ಉನ್ನತ ಧ್ಯೇಯದ ಗುರುಗಳಿಂದ ದೇಶದಲ್ಲಿ ಬದಲಾವಣೆ ಸಾಧ್ಯ
Team Udayavani, Feb 17, 2019, 9:53 AM IST
ಸೊಲ್ಲಾಪುರ: ಗುರು ದೇವರಿಗಿಂತ ಶ್ರೇಷ್ಠ. ಈ ಸೃಷ್ಠಿಯ ನಿರ್ಮಿತಿ ದೇವರು ಮಾಡಿರಬಹುದು, ಆದರೆ ದೇವರನ್ನು ಪರಿಕಲ್ಪಿಸಿದವ ಗುರು. ಆದ ಕಾರಣ ಗುರು ಸದಾ ಸರ್ವದಾ ಶ್ರೇಷ್ಠನೆ ಇರುತ್ತಾನೆ. ಶ್ರೇಷ್ಠ, ಉನ್ನತ ಧ್ಯೇಯದ ಗುರುಗಳಿಂದ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯವೆಂದು ಚಂದ್ರಶೇಖರ ಕಟ್ಟಿಮನಿ ಹೇಳಿದರು.
ಅಕ್ಕಲಕೋಟ ತಾಲೂಕಿನ ದುಧನಿ ನಗರದ ಭೀಮನಗರ ಕನ್ನಡ ಶಾಲೆ ಬೆಳ್ಳಿ ಹಬ್ಬ ಹಾಗೂ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಂದ್ರಶೇಖರ ಕಟ್ಟಿಮನಿ ಮಾತನಾಡಿ, ಸರಕಾರಿ ಮಾಧ್ಯಮದ ಶಾಲೆಗಳು ಮಾತ್ರ ಸಮಾಜದಲ್ಲಿ ಸಮಾನತೆ ತರಬಹುದು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹಾಕಬೇಕು. ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡ ಉಳಿಸಿಕೊಂಡು ಬಂದಿರುವುದು ಬಹಳ ಸಂತೋಷ ತಂದಿದೆ. ಗಡಿಭಾಗದ ಶಾಲೆ ಪ್ರಗತಿ ಹಾಗೂ ಕನ್ನಡ ಅಭಿಮಾನವನ್ನು ಕೊಂಡಾಡಿದರು.
ದುಧನಿ ಭೀಮನಗರದಲ್ಲಿ ನಡೆದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆ ಬೆಳ್ಳಿ ಹಬ್ಬ ಹಾಗೂ ಸ್ನೇಹ ಸಮ್ಮೇಳನ ವಿಜೃಂಭಣೆಯಿಂದ ಜರುಗಿದ್ದು ಮಕ್ಕಳ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರ ಮನ ಸೆಳೆಯಿತು.
ಇದೇ ಮೊದಲ ಬಾರಿಗೆ ದುಧನಿ ಭೀಮನಗರ ಸರಕಾರಿ ಕನ್ನಡ ಶಾಲೆಯಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮ ಆಚರಿಸಲಾಗಿದೆ. ಭವ್ಯ ವೇದಿಕೆಯಲ್ಲಿ ಜರುಗಿದ ಮಕ್ಕಳ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರ ಮನ ಸೆಳೆಯಿತು. ಮಕ್ಕಳ ಅಭಿನಯ, ನೃತ್ಯ ಹಾಗೂ ಗಾಯನ ಕಲೆ ನೋಡುಗರಿಗೆ ವಿಶೇಷ ಔತಣವನ್ನೆ ಕೊಟ್ಟಿತು. ಇದೆ ವೇಳೆ ದಾನಿಗಳು ಈ ಸರಕಾರಿ ಶಾಲೆಗೆ ವಿವಿಧ ಇ-ಲರ್ನಿಂಗ್ ಸಾಹಿತ್ಯಗಳನ್ನು ಕೊಟ್ಟು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
ಪ್ರಗತಪರ ರೈತ ಹನುಮಂತ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು. ಬಸವ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿನಾಥ ಯಗದಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಭಾಂಜಿ ಜ್ಯೋತಿ ಬೆಳಗಿಸಿದರೆ ಚನ್ನು ಭಾಂಜಿ ವೇದಿಕೆಗೆ ಪೂಜೆ ಸಲ್ಲಿಸಿದರು.
ಪೊಲೀಸ್ ಉಪ ನೀರಿಕ್ಷಕ ಬಾಳಾಸಾಹೇಬ ನರವಟೆ, ಉತ್ತಮರಾವ್ ಗಾಯಕವಾಡ, ಬಸವರಾಜ ಹೌದೆ, ಲಿಂಗರಾಜ ಹೌದೆಯವರು ಪ್ರತಿಮೆ ಪೂಜೆ ನೆರವೇರಿಸಿದರು. ಗುರುಶಾಂತ ಮಗಿ ಬೆಳ್ಳಿ ಹಬ್ಬಕ್ಕೆ ಚಾಲನೆ ನೀಡಿದರು.
ರಾಮಾ ಗದ್ಧಿ, ವಾಗೇಶ ಪಾಟೀಲ, ಬಸವರಾಜ ಕೌಲಗಿ, ಜಹಾಂಗೀರ ಖೆ„ರಾಟ, ಚಾಂದಸಾಬ ನಾಕೇದಾರ, ಪ್ರಕಾಶ ಗಾಯಕವಾಡ, ಇರಫಾನ ಡಫೆದಾರ, ಮಸ್ತಾನ ಮಕಾನದಾರ, ವಿಜಯಕುಮಾರ ಲೊಡ್ಡೆನವರು, ಗುರುಶಾಂತ ಗಾಯಕವಾಡ, ಚಂದ್ರಕಾಂತ ದೊಡಮನಿ, ಪ್ರಕಾಶ ಜಮಾದಾರ, ನಾಗಪ್ಪಾ ಲೊಡ್ಡೆನವರು, ಡಾ| ಸುಭಾಷ್ ಕೋಳೆಕರ, ಎಸ್.ಕೆ. ಬಿರಾದಾರ, ರಾಜಶೇಖರ ಉಮರಾಣಿಕರ, ಅಶೋಕ ಕಬಾಡೆ, ಗುರುಶಾಂತ ಪರಮಶೆಟ್ಟಿ, ರಾವೂಫ್ ನಿಂಬಾಳ, ಧರ್ಮಾ ಸಿಂಗೆ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಯಶಸ್ವಿಗಾಗಿ ಶಾಲೆ ಮುಖ್ಯಗುರು ಗೌತಮ ಕಾಂಬಳೆ, ಮಲಿಕಜಾನ್ ಶೇಖ್, ಶಾಂತಮಲ್ಲಯ್ಯ ಸ್ವಾಮಿ, ಶರಣಪ್ಪ ಮೆತ್ರೆ, ಮಲ್ಲಪ್ಪ ಕಾಂಬಳೆ, ಸಾವಿತ್ರಿ ಡೊಂಗರಾಜೆ, ಕಲಾವತಿ ಅರಸಗೊಂಡ, ವಿಜಯ ಗಾಯಕವಾಡ ಹಾಗೂ ವಿಶ್ವನಾಥ ರೇವೂರ ಜೊತೆಗೆ ಶಾಲೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಎಲ್ಲ ಸದಸ್ಯರು, ವಿವಿಧ ಸಂಘಟನೆಗಳು ಯುವಕರು ಶ್ರಮಿಸಿದರು. ಮುಖ್ಯಗುರು ಗೌತಮ ಕಾಂಬಳೆ ಸ್ವಾಗತಿಸಿದರು. ಶಾಂತಮಲ್ಲಯ್ಯ ಸ್ವಾಮಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.