ಹೋಳಿ ಹುಣ್ಣಿಮೆಗೆ ಗೋವಾದಿಂದ ಬರುತ್ತಾರೆ ದೇವರು..

Team Udayavani, Feb 18, 2019, 1:00 AM IST

holi.jpg

ಕುಂದಾಪುರ: ಉಡುಪಿ ಜಿಲ್ಲೆಯ ಕುಡುಬಿ ಜನಾಂಗದವರು ಆಚರಿಸುವ ಸಾಂಪ್ರದಾಯಿಕ ಹೋಳಿ ಹುಣ್ಣಿಮೆಯ ಸಿದ್ಧತೆಗೆ ಒಂದು ತಿಂಗಳ ಮುಂಚಿತವಾಗಿಯೇ ಗೋವಾದ ದೇವರೊಂದಿಗೆ, ಅಲ್ಲಿನ ಕುಡುಬಿ ಜನಾಂಗದವರೂ ಇಲ್ಲಿಗೆ ಆಗಮಿಸುತ್ತಾರೆ. ಬಳಿಕ ಕುಡುಬಿ ಮನೆಗಳಿಗೆ ದೇವರೊಂದಿಗೆ ತೆರಳಿ ಪೂಜೆ ಪಡೆಯುವ ಸಂಪ್ರದಾಯ ಸುಮಾರು 450 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ.

ಮಾ. 17ರಿಂದ ಮಾ. 21ರವರೆಗೆ ಹೋಳಿ ಹುಣ್ಣಿಮೆ ಆಚರಣೆಯನ್ನು ಕುಡುಬಿ ಜನಾಂಗದವರು ಶ್ರದ್ಧಾ ಭಕ್ತಿ ಪೂರ್ವಕವಾಗಿ ಉಡುಪಿ ಜಿಲ್ಲೆಯಾದ್ಯಂತ ಆಚರಿಸುತ್ತಾರೆ. ಅದಕ್ಕೂ ಮೊದಲು ಮಾಘ ಮಾಸದ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ 15 ದಿನಗಳ ಕಾಲ ಗೋವಾದಿಂದ ಉತ್ಸವ ಮೂರ್ತಿಯೊಂದಿಗೆ 5 ಮಂದಿಯ ತಂಡ ಉಡುಪಿಗೆ ಆಗಮಿಸುತ್ತದೆ.  

ಏನಿದು ಆಚರಣೆ ?
ಸಿಂಗರಿಸಿದ ಮಲ್ಲಿಕಾರ್ಜುನ ಮತ್ತು ಅಮ್ಮನವರ ಮೂರ್ತಿಯನ್ನು ಉತ್ಸವ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ತಾಳ, ಡಮರು ನಿನಾದದೊಂದಿಗೆ ಕಾಲ್ನಡಿಗೆಯಲ್ಲಿ ಇಲ್ಲಿರುವ ಬಹುತೇಕ ಕುಡುಬಿ ಜನರ ಮನೆಗಳಿಗೆ ಬರುತ್ತಾರೆ. ಅಲ್ಲಿ ಪೂಜೆ ನಡೆದು, ಅಕ್ಕಿ, ಕಾಯಿ, ದವಸ ಧಾನ್ಯಗಳನ್ನು ಪಡೆದು, ಪ್ರಸಾದ ನೀಡಿ ಹರಸುತ್ತಾರೆ. ಮಧ್ಯಾಹ್ನ ಹಾಗೂ ಸಂಜೆ ವಿಶೇಷ ಪೂಜೆ ಇರುತ್ತದೆ. ಆ ವೇಳೆ ದೇವರು ಯಾರ ಮನೆಯಲ್ಲಿ ಇರುತ್ತಾರೋ ಆ ಮನೆಯ ಯಜಮಾನನೇ ದೇವರಿಗೆ ಪೂಜೆ ನೆರವೇರಿಸುತ್ತಾರೆ. 

ಪ್ರತಿ ಕುಡುಬಿ ಕುಟುಂಬಸ್ಥರು ಕೂಡ ದೇವರನ್ನು  ಸಾಂಪ್ರದಾಯಿಕ ಪದ್ಧªತಿಯಂತೆ ಆಮಂತ್ರಿಸಬೇಕು. ಇನ್ನೊಂದು ಮನೆಗೆ ತೆರಳುವಾಗ ಆ ಮನೆಯವರೆಗೆ ತೆರಳಿ ಬೀಳ್ಕೊಡುವ ಕ್ರಮವಿದೆ.  ಈಗ ಹುಣ್ಣಿಮೆಗೆ ಆಗಮಿಸಿರುವ ಇವರು ಮುಂದಿನ ಅಮಾವಾಸ್ಯೆಗೆ ಮುನ್ನ  ಮೂಲ ನೆಲೆ ಗೋವಾವನ್ನು ಸೇರಿಕೊಳ್ಳುತ್ತಾರೆ ಎನ್ನುವ ಪ್ರತೀತಿಯಿದೆ. 

ಏನಿದರ ಉದ್ದೇಶ ?
16ನೇ ಶತಮಾನದಲ್ಲಿ ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆಯಿದ್ದು, ಅವರ ಮತಾಂತರ, ದೌರ್ಜನ್ಯಕ್ಕೆ ಹೆದರಿ, ಧರ್ಮ ರಕ್ಷಣೆಯ ಸಲುವಾಗಿ ಅಲ್ಲಿದ್ದ ಕುಡುಬಿ ಜನರು ಕರಾವಳಿಯ ಉಡುಪಿ ಜಿಲ್ಲೆಗೆ ವಲಸೆ ಬರುತ್ತಾರೆ. ಇಲ್ಲಿರುವ ಕುಡುಬಿ ಜನರನ್ನು ಕಾಣಲು ವರ್ಷಕ್ಕೊಮ್ಮೆ ಗೋವಾದಿಂದ ದೇವರೇ ಇಲ್ಲಿಗೆ ಬಂದು ಭಕ್ತರ ಮೊರೆಯನ್ನು ಆಲಿಸುತ್ತಾರೆ ಎನ್ನುವ ಮಾತಿದೆ. ಉಡುಪಿ ಜಿಲ್ಲೆಯ ಕೊಕ್ಕರ್ಣೆ, ಬೆಳ್ವೆ, ಅಲಾºಡಿ, ಗೋಳಿಯಂಗಡಿ, ಶೇಡಿಮನೆ, ಬೇಳಂಜೆ ನಾಲ್ಕೂರು, ನಂಚಾರು ಸೇರಿದಂತೆ ಹಲವೆಡೆ ಒಟ್ಟು 3,600 ಕ್ಕೂ ಅಧಿಕ ಮಂದಿ ಕುಡುಬಿ ಜನರಿದ್ದಾರೆ. 

ವಿಶೇಷ ಮಹತ್ವ 
ಈ ಆಚರಣೆ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ನಮ್ಮಲ್ಲಿ ವಿಶೇಷ ಮಹತ್ವವಿದೆ. 15 ದಿನಗಳ ಕಾಲ ಇಲ್ಲಿರುವ ದೇವರು ದಿನಕ್ಕೆ ಸುಮಾರು 15 ರಿಂದ 20 ಮನೆಗಳಿಗೆ ತೆರಳಿ ಭಕ್ತರ ಸೇವೆಯನ್ನು ಸ್ವೀಕರಿಸುತ್ತಾರೆ. ಧರ್ಮ ರಕ್ಷಣೆಯ ಸಲುವಾಗಿ ಈ ಆಚರಣೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. 
– ನಾರಾಯಣ ನಾಯ್ಕ, ಗೋಳಿಯಂಗಡಿ 

ಟಾಪ್ ನ್ಯೂಸ್

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.