬರೋಬ್ಬರಿ 20 ವರ್ಷಗಳಿಗೂ ಹಿಂದಿನಿಂದಲೂ ಈ ರಸ್ತೆಗೆ ಡಾಮರೀಕರಣ ಆಗಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆಯಾಗಿದೆ.
200 ಮೀಟರ್ ಡಾಮರು
ಆಜ್ರಿಯಿಂದ ಆರಂಭಗೊಳ್ಳುವ ಈ ರಸ್ತೆಯ ಸುಮಾರು 200 ಮೀಟರ್ ಮಾತ್ರ ಡಾಮರೀಕರಣ ಆಗಿದೆ. ಬಾಕಿ ಉಳಿದ ಸುಮಾರು 8 ಕಿ.ಮೀ. ದೂರದ ರಸ್ತೆಗೆ ಇನ್ನೂ ಡಾಮರು ಆಗಿಲ್ಲ.
ಚುನಾವಣೆಗೆ ಬಂದಾಗ ನೆನಪು
ಈ ರಸ್ತೆ ಡಾಮರೀಕರಣ ಆಗಬೇಕು ಎನ್ನುವುದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳಿಗೂ ಬೇಡಿಕೆ ಸಲ್ಲಿಸಿದ್ದೇವೆ. ಆದರೆ ಅವರಿಗೆ ಚುನಾವಣೆ ಬಂದಾಗ ಒಮ್ಮೆ ಮಾತ್ರ ನೆನಪು ಆಗುತ್ತದೆ. ಈ ಬಾರಿಯಾದರೂ ಡಾಮರೀಕರಣ ಆಗಲಿ ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.
ಮನವಿ ಸಲ್ಲಿಸಲಾಗಿದೆ
ಸುಮಾರು 8 ಕಿ.ಮೀ. ದೂರದ ರಸ್ತೆಗೆ ಡಾಮರೀಕರಣ ಬೇಡಿಕೆಯಿದ್ದು, ಇದಕ್ಕೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಅಷ್ಟೊಂದು ಅನುದಾನ ಪಂಚಾಯತ್‌ನಲ್ಲಿ ಇಲ್ಲದಿರುವುದರಿಂದ ಈ ಬಗ್ಗೆ ಈಗಿನ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.
– ವಿನೋದ,ಅಧ್ಯಕ್ಷರು,ಆಜ್ರಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Viksit Bharat ‘ಯಂಗ್ ಲೀಡರ್ ಡೈಲಾಗ್’:ಉಡುಪಿಯ ಮನು ಶೆಟ್ಟಿ ಆಯ್ಕೆ
ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.