ಜೋಳದ ಸಿರಿ ಬೆಳಕಿನಲ್ಲಿ…


Team Udayavani, Feb 18, 2019, 12:30 AM IST

kanaja-2.jpg

ಉತ್ತರ ಕರ್ನಾಟಕದ ಕೃಷಿಕರಿಗೆ ಜೋಳವೇ ಜೀವ ಬೆಳೆ. ಆದರೆ ನೀರಿನ ಅಭಾವದಿಂದ ಜೋಳ ಎಂದರೆ ಸ್ವಲ್ಪ ದೂರ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲೂ ಈ ಮಲ್ಲಯ್ಯ ಛಲ ಬಿಡದೆ ಜೋಳ ಬೆಳೆದು ಲಾಭ ಮಾಡುತ್ತಿದ್ದಾರೆ. ಅದು ಹೀಗೆ…

“ಏನ್‌ ಜೋಳಾ ರೀ. ಎಂಥ ಎತ್ರ ಬೆಳದೈತ್ರೀ ….ನಾವು ಇಷ್ಟ ಎತ್ರ ಬೆಳೆದಿದ್ದ ಜೋಳನಾ ನೋಡ್ಯಾ ಇಲಿÅà. ಮಳಿ ಇಲ್ದಾಗುನ ಇಂತಹ ಬೆಳೆ ಬಂದೈತ್ರಲ್ಲಾ’

ಕೊಪ್ಪಳದ ದೋಟಿಹಾಳ-ಹನುಮಸಾಗರ ರಸ್ತೆಯಲ್ಲಿ ನೀವು ಓಡಾಡಿದರೆ ಇಂಥ ಉದ್ಗಾರ ಬರದೇ ಇದ್ದರೆ ಕೇಳಿ. ಏಕೆಂದರೆ, ಮಲ್ಲಯ್ಯ ನಿಡಗುಂದಿ ಮಠ ಎಂಬ ರೈತ ಆ ರೀತಿಯಲ್ಲಿ ಬಿಳಿ ಜೋಳವನ್ನು ಬೆಳೆದಿದ್ದಾರೆ.  

ಬಿಳಿಜೋಳ, ಉತ್ತರ ಕರ್ನಾಟಕ ಭಾಗದ ಜನರ ಮುಖ್ಯ ಆಹಾರ ಬೆಳೆ. ಜೋಳದ ಬೆಳೆಯೊಂದು ಉತ್ತಮ ಫ‌ಸಲು ತಂದರೆ ವರ್ಷದವರೆಗೆ ಆಹಾರದ ಸಮಸ್ಯೆ ತಪ್ಪಿ, ಎಂತಹ ತಾಪತ್ರಯ ಬಂದರೂ, ರೈತರು ಅದನ್ನು ಎದುರಿಸುವ ಮನೋಬಲ ಪಡೆಯುತ್ತಾರೆ. ಹಾಗಾಗಿ, ಗ್ರಾಮದ ಸುತ್ತಮುತ್ತಲಿನ ರೈತರು ಹೆಚ್ಚಾಗಿ ಬಿಳಿಜೋಳವನ್ನು ಬೆಳೆಯಲು ಬಯಸುತ್ತಾರೆ. ಅದೇನು ಪುಣ್ಯವೋ…ಏನೋ.. ಮಲ್ಲಯ್ಯ ಅವರ ಹೊಲದಲ್ಲಿ ಪ್ರತಿವರ್ಷ ನಾನಾ ನಮೂನೆಯ ರೋಗಗಳಿಗೆ ತುತ್ತಾಗುತ್ತಿದ್ದ ಜೋಳದ ಬೆಳೆ,  ಈ ಬಾರಿ ಆಳೆತ್ತರ ಬೆಳೆದು, ತೆನೆಗಳಲ್ಲಿ ಮುತ್ತು ಪೋಣಿಸಿದ ರೀತಿ ಕಾಳು ಕಟ್ಟಿಕೊಂಡು, ಬಿತ್ತಿದವರು ಬಿಂಕಪಡುವ ಹಾಗೆ ನಿಂತಿದೆ.

ತೋಟದ ಬೆಳೆಯಾಗಿ ಬಿಳಿಜೋಳ ಕೃಷಿ
ಸಾಮಾನ್ಯವಾಗಿ ಮಳೆಯಾಶ್ರಿತ ಭೂಮಿಯಲ್ಲಿ ಹಿಂಗಾರು ಬೆಳೆಯಾಗಿ, ಬಿಳಿಜೋಳ ಬಿತ್ತುವುದು ವಾಡಿಕೆ. ಆದರೆ ಕಳೆದ ವರ್ಷ ಮಳೆ ಇಲ್ಲದ ಬೆಳೆ ಸಂಪೂರ್ಣ ಒಣಗಿ ಹೋಯಿತು. ಈ ಕಾರಣದಿಂದಲೇ ಹೊಟ್ಟೆಗೆ ಹಿಟ್ಟು ಹಾಗೂ ಜಾನುವಾರುಗಳಿಗೆ ಮೇವು ದೊರಕೀತು ಎಂಬ ಆಸೆಯಿಂದ ಬಹುತೇಕ ರೈತರು ಪುನಃ ನೀರಾವರಿಯಾಶ್ರಿತ ಜಮೀನುಗಳಲ್ಲಿ ಬಿಳಿ ಜೋಳದ ಬೀಜಗಳನ್ನು ಬಿತ್ತಿದ್ದರು. ಅದರಂತೆ,  ಕಡೆಕೋಪ್ಪ ಗ್ರಾಮದ ಮಲ್ಲಯ್ಯ ನಿಡಗುಂದಿಮಠ ಅವರು ಮೂರು ಎಕರೆ ಜಮೀನಲ್ಲಿ ಮಿಶ್ರ ಬೆಳೆಯಾಗಿ  ಕಬ್ಬು, ಗೋಧಿ ಮತ್ತು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಲ್ಲಿ ಒಂದು ಎಕರೆ ಭೂಮಿಯಲ್ಲಿ ಬಿಳಿಜೋಳ ಬಿತ್ತನೆ ಮಾಡಿದರು. ಆ ಜೋಳವೇ ಇಂದು ಇವರ ಬದುಕಿಗೆ ಆಸರೆಯಾಗಿದೆ. ಜಾನುವಾರುಗಳಿಗೆ ಮೇವು ದೊರಕಿಸಿಕೊಟ್ಟಿದೆ.

ಬಂಪರ್‌ ಬೆಳೆ
ಕೇವಲ ಮೂರು ಎಕರೆ ಜಮೀನು ಹೊಂದಿರುವ ಮಲ್ಲಯ್ಯ, ಎಂಥ ಸಂದರ್ಭದಲ್ಲೂ ಜೋಳ ಬಿತ್ತುವುದನ್ನು ನಿಲ್ಲಿಸಿಲ್ಲ. ಪ್ರತಿ ವರ್ಷ ಜಮೀನಿಗೆ ಸಾವಯವ ಗೊಬ್ಬರವನ್ನು ಬಳಸುತ್ತಾರೆ. ಎರಡು ಬಾರಿ ನೀರಿನ ಜೊತೆ ಸಗಣಿ ಗೊಬ್ಬರ ಮಿಶ್ರಣ ಮಾಡಿ ಹಾಯಿಸಿದ್ದಾರೆ. ಈ ಬಾರಿ ಬಿತ್ತನೆ ಮಾಡಿದ ಬಿಳಿಜೋಳ ಸುಮಾರು 8 ರಿಂದ 9 ಅಡಿ ಎತ್ತರ ಬೆಳೆದು, ಎಕರೆಗೆ 10-15 ಕ್ವಿಂಟಾಲ್‌ ಫ‌ಸಲು ದೊರೆತಿದೆ. 

ಜೋಳ ಬಿತ್ತನಗೆ  1000-1500 ರೂ.ನ ಬಿತ್ತನೆ ಬೀಜವನ್ನು ಖರೀದಿಸಿ ನಾಟಿ ಮಾಡಿದ್ದಾರೆ. ಇತರ ಎಲ್ಲಾ ಖರ್ಚುಗಳನ್ನು ಸೇರಿಸಿದರೆ ಒಟ್ಟು 7,000-8000 ರೂ ಆಗಬಹುದು.  ಮಾರುಕಟ್ಟೆಯಲ್ಲಿ ಸದ್ಯ ಒಂದು ಕಿಂಟಲ್‌ ಬಿಳಿ ಜೋಳಕ್ಕೆ 3,400 ರಿಂದ 3500 ವರಗೆ ಇದೆ. ಒಂದೂವರಿ ಎಕರೆ ಭೂಮಿಯಲ್ಲಿ ಸುಮಾರು 10-15 ಕ್ವಿಂಟಾಲ್‌ ಜೋಳ ಬಂದರೇ 50-60 ಸಾವಿರ ರೂ. ಆದಾಯ. 

ಹಿಂದೇಟು, ಜೋಳದ ಬೆಳೆಗೆ ಕೋಕ್‌
ಹಿಂದೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಜೋಳದ ಕಣಜವೆನಿಸಿಕೊಂಡಿದ್ದವು. ಆದರೆ, ಈಗ ಕೈ ತುಂಬ ಹಣವಿರುವ ವಾಣಿಜ್ಯ ಬೆಳೆಗಳನ್ನು ಬೆಳೆಯುವಲ್ಲಿ ತೋರುವ ಆಸಕ್ತಿಯನ್ನು ರೈತರು ಜೋಳ ಬೆಳೆಯುವಲ್ಲಿ ತೋರುತ್ತಿಲ್ಲ. ಹೀಗಾಗಿ,  ಜೋಳದ ಬೆಳೆ ಅಷ್ಟೊಂದು ಬಿತ್ತನೆಯಾಗಿಲ್ಲ.  ಆರಕ್ಕೇರದ ಮೂರಕ್ಕಿಳಿಯದ ಬೆಳೆ ಎಂದು ಮೂಗು ಮುರಿಯುತ್ತಿದ್ದ ರೈತರು, ಈ ಬಾರಿ ಬಿತ್ತಿದ ನಿಡಗುಂದಿ ಮಠರ ಜಮೀನಿನಲ್ಲಿ ಬೆಳೆದು ನಿಂತಿರುವ ಭಾರೀ ಪ್ರಮಾಣದ ಜೋಳವನ್ನು ಕಂಡು ಬೆರಗಾಗಿದ್ದಾರೆ. ತಾವೂ ಬೆಳೆಯಬೇಕೆಂಬ ನಿರ್ಧಾರಕ್ಕೂ ಬಂದಿದ್ದಾರೆ. 

– ಮಲ್ಲಿಕಾರ್ಜುನ ಮೆದಿಕೇರಿ

ಟಾಪ್ ನ್ಯೂಸ್

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

4-bng

Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.