ನೂರ್‌ ಕೋಟಿ ಖಲ್ಲಾಸ್‌, ಸಿವನೇ ಚೆಂಬುಲಿಂಗ


Team Udayavani, Feb 17, 2019, 12:30 AM IST

v-16.jpg

ಕುಮಾರಣ್ಣೋರು ಆಪರೇಸನ್‌ ಆಡಿಯೋ ಜಾಪಾಳಾ ಕೊಟ್ಟೇಟ್‌ಗೆ ಎಲ್ರೂ ಎದ್ದ್ನೋ ಬಿದ್ನೋ ಅಂತ ಬಂದು ಅಸೆಂಬ್ಲಿನ್ಯಾಗೆ ಸಿಕ್‌ ಸಿಕ್‌ದೋರ್ಗೆ ನಾನ್‌ ಆಪರೇಸನ್‌ ಆಗಿಲ್ಲ, ನನ್‌ ಮುಟ್ಟೋ ಧೈರ್ಯ ಯಾರ್ಕೆ„ತೆ ಅಂತೆಲ್ಲಾ ರೈಲು ಬಿಟ್ಟಿದ್ದೇ ಬಿಟ್ಟಿದ್ದು. ಪಾಪ, ಅಡ್ವಾನ್ಸ್‌ ಕೊಟ್ಟೋರು ಕೋಡಂಗಿ ತರಾ ನೋಡ್ತಾನೋ ಇದ್ರು. ಇನ್‌ ಮ್ಯಾಕೆ ಯಡ್ನೂರಪ್ನೊರು ಆಪ್‌ ರೇಸನ್‌ ಸಾವಾಸ್ಕೆ ಹೋಗಾಕಿಲ್ಲಾ ಅಂತ ಕಮ್ಲ ಪಕ್ಸ್‌ ದೋರೆ ಹೇಳ್ತಾವ್ರೆ. ಯಡಿಯೂರಪ್ಪ ಅಪೋಸ್‌ ಗ್ಯಾಂಗ್‌ ಕುಮಾರಣ್ಣ ಕಾಂಟ್ಯಾಕ್ಟ್ ನ್ಯಾಗೆ ಇತ್ತಂತೆ. ಅದ್ಕೆ ಕುಮಾರಣ್ಣೋರು, ಯಾರೇ ಕೂಗಾಡಲಿ ಅಂತ ಕಣ್‌ಮಿಟಿRಸಿ “ಏನೂ ಆಗಲ್ಲಾ ಬನ್ನಿ ಬದ್ರರ್‌’ ಅಂತಾನೇ ಹೇಳ್ತಿದ್ರು. ಕೆಲ್ರು ಎಂಎಲ್‌ಎಗ್ಳು ಹಬ್ಟಾ ಮಾಡ್ಕಂಡ್ರು. ನೂರ್‌ ಕೋಟಿ ಯಾರ್ಯಾರ್‌ ಜೇಬ್‌ ಸೇರರ್ಯೋತೂ, ಸಿವನೇ ಚೆಂಬುಲಿಂಗ…

ಚೇರ್ಮನ್ರು: ಏನ್ಲಾ ಅಮಾಸೆ ಎಲ್‌ಗಾ ಹೊಂಟೋಗಿದ್ದೆ
ಅಮಾಸೆ: ಅಸೆಂಬ್ಲಿ ನಡೀತಿತ್‌ತಲ್ವಾ ಸಾ, ಯಡ್ನೂರಪ್ನೊರು ಈ ಸರಾರ್ವ ಇರ್ತತೈತೇನ್ರಿ, ಸಿಎಂ ಬಜೆಟ್‌ ಮಂಡಿಸ್ತಾರೇನ್ರಿ ಅಂತ ಆವಾಜ್‌ ಹಾಕಿದ್ರಲ್ಲಾ ಅದ್ಕೆ ನೋಡ್ಕಂಡ್‌ ಬರುಮಾ ಅಂತ ಹೊಂಟೋಗಿದ್ದೆ
ಚೇರ್ಮನ್ರು: ಏನಾಯ್‌ತ್ಲಾ ಆಪ್ರೇಸನ್‌
ಅಮಾಸೆ: ಅಯ್ಯೂ, ಆಪ್ರೇಸನ್‌ಗೂ ಮೊದ್ಲೆ ಅಬಾರ್ಸನ್‌ ಆಗೋಯ್ತು. ಯಡ್ನೂರಪ್ನೊರು ತೆನೆ ಪಕ್ಸದ್‌ ಬುಟ್ಟಿಗ್‌ ಕೈ ಹಾಕಿದ್ರು, ಕುಮಾರಣ್ಣೋರು ಆಡಿಯೋ ಬಾಂಬ್‌ ಬಿಟ್ರಾ. ಆಪ್ಲೇಸನ್‌ ಆಗ್ದೇನೇ ಪೇಸೆಂಟ್‌ಗೆಲ್ಲಾ ಸುಸ್ತಾಗೋದ್ರು
ಚೇರ್ಮನ್ರು: ಜಾರಿಕಿಹೊಳಿ ಸಾವ್‌ಕಾರು ಮುಂಬೈ ಹೋಟೆಲ್‌ನ್ಯಾಗೆ ಅವ್ರೆ, ಇನ್ನೂ ಹದಿನೈದ್‌ ಜನ ಹೋಯ್ತಾರೆ ಅಂತಿದ್ರಲ್ಲ
ಅಮಾಸೆ: ಅಂತಿದ್ರು, ಆಡಿಯೋ ಬಾಂಬ್‌ ಬಿಟ್‌ಮ್ಯಾಕೆ, ಅಯ್ಯೋ, ನಾನಲ್ಲಪ್ಪಾ, ನಂಕೇನು ಗೊತ್ತಿಲ್ಲಪ್ಪಾ, ನಾನ್‌, ಕೈ ಬಿಟ್‌ ಹೋಗಲ್ಲಪ್ಪಾ, ನಮ್‌ ಲೀಡ್ರು ಸಿದ್ರಾಮಣ್ಣೋರೇ ಅಂತಾ ಲಾಲ್‌ಬಾಗ್‌ ಇಟ್ರಾ
ಚೇರ್ಮನ್ರು: ಒಳ್ಳೇ ಕಥೆ ಆಯ್ತು ಬುಡ್ಲಾ, ರೇವಣ್ಣೋರ್‌ ಹೇಳಿರ್‌ಲಿಲ್ವೆ ಏನೂ ಆಗಾಕಿಲ್ಲಾ ಅಂತ
ಅಮಾಸೆ: ಹೌದೇಳಿ, ರೇವಣ್ಣೋರು ಟೈಮ್‌ ನೋಡ್ಕಂಡ್‌ ಮಹೂರ್ತ ಇಟ್ಟಿದ್ರು, ಅತ್ಲಾಗೆ ಸರಕಾರ ಸೇಫ್, ಇತ್ಲಾಗೆ ಯಡ್ನೂರಪ್ನೊರು ಖಲ್ಲಾಸ್‌ ಅಂತ ಆಗೋಯ್ತು. ನೋಡಿ ಸಾ…ನಮ್‌ ಯಡ್ನೂರಪ್ನೊರೆಗೆ ಪಾಪ, ವಯಸಾಗದೆ ಸುಮ್ನೆ ಕುತ್ಕಳಿ ಅಂದ್ರೆ ಕೇಳಿಲ್ಲಾ, ಈಗ್‌ ಅನ್‌ಭವ್ಸ್‌ತಾವ್ರೆ ಅಂದ್ರು. 
ಚೇರ್ಮನ್ರು: ಅದೇನ್ಲಾ ರೇವಣ್ಣೋರು ಅಸೆಂಬ್ಲಿನ್ಯಾಗೆ ಸಿದ್ರಾಮಣ್ಣೋರ್‌ ಪಕ್ಕಾನೇ ಬಂದ್‌ ಕೂರ್‌ತಿದ್ರು
ಅಮಾಸೆ: ಕೈ ಪಕ್ಸ್‌ದೋರು ಕೈ ಕೊಟ್ರೆ ಸರಕಾರ ಹೋಯ್ತದೆ ಅಂತ. ಅದ್ಕೆ ಸಿದ್ರಾಮಣ್ಣೋರ್‌ ಹತ್ರ ಹೋಗಿ ಮುಂಬೈನಾಗಿ
ರೋರ್‌ನೆಲ್ಲಾ ಕರ್ಬುಡಿ ಸಾ…ಅಂತ ಮಾಲಿಷ್‌ ಮಾಡ್‌ ತಿದ್ರಂತೆ. ಎಷ್ಟಾದ್ರೂ ಹಳೇ ನಂಟು, ಸಿದ್ರಾಮ ಣ್ಣೋರು ಆಯ್ತುಬುಡು ರೇವಣ್ಣಾ ಅಂತ ಕರ್ಕೊಂಡ್‌ ಬಿಟ್ರಾ
ಚೇರ್ಮನ್ರು: ಜಾರಿಕಿಹೊಳಿ ಸಾವ್‌ಕಾರು, ಅಂದ್ರಗನಾ ಬಳ್ಳಾರಿ ನಾಗೇಂದ್ರುಡು ಯಾಕ್ಲಾ ಜಮೀರ್‌ ಅಣ್ಣೋರ್‌ ಜತೆಗೆ ಬಂದು ಸಿದ್ರಾಮಣ್ಣೋರ್ನ ನೋಡಿದ್ರು
ಅಮಾಸೆ: ಸೆಟ್ಲಮೆಂಟು ಸಾ. ಕೈ ಪಕ್ಸ್‌ದಾಗೆ ನಮ್ಗೆ ಶ್ಯಾನೇ ಬೇಸ್ರ ಆಗೈತೆ ಅಂತ ಅವ್ರು ಮುಂಬೈಗೋದಾಗ್ಲೆ ಜಮೀರಣ್ಣೋರು, ಆಯ್ತು ಆವೋ ಮಾತಾಡ್‌ಸ್ತೀನಿ ಹೈಕಮಾಂಡ್‌ಗೆ ಅಂತ ಹೇಳಿದ್ರಂತೆ. ಆದ್ರೆ, ನಾವ್‌ ಬರಾಕಿಲ್ಲ ಅಂತ ಹೋಗಿದ್ರು. ಆಪ್ರೇಸನ್‌ ಆಡಿಯೋ ಬಿಟ್‌ ಮ್ಯಾಕೆ ಬ್ಯಾಡಪ್ಪಾ ಸಾವಾಸಾ ಅಂತ ಡೈರೆಕ್ಟ್ ಫ್ಲೈಟ್‌ನ್ಯಾಗೆ ಬಂದು, ನೀನೇ ವಸಿ ಸಿದ್ರಾಮಣ್ಣೋರ್‌ ಹತ್ರ ಹೇಳು ಜಮೀರಣ್ಣಾ ಅಂತ ರಿಕ್ವೆಸ್ಟ್‌ ಮಾಡಿದ್ರಂತೆ ಅದ್ಕೆ ಅವ್ರುಡೋಂಟ್‌ವರಿ ಅಂತ ಕರ್‌ಕೊಂಡ್‌ ಹೋಗಿ ರಾಜಿ ಮಾಡ್ಸವ್ರೆ. ಅದ್ಕೊ ಮುಂಚೆ ಸಿವ್‌ಕುಮಾರಣ್ಣೋರು ಮುಳ್‌ಬಾಗ್ಲು ನಾಗೇಶಣ್ಣೋರ್ನ ಸಿದ್ರಾಮಣ್ಣೋರ್‌ ಹತ್ರ ಕರ್‌ಕಂಡ್‌ ಬಂದ್‌ ಬಿಟ್ಟಿದ್ರು
ಚೇರ್ಮನ್ರು: ಅಂಗಾರೆ ಇನ್ಮೆಕೆ ನೋ ಆಪ್ರೇಸನ್ನಾ
ಅಮಾಸೆ: ಮೋಸ್ಟ್‌ಲಿ ಡೌಟೇ. ಮೊದ್ಲು ಪಾರ್ಲಿಮೆಂಟ್‌ ಎಲೆಕ್ಸನ್‌ ಆದ್ಮೇಕೆ ಗೌರ್‌°ಮೆಂಟ್‌ ಇರಾಕಿಲ್ಲಾ ಅಂತಿದ್ರು, ಈಗ ಆಡಿಯೋ ಬಾಂಬ್‌ ಬಿದ್‌ಮ್ಯಾಕೆ ಆಮ್ಯಾಕೂ ಇರಬೋದು ಅಂತಾವ್ರೆ. ಆದ್ರೂ ಅಮಿತ್‌ ಸಾ ಅಣ್ಣೋರು ಬಿಡಾಕಿಲ್ಲಾ, 105 ಎಂಎಲ್‌ಎ ಇಟ್‌ಕಂಡು ನಾವ್‌ ಚೌಕಾಬಾರಾ ಆಡ್‌ಬೇಕಾ ಅಂತಾ ಬುಸ್‌ಗುಡ್‌ತಾವ್ರಂತೆ. ಯಡ್ನೂರಪ್ನೊರ್‌ ಮಾತ್ರಾ ನಾ ಇನ್‌ಮ್ಯಾಕೆ ಅಡ್ವಾನ್ಸ್‌
ಕೊಡಾಕಿಲ್ಲಾ ಅಂತ ಸೈಲಂಟಾಗಿ ಸೈಡ್‌ಗೊಗವ್ರಂತೆ
ಚೇರ್ಮನ್ರು: ಅಡ್ವಾನ್ಸ್‌ ಯಾಕ್ಲಾ
ಅಮಾಸೆ: ಅಯ್ಯೋ, ಈಗೀಗ್‌ ಕೈ -ತೆನೆ ಪಕ್ಸದ್‌ ಎಂಎಲ್‌ಎಗ್ಳು ಮುಂಬೈಗೋಯ್ತಿವಿ ಅಂದ್ರು ಕಮ್ಲ ಪಕ್ಸ್‌ದೋರು ಅಡ್ವಾನ್ಸ್‌ ಮಾಡೋರು, ಹೈದರಾಬಾದ್‌ಗೋಯ್ತಿನಿ ಅಂದ್ರು ಅಡ್ವಾನ್ಸ್‌ ಮಾಡೋರು, ಎಂಜಿ ರೋಡ್‌ನಾಗೆ ಐಸ್‌ಕ್ರೀಂ ತಿನ್‌ಬೇಕ್‌ ಅಂದ್ರು ಅಡ್ವಾನ್ಸ್‌ ಮಾಡ್ತಿದ್ರು. ಆಡಿಯೋ ಬಾಂಬ್‌ ಬಿದ್‌ ಮ್ಯಾಕೆ ನೋ…ಅಡ್ವಾನ್ಸ್‌.
ಚೇರ್ಮನ್ರು: ಆಡಿಯೋನ್ಯಾಗೆ ಯಡ್ನೂರಪ್ನೊರು ಸ್ಪೀಕರ್‌ ಸಾಹೇಬ್ರು, ಸಿದ್ರಾಮಣ್ಣೋರ್‌ಗೆಲ್ಲಾ ಬೈದವ್ರಂತೆ
ಅಮಾಸೆ: ಹೌದೇಳಿ, ಅದ್ಕೆ ಅಸೆಂಬ್ಲಿನ್ಯಾಗೆ ಎಲ್ರೂ ಸೇರ್ಕಂಡ್‌ ಗುಮ್ಮಿದ್ರು
ಚೇರ್ಮನ್ರು: ಅದ್ಯಾರಾ ಹಾಸ್ನ ಐದ ನಮ್‌ ಗೌಡ್ರು ತಂಟೇಗ್‌ ಬಂದವ್‌ನಂತೆ
ಅಮಾಸೆ: ಪಾಪ, ಎಲ್ರು. ಗೌಡ್ರಿಗೆ ಬೈದ್ರೆ ಬುಡ್ತಾರಾ. ಹಾಸ್ನ ಹುಡುಗ್ರೆಲ್ಲಾ ಮನೆಗಂಟಾ ಹೋಗಿ ಅಬ್ರ ಮಾಡವ್ರೆ.
ಚೇರ್ಮನ್ರು: ಆಯ್ತು, ಎಂಪಿ ಎಲೆಕ್ಸನ್‌ ಕತೆ ಏನ್ಲಾ
ಅಮಾಸೆ: ಕೈ-ತೆನೆ ಪಕ್ಸ ಎಲ್ರು ಸೇರಿ ಕಮ್ಲ ಪಕ್ಸದ್‌ ಮ್ಯಾಗೆ ಫೈಟಿಂಗ್‌ ಮಾಡ್ತವಂತೆ. ತೆನೆ ಪಕ್ಸ ಹತ್‌ ಸೀಟ್‌ ಕಡಿಮೆ ಆದ್ರೆ
ಒಪ್ಪಾಕಿಲ್ಲಾ ಅಂದವ್ರಂತೆ. ಕೈ ಪಕ್ಸ್‌ದೋರು ಆರ್‌ ಸೀಟ್‌ ಆಷ್ಟೇ ನಿಮ್‌ ತಾಕತ್ತು, ಆದ್ರೂ ಆಬ್ಬಬ್ಟಾ ಅಂದ್ರೆ ಎಂಟ್‌ ಕೊಡ್‌ಬೋದು, ಅದ್ರಾಗೂ ಇಂತದ್ದೇ ಸೀಟು ಬೇಕಂತಾ ಹಠ-ಗಿಟ ಹಿಡೀಬ್ಯಾಡಿ ಅಂದವ್ರಂತೆ. 
ಚೇರ್ಮನ್ರು: ಕೂಡ್ಲೆ ಆಯ್ತದಾ
ಅಮಾಸೆ: ರಾಹುಲ್‌ ಸಾಹೇಬ್ರು ಆಗ್ಬೇಕು ಅಂತ ಫ‌ರ್ಮಾನ್‌ ಕೊಟ್ಟವ್ರೆ. ಅದ್ಕೆ ಸಿದ್ರಾಮಣ್ಣೋರು ಆಯ್ತು ಧಣಿ ಅಂತ ಸುಮ್ಕಾಗವ್ರೆ, ದೊಡ್‌ಗೌಡ್ರು-ರಾಹುಲ್‌ ಅಣ್ಣೋರು ಸೀಟ್‌ ಫೈನಲ್‌ ಮಾಡ್ತಾರೆ ಅಂತಾನೂ ಹೇಳವ್ರೆ. ಅದ್ರೂ ಮುಂಚೇನೇ ದಿನೇಶಣ್ಣೋರ್ನ ಕರ್ಕೊಂಡ್‌ ಹೋಗಿ ಏನ್‌ ಹೇಳ್ಬೇಕೋ ಹೇಳ್‌ಬಂದವ್ರೆ.
ಚೇರ್ಮನ್ರು: ಮಂಡ್ಯ, ಹಾಸ್ನ, ಮೈಸೂರ್‌, ಬೆಂಗ್ಳೂರ್‌ ನಾರ್ತ್‌, ಸಿವ್‌ಮೊಗ್ಗ ಕಥೆ ಏನ್ಲಾ
ಅಮಾಸೆ: ಅಲ್ಲೆಲ್ಲಾ ದೊಡ್‌ಗೌಡ್ರು ಮೊದ್ಲೆ ಟವಲ್‌ ಹಾಕವ್ರೆ. ಅದ್‌ಬಿಟ್‌ ಬ್ಯಾರೇ ಮಾತಾಡಿ ಅಂತಾನೂ ಹೇಳವ್ರೆ. ಫೈನಲ್‌ ಸೆಟ್ಲಮೆಂಟ್‌ನ್ಯಾಗೆ ಎಂಟ್‌ ಸೀಟ್‌ ಸಿಗ್‌ ಬೋದು. ನೋಡುಮಾ ಏನಾಯ್ತದೆ. ವಾರಾ ಆತು ಹಟ್ಟಿ ಗೋಗಿ, ಹೆಂಡ್ರು, ಮೀನ್‌ ತತ್ತಾ ಅಂದನ್ಗೆ ಬತ್ತೀನಿ ಸಾ…..

ಎಸ್‌.ಲಕ್ಷ್ಮೀ ನಾರಾಯಣ 

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.