ಗಾಂಧಿನಗರಕ್ಕೆ ಮತ್ತೊಬ್ಬ “ಜಟ್ಟಿ’
Team Udayavani, Feb 18, 2019, 5:26 AM IST
ಕನ್ನಡದಲ್ಲಿ ಈಗಾಗಲೇ ಸುದೀಪ್ ಅಭಿನಯದ “ಪೈಲ್ವಾನ್’ ಹಾಗೂ ದುನಿಯಾ ವಿಜಯ್ ಅಭಿನಯದ “ಕುಸ್ತಿ’ ಸಿನಿಮಾಗಳ ಬಗ್ಗೆ ಆಗಾಗ್ಗೆ ಸುದ್ದಿಯನ್ನು ಕೇಳಿರುತ್ತೀರಿ. ಈಗ ಅಂಥದ್ದೇ ಸಾಲಿಗೆ ಸೇರುವ “ಜಟ್ಟಿ’ ಎಂಬ ಹೆಸರಿನಲ್ಲಿ ಚಿತ್ರವಾಗಿ ತೆರೆಗೆ ಬರುತ್ತಿದೆ. ಅಂದಹಾಗೆ, ಚಿತ್ರದ ಶೀರ್ಷಿಕೆ “ಜಟ್ಟಿ’ ಅಂತಿದ್ದರೂ, ಇದು ಸುದೀಪ್ ಚಿತ್ರಕ್ಕಾಗಲಿ ಅಥವಾ ದುನಿಯಾ ವಿಜಯ್ ಚಿತ್ರಕ್ಕಾಗಲಿ ಸಂಬಂಧಿಸಿದ್ದಲ್ಲ.
ಈ ಚಿತ್ರದ ಕಥಾ ಹಂದರಕ್ಕೆ ಸೂಕ್ತವಾಗುತ್ತದೆ ಎನ್ನುವ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ “ಜಟ್ಟಿ’ ಎನ್ನುವ ಶೀರ್ಷಿಕೆಯನ್ನು ಇಟ್ಟುಕೊಂಡಿದೆ. ಇನ್ನು ಈ “ಜಟ್ಟಿ’ ಚಿತ್ರದ ಮೂಲಕ ವಿಲಾಸ್ ಪಾಟೀಲ್ ಎಂಬ ಯುವನಟ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಇತ್ತೀಚೆಗೆ “ಜಟ್ಟಿ’ ಚಿತ್ರದ ಟೈಟಲ್ ಪೋಸ್ಟರ್‌ನ್ನು ಬಿಡುಗಡೆ ಮಾಡಿದ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ತೆರೆದಿಟ್ಟಿತು.
ಸುಮಾರು 40 ವರ್ಷದ ಹಿಂದೆ ವಿಜಯಪುರದ ಹಳ್ಳಿಯೊಂದರಲ್ಲಿದ್ದ “ಜಟ್ಟಿ’ಯೊಬ್ಬನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಬಹುತೇಕ ಉತ್ತರ ಕರ್ನಾಟಕದ ಸೊಗಡಿರುವ ಈ ಚಿತ್ರದಲ್ಲಿ ಜಟ್ಟಿ ಮತ್ತು ಕುಸ್ತಿಯ ಕುರಿತಾದ ಹಲವು ಸಂಗತಿಗಳು ಇರಲಿವೆ ಎನ್ನುತ್ತದೆ ಚಿತ್ರತಂಡ. “ಜಟ್ಟಿ’ ಚಿತ್ರವನ್ನು ನಿರ್ದೇಶಕ ಬಿ.ರಾಮಮೂರ್ತಿ ಮಾರ್ಗದರ್ಶನದಲ್ಲಿ ವಿಲಾಸ್ ಪಾಟೀಲ್ ನಿರ್ದೇಶಿಸುತ್ತಿದ್ದಾರೆ.
ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ಕಸರತ್ತು ನಡೆಸಿರುವ ವಿಲಾಸ್ ಪಾಟೀಲ್ ಕುಸ್ತಿ ಕಲಿತುಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರಂತೆ. ಚಿತ್ರದಲ್ಲಿ “ಜಟ್ಟಿ’ಯ ಪತ್ನಿಯಾಗಿ, ನಾಯಕಿಯ ಪಾತ್ರದಲ್ಲಿ ರಕ್ಷಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ನಿರ್ದೇಶಕ ಬಿ. ರಾಮಮೂರ್ತಿ, ಗುರು ಪ್ರಸಾದ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ.
“ಜಟ್ಟಿ’ ಚಿತ್ರದ ಹಾಡುಗಳಿಗೆ ಪ್ರವೀಣ್ ಡಿ. ರಾವ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ದೃಶ್ಯಗಳನ್ನು ಶ್ಯಾಮ್ ಸಾಲ್ವನ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ನಂದಿ ಬಸವೇಶ್ವರ ಪೊ›ಡಕ್ಷನ್ ಹೌಸ್ ಬ್ಯಾನರ್‌ನಲ್ಲಿ ಎಂ.ಆರ್ ಪಾಟೀಲ್ “ಜಟ್ಟಿ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ವರ್ಷಾಂತ್ಯದೊಳಗೆ “ಜಟ್ಟಿ’ ತೆರೆಮೇಲೆ ತೊಡೆ ತಟ್ಟಲಿದ್ದಾನೆ ಎನ್ನುತ್ತದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.