42 ಕೆರೆಗಳಿರುವ ತೆಕ್ಕಟ್ಟೆ ಗ್ರಾಮದಲ್ಲಿ ಬರಿದಾಗುತ್ತಿದೆ ನೀರ ಸೆಲೆ
Team Udayavani, Feb 17, 2019, 12:30 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪ್ರದೇಶ ಕೆರೆಗಳ ಗ್ರಾಮ.ಇಲ್ಲಿ 42 ಕೆರೆಗಳಿದ್ದು ಅದರಲ್ಲಿ 10 ಕೆರೆಗಳು ಮಾತ್ರ ನೀರಾವರಿಗೆ ಬಳಕೆಯಾಗುತ್ತಿವೆ. ಇತರ ಕೆರೆಗಳು ಅತಿಕ್ರಮಣಗೊಂಡು ಮೂಲ ಸ್ವರೂಪ ಕಳೆದುಕೊಂಡಿವೆ. ಇದರಿಂದ ಗ್ರಾಮದಲ್ಲಿ ಅಂತರ್ಜಲದ ಕೊರತೆ ಕಾಡುತ್ತಿದೆ.
ನಿರ್ವಹಣೆಯಿಲ್ಲ
ಇಲ್ಲಿನ ಕೃಷಿ ಚಟುವಟಿಕೆ ಗಳಿಗೆ ಮೂಲ ಸೆಲೆಯಾದ ಕೆರೆಗಳು ನಿರ್ವಹಣೆ ಇಲ್ಲದೆ ಹೂಳುತುಂಬಿವೆ. ಕೃಷಿ ಭೂಮಿಗಳ ಗೃಹ/ಕಟ್ಟಡ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದ್ದು ಕೆರೆಗಳು ಅತಿಕ್ರಮಣದೊಂದಿಗೆ ತ್ಯಾಜ್ಯ ಎಸೆಯುವ ಜಾಗವಾಗಿ ಪರಿವರ್ತನೆಗೊಳ್ಳುತ್ತಿವೆ.
ಅಂತರ್ಜಲ ಕುಸಿತ
ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಮೆ, ಕನ್ನುಕೆರೆ, ಮಾಲಾಡಿ, ಮಲ್ಯಾಡಿ ಭಾಗಗಳಲ್ಲಿ 5,590ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, 1,638 ವಾಣಿಜ್ಯ ಕಟ್ಟಡ ಹಾಗೂ ಮನೆಗಳನ್ನು ಒಳಗೊಂಡಿದೆ.
ಇಲ್ಲೆಲ್ಲ ವ್ಯಾಪಕ ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಮಿತಿಮೀರಿ ಅಂತರ್ಜಲ ಬಳಕೆ ಇದೆ. ಇದರಿಂದ ಈಗಾಗಲೇ ನೀರಿನ ಮಟ್ಟ ಕುಸಿಯುತ್ತಿದೆ.
ಮುಂದಿನ ದಿನಗಳಲ್ಲಿ ಆಲುಗುಡ್ಡೆ, ಮಾಲಾಡಿ , ಕೊಮೆ, ಶೇಡಿಗುಳಿ ಪರಿಸರದಲ್ಲಿ ಇದರ ನೇರ ಪರಿಣಾಮವಾಗುವ ಸಾಧ್ಯತೆ ಯನ್ನೂ ಅಲ್ಲಗಳೆಯುವಂತಿಲ್ಲ. ಹೀಗಾಗುವ ಮೊದಲೇ ಎಚ್ಚೆತ್ತುಕೊಂಡಲ್ಲಿ ಮಾತ್ರವೇ ಸಮಸ್ಯೆಯಿಂದ ಪಾರಾಗುವುದು ಸಾಧ್ಯ.
ವರದಾನದಂತಿತ್ತು
ಕುಂಭಾಸಿ ಹಾಗೂ ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಗಡಿಭಾಗದಲ್ಲಿ ಸುಮಾರು 3ಎಕರೆ ವಿಸ್ತೀರ್ಣದ ಶೇಡಿಗುಳಿ ಮದಗ ಹಿಂದೆ ಕೃಷಿಕರ ಪಾಲಿಗೆ ವರವಾಗಿದ್ದು, ಸುತ್ತಮುತ್ತಲಿನ ಸುಮಾರು ನೂರಾರು ಎಕರೆ ಕೃಷಿ ಭೂಮಿಗಳಿಗೆ ನೀರುಣಿಸುತ್ತಿತ್ತು.ಬದಲಾದ ಕಾಲದಲ್ಲಿ ಶೇಡಿಗುಳಿ ಮದಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಗಿಡಗಂಟಿಗಳು ಆವರಿಸಿದೆ. ಈಗಾಗಲೇ ಮದಗದ ಸುತ್ತಮುತ್ತಲಿನ ಜಾಗಗಳು ಅತಿಕ್ರಮಣಗೊಳ್ಳುತ್ತಿದೆ.
ಸಂರಕ್ಷಿಸಬೇಕು
ಪ್ರಕೃತಿ ಮೇಲೆ ಮಾನವನ ನಿರಂತರ ಪ್ರಹಾರದಿಂದಾಗಿ ಗ್ರಾಮದಲ್ಲಿ ಹಿಂದೆಂದೂ ಕಾಣದ ಅಂತರ್ಜಲಮಟ್ಟ ಕುಸಿತ ಎದುರಾಗುವ ಭೀತಿ ಇದೆ. ಆದ್ದರಿಂದ ಸರಕಾರ ಕೆರೆಗಳನ್ನು ಗುರುತಿಸಿ, ಸಂರಕ್ಷಿಸುವ ಕೆಲಸ ಮಾಡಬೇಕು.
– ವೆಂಕಟೇಶ್ ವೈದ್ಯ ಕೊಮೆ, ಕೃಷಿಕರು
ಸಹಕಾರ ಅಗತ್ಯ
ಮಳೆ ಕೊಯ್ಲು ಹಾಗೂ ಕೆರೆಗಳಿಗೆ ನೀರು ಇಂಗಿಸಿ ಅಂತರ್ಜಲವನ್ನು ಸಂರಕ್ಷಿಸುವ ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ. ಇದಕ್ಕೆ ಸರಕಾರದ ಸ್ಪಂದನೆ ಹಾಗೂ ಸಾರ್ವಜನಿಕರ ಸಹಕಾರ ಕೂಡ ಅತೀ ಅಗತ್ಯವಿದೆ.
– ಶೇಖರ ಕಾಂಚನ್
ಅಧ್ಯಕ್ಷರು, ಗ್ರಾ.ಪಂ.ತೆಕ್ಕಟ್ಟೆ
– ಟಿ.ಲೋಕೇಶ್‌ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.