ಮಾಬುಕಳ: ಅಗ್ನಿ ದುರಂತದಿಂದ ಯುವತಿ ಗಂಭೀರ
Team Udayavani, Feb 18, 2019, 4:44 AM IST
ಕೋಟ: ಅಗ್ನಿ ಆಕಸ್ಮಿಕದಿಂದ ಯುವತಿ ಗಂಭೀರವಾಗಿ ಗಾಯ ಗೊಂಡ ಘಟನೆ ರವಿವಾರ ರಾತ್ರಿ ಮಾಬುಕಳ ಸಮೀಪ ಬೊಬ್ಬರ್ಯನಕೆರೆಯಲ್ಲಿ ಸಂಭವಿಸಿದೆ. ಘಟ ನೆಗೆ ಮೊಬೈಲ್ ಸ್ಫೋಟ ಕಾರಣ ಎಂದು ಹೇಳಲಾಗುತ್ತಿದ್ದು, ಅಂಗಳದಲ್ಲಿದ್ದ ಬೈಹುಲ್ಲಿನ ರಾಶಿಗೂ ಹಾನಿಯಾಗಿದೆ. ಜಲಜಾ ಮರಕಾಲ್ತಿ ಅವರ ಪುತ್ರಿ ಅಶ್ವಿನಿ ಮರಕಾಲ್ತಿ (26) ಗಾಯಗೊಂಡವರು.
ಇವರಿಗೆ ಎರಡು ತಿಂಗಳ ಹಿಂದೆ ಮಲ್ಪೆಯ ಯುವಕನೊಂದಿಗೆ ಮದುವೆಯಾಗಿತ್ತು. ಸ್ಥಳೀಯ ಜಾತ್ರೆಯ ಸಲುವಾಗಿ ಆಕೆ ರವಿವಾರ ತಾಯಿ ಮನೆಗೆ ಆಗಮಿಸಿದ್ದರು. ಸಂಜೆ ವೇಳೆ ಮನೆಯ ಅಂಗಳದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಸಂದರ್ಭ ಮೊಬೈಲ್ ಸ್ಫೋಟಿಸಿದ್ದು, ಕೂಡಲೇ ಅದನ್ನು ಪಕ್ಕದಲ್ಲಿದ ಬೈಹುಲ್ಲಿನ ರಾಶಿಗೆ ಎಸೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಕ್ಕಪಕ್ಕದವರು ಬಂದು ನೋಡುವಾಗ ಯುವತಿ ಗಂಭೀರವಾದ ಸುಟ್ಟಗಾಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ತಾಯಿ ಕೂಡ ಅಸ್ವಸ್ಥಗೊಂಡಿದ್ದರು. ಅನಂತರ ಸ್ಥಳೀಯರ ಸಹಕಾರದಿಂದ ಮಂಗ ಳೂರಿನ ಆಸ್ಪತ್ರೆಗೆ ದಾಖಲಿಸ ಲಾಯಿತು. ತಾಯಿಗೆ ಸಮೀಪದ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಪೂರ್ಣ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.ಅಗ್ನಿಶಾಮಕದ ದಳದವರು ಆಗಮಿಸಿ ಸ್ಥಳೀಯರ ಸಹಕಾರ ದೊಂದಿಗೆ ಬೆಂಕಿಯನ್ನು ನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.