ಇನ್ನೂ ಸಿಕ್ಕಿಲ್ಲ ಕೋಟೆಯಂಗಡಿ-ಕೋಡಿ ಬೆಟ್ಟು ರಸ್ತೆಗೆ ಮುಕ್ತಿ
Team Udayavani, Feb 18, 2019, 1:00 AM IST
ಮಾಳ: ಮಾಳ ಗ್ರಾಮದ ವ್ಯಾಪ್ತಿಗೆ ಸೇರಿದ ಜಿ.ಪಂ. ಅಧೀನಕ್ಕೆ ಒಳಪಟ್ಟ ಸುಮಾರು 1.5 ಕಿ.ಮೀ ರಸ್ತೆ ಹದಗೆಟ್ಟಿದ್ದು ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಪರದಾಡುವಂತಾಗಿದೆ.
ಗ್ರಾಮದ ಮುಖ್ಯ ಕೂಡು ರಸ್ತೆ ಇದಾಗಿದ್ದು, ಕುದುರೆಮುಖ ಹೆದ್ದಾರಿಯನ್ನು ಸಂಪರ್ಕಿಸುತ್ತದೆ . ಚೌಕಿಯಂಗಡಿ, ಪೂಂಜಾಜೆ, ನೂರಾಳ್‌ಬೆಟ್ಟು , ಹೊಸ್ಮಾರಿಗೆ ಸಂಪರ್ಕಿಸುವ ಹತ್ತಿರದ ಒಳದಾರಿಯೂ ಆಗಿದೆ. ಕಾರ್ಕಳ, ಮಾಳ, ಪೂಂಜಾಜೆಗೆ ನಿತ್ಯ ಬಸ್ ಸಂಪರ್ಕ ಇದ್ದರೂ ರಸ್ತೆ ಮಾತ್ರ ತೀರ ಹದಗೆಟ್ಟ ಸ್ಥಿತಿಯಲ್ಲೇ ಇದೆ.
ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ನಿವಾಸಿ ಕಿರಣ್ ಕುಮಾರ್ ಹೆಗೆª ಅವರ ನೇತೃತ್ವದಲ್ಲಿ , ಸಾರ್ವಜನಿಕರ ದೊಡ್ಡ ಸಂಖ್ಯೆಯ ಸಹಿಯುಳ್ಳ ಮನವಿಗಳನ್ನು ಈ ಹಿಂದೆ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಹಲವು ಬಾರಿ ಸಲ್ಲಿಸಲಾಗಿದೆ. ಆದರೂ ಯಾವುದೇ ರೀತಿಯ ಪ್ರಯೊಜನವಾಗಿಲ್ಲ.
ಮಳೆಗಾಲ ಆರಂಭಗೊಂಡರೆ ರಸ್ತೆ ಸಂಪೂರ್ಣ ಹದಗೆಟ್ಟು, ಮೊಣಕಾಲಿನವರೆಗೂ ಕೆಸರು ತುಂಬಿದ ಗದ್ದೆೆಯಂತಾಗುತ್ತದೆ, ಏನೂ ಕಾಣಿಸದ ಪರಿಸ್ಥಿತಿ ರೂಪುಗೊಳ್ಳುತ್ತದೆ. ಈ ರಸ್ತೆಗೆ 3 ವರ್ಷಗಳ ಹಿಂದೆ ಅರ್ಧ ಡಾಮರೀಕರಣ ಮಾಡಲಾಗಿದ್ದು, ಸದ್ಯದ ಸ್ಥಿತಿಯಲ್ಲಿ ಅದೂ ಕಿತ್ತು ಬಂದು ಗುಂಡಿಗಳಾಗುತ್ತಿವೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಶೀಘ್ರ ಸ್ಪಂದಿಸಿದಲ್ಲಿ ಹಲವು ವರ್ಷಗಳ ಜನರ ಕಷ್ಟ ಬಗೆಹರಿಯಬಹುದೆಂಬುದು ಇಲ್ಲಿನ ಜನರ ಆಶಯ.
ಶೀಘ್ರ ದುರಸ್ತಿ
ಈ ಬಗ್ಗೆ ಮನವಿಯನ್ನು ಕಳಿಸಿದ್ದು ಶೀಘ್ರವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಆನುಕೂಲ ಮಾಡಿಕೊಡಲಾಗುವುದು.
– ಉದಯ್ ಎಸ್. ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯರು
ಸ್ಪಂದನೆ ಇಲ್ಲ
ಸತತ 3 ವರ್ಷಗಳಿಂದ ಈ ರಸ್ತೆಯ ದುರಸ್ತಿಗಾಗಿ ಹೋರಾಡುತ್ತಾ ಬಂದಿದ್ದು ಇದುವರೆಗೂ ಯಾವುದೆ ಸ್ಪಂದನೆ ಸಿಕ್ಕಿಲ್ಲ. ಅಲ್ಲದೆ ಈಗಾಗಲೆ ಅರ್ಧ ಆಗಿರುವ ಕಾಮಗಾರಿಯು ಕಿತ್ತು ಹೋಗಿದೆ.
– ಕಿರಣ್ ಹೆಗ್ಡೆ, ಸ್ಥಳೀಯರು ಮಾಳ
– ಪ್ರಶಾಂತ್ ಮುಡಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.