ಜೈಶ್ ರಕ್ಕಸರ ಸಂಹಾರ
Team Udayavani, Feb 19, 2019, 12:30 AM IST
ಶ್ರೀನಗರ: ಸಿಆರ್‌ಪಿಎಫ್ನ 40 ಮಂದಿ ವೀರ ಯೋಧರ ಬಲಿದಾನ ಘಟನೆಯ ಸೂತ್ರಧಾರಿಯನ್ನು ಹೊಡೆದುರುಳಿಸುವ ಮೂಲಕ ಭಾರತೀಯ ಸೇನೆ ಉಗ್ರರ ವಿರುದ್ಧ ಪ್ರತೀಕಾರ ತೆಗೆದುಕೊಂಡಿದೆ. ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಕಮ್ರಾನ್ ಅಲಿಯಾಸ್ ಅಬ್ದುಲ್ ರಶೀದ್ ಘಾಜಿಯನ್ನು ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲಾಗಿದೆ. ಈತನ ಜತೆಗೆ ಸ್ಥಳೀಯ ಉಗ್ರಗಾಮಿ ಹಿಲಾಲ್ ಅಹ್ಮದ್ ಮತ್ತು ಮತ್ತೋರ್ವ ಉಗ್ರನನ್ನೂ ಹೊಡೆ ದುರುಳಿಸಲಾಗಿದೆ. ಈ ಸಂದರ್ಭದಲ್ಲಿ ಸೇನೆಯ ಮೇಜರ್ ಸಹಿತ ಐವರು ಸಿಬಂದಿ ಹುತಾತ್ಮರಾಗಿದ್ದಾರೆ. ಜತೆಗೆ ದಕ್ಷಿಣ ಕಾಶ್ಮೀರದ ಡಿಐಜಿ ಅಮಿತ್ ಕುಮಾರ್, ಬ್ರಿಗೇಡಿಯರ್ ಸೇರಿ ಏಳು ಮಂದಿ ಭದ್ರತಾ ಸಿಬಂದಿ ಗಾಯಗೊಂಡಿದ್ದಾರೆ.
ಸೋಮವಾರ ಮುಂಜಾವ ಪುಲ್ವಾಮಾದ ಪಿಂಗ್ಲಾನ್‌ನಲ್ಲಿ ಜೈಶ್-ಎ-ಮೊಹಮ್ಮದ್ ಸಂಘ ಟನೆಯ ಮೂವರು ಉಗ್ರರು ಅಡಗಿರುವ ಬಗ್ಗೆ ಸುಳಿವು ರಾಷ್ಟ್ರೀಯ ರೈಫಲ್, ಸಿಆರ್‌ಪಿಎಫ್, ಜಮ್ಮು-ಕಾಶ್ಮೀರ ಪೊಲೀಸರ ಕಾರ್ಯಾಚರಣೆಯ ತಂಡಕ್ಕೆ ಸಿಕ್ಕಿತು. ಅದನ್ನು ಆಧರಿಸಿ ಶೋಧ ಕಾರ್ಯ ಶುರು ಮಾಡಿದ ವೇಳೆ ಉಗ್ರರು ಗುಂಡು ಹಾರಿಸಿದರು. ಬಿರುಸಿನ ಕಾಳಗದಲ್ಲಿ ದಾಳಿಯ ರೂವಾರಿ ಕಮ್ರಾನ್‌ನನ್ನು ಕೊಲ್ಲಲಾಯಿತು. ಈತ ಜೈಶ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಅತ್ಯಂತ ನಿಷ್ಠಾವಂತ ನಿಕಟವರ್ತಿ ಎಂದು ಹೇಳ ಲಾಗಿದೆ. ಜತೆಗೆ ಆತ ಪಾಕಿಸ್ಥಾನದ ಪ್ರಜೆ ಯಾಗಿ ದ್ದಾನೆ. ಈತ ಐಇಡಿ ಸಿದ್ಧಪಡಿಸುವಲ್ಲಿ ನಿಷ್ಣಾತ. ಉಗ್ರ ಆದಿಲ್ ದರ್‌ಗೆ ತರಬೇತಿ ನೀಡಿದ್ದ. ಮತ್ತೋರ್ವ ಉಗ್ರ ಹಿಲಾಲ್ ಅಹ್ಮದ್ ಸ್ಥಳೀಯನಾಗಿದ್ದು, ಬಾಂಬ್ ತಯಾರಿಕೆ ಯಲ್ಲಿ ಸಿದ್ಧಹಸ್ತ. ಜತೆಗೆ ಯುವಕರನ್ನು ಉಗ್ರಗಾಮಿ ಸಂಘಟನೆಗೆ ಸೇರಿಸುತ್ತಿದ್ದ. ಸಂಜೆ 3ನೇ ಉಗ್ರನನ್ನು ಹತ್ಯೆಗೈಯಲಾಗಿದೆ.
ಹೊಂಚು ಹಾಕಿ ದಾಳಿ
ಸೋಮವಾರ ಮುಂಜಾನೆ ಶೋಧ ಕಾರ್ಯ ಆರಂಭಗೊಂಡ ಗೊಳ್ಳುತ್ತಿದ್ದಂತೆ ಯಾವುದೇ ಪ್ರತಿ ರೋಧ ಎದುರಾಗಲಿಲ್ಲ. ಬಳಿಕ ಮನೆ ಮನೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಉಗ್ರರು ಯೋಧರ ಮೇಲೆ ಹೊಂಚು ಹಾಕಿ ದಾಳಿ ನಡೆಸಿದರು. ಈ ಸಂದರ್ಭ ಮೇಜರ್ ಹುತಾತ್ಮರಾದರು. ಕಾರ್ಯಾಚರಣೆ ಸಂದರ್ಭ ಒಂದು ಮನೆಯಿಂದ ಇನ್ನೊಂದು ಮನೆಗೆ ಓಡಿ ತಪ್ಪಿಸಿಕೊಳ್ಳುತ್ತಿದ್ದ ಕಮ್ರಾನ್ ಅಲ್ಲಿಂದ ಅಡಗಿ ಕುಳಿತು ದಾಳಿ ನಡೆಸುತ್ತಿದ್ದ. ಇದರಿಂದಾಗಿ ಹೆಚ್ಚಿನ ಹಾನಿಯಾ ಯಿತು. ಕತ್ತಲು ಇದ್ದುದರಿಂದ ಕಾರ್ಯಾ ಚರಣೆಗೆ ತೊಂದರೆಯಾಯಿತು ಎಂದು ಸೇನಾಧಿಕಾರಿಗಳು ತಿಳಿಸಿದರು.
ಮೇಜರ್ ಹುತಾತ್ಮ
ಕಾರ್ಯಾಚರಣೆಯಲ್ಲಿ ಉತ್ತರಾಖಂಡದ ಮೇ| ವಿ.ಎಸ್. ಧೋಂಡಿಯಾಲ್, ಹವಾಲ್ದಾರ್ ಶಿಯೋ ರಾಮ್, ಸಿಪಾಯಿ ಗಳಾದ ಹರಿ ಸಿಂಗ್ ಮತ್ತು ಅಜಯ ಕುಮಾರ್ ಹುತಾತ್ಮ ರಾಗಿದ್ದಾರೆ. ಅವರೆಲ್ಲರೂ 55 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದವರು. ಪೊಲೀಸ್ ಇಲಾಖೆಯ ಹೆಡ್ ಕಾನ್‌ಸ್ಟೆಬಲ್ ಓರ್ವರು ಹುತಾತ್ಮ ರಾಗಿದ್ದಾರೆ. ಗುಂಡಿನ ಚಕಮಕಿ ವೇಳೆ ಗಾಯಗೊಂಡ ನಾಗರಿಕರೋರ್ವರು ಅಸುನೀಗಿದ್ದಾರೆ. ಕಾರ್ಯಾಚರಣೆಯಲ್ಲಿ ದಕ್ಷಿಣ ಕಾಶ್ಮೀರದ ಐಜಿಪಿ ಅಮಿತ್ ಕುಮಾರ್, ಓರ್ವ ಬ್ರಿಗೇಡಿಯರ್, ಲೆಫ್ಟಿನೆಂಟ್ ಕರ್ನಲ್ ಸಹಿತ ಏಳು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಸ್ಥಿರವಾಗಿದೆ. ಡಿಐಜಿಗೆ ಕಿಬ್ಬೊಟ್ಟೆಯ ಭಾಗಕ್ಕೆ ಗುಂಡೇಟು ತಗಲಿದ್ದರೆ, ಬ್ರಿಗೇಡಿಯರ್ ಕಾಲಿಗೆ ಗುಂಡೇಟು ತಗುಲಿದೆ.
ಪಾಕ್ ಕಲಾವಿದರಿಗೆ ನಿಷೇಧ
ಉಗ್ರರ ದಾಳಿ ಖಂಡಿಸಿರುವ ಅಖೀಲ ಭಾರತೀಯ ಚಿತ್ರ ಕಲಾವಿದರ ಸಂಸ್ಥೆ (ಎಐಸಿಡಬ್ಲುಎ), ಪಾಕಿ ಸ್ಥಾನದ ಯಾವುದೇ ಕಲಾವಿದರಿಗೆ ಮತ್ತು ಗಾಯಕರಿಗೆ ಭಾರತದ ಚಿತ್ರರಂಗದಲ್ಲಿ ಅವಕಾಶ ನೀಡದಂತೆ ಬಹಿಷ್ಕಾರ ಹೇರಿದೆ. ಈ ನಿಷೇಧವನ್ನು ಉಲ್ಲಂಸುವ ಚಿತ್ರ ನಿರ್ಮಾಣ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
“ಶಾಂತಿ ಬಸ್’ ಸಂಚಾರ ರದ್ದು
ಪುಲ್ವಾಮಾ ಘಟನೆ ಬಳಿಕ ಸೋಮವಾರ ಭಾರತ ಮತ್ತು ಪಾಕ್ ನಡುವಿನ ಬಸ್ ಸಂಚಾರ ವನ್ನೇ ರದ್ದು ಮಾಡಲಾಗಿದೆ. ಜಮ್ಮು-ಕಾಶ್ಮೀರದ ಪೂಂಛ…ನಿಂದ ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ “ಶಾಂತಿ ಬಸ್’ ಸಂಚಾರವನ್ನು ರದ್ದು ಮಾಡಿರುವುದಾಗಿ ಪೂಂಛ… ಜಿಲ್ಲಾಡಳಿತ ಘೋಷಣೆ ಮಾಡಿದೆ. ಜಮ್ಮು-ಕಾಶ್ಮೀರ ಹಾಗೂ ಪಿಒಕೆ ನಡುವಿನ ಪ್ರಯಾಣ ಮತ್ತು ವ್ಯಾಪಾರಕ್ಕೆ ತಡೆ ಹೇರುವಂತೆ ಕೇಂದ್ರ ಗೃಹ ಸಚಿವಾಲಯದಿಂದ ಸೂಚನೆ ಬಂದಿದ್ದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಲಾಗಿದೆ. ಪೂಂಛ… ಜಿಲ್ಲೆಯ ಚಕನ್-ದಾ-ಬಾಗ್ ಮತ್ತು ಪಿಒಕೆ ನಡುವಿನ ಬಸ್ ಸಂಚಾರವು ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರ ಕನಸಿನ ಕೂಸಾಗಿತ್ತು.
18 ಗಂಟೆ ಕಾರ್ಯಾಚರಣೆ ಅವಧಿ
03 ಜೈಶ್-ಎ- ಮೊಹಮ್ಮದ್ ಉಗ್ರರು ಹತ
04 ಸೇನೆಯ ಹುತಾತ್ಮ ಯೋಧರು
01 ಪೊಲೀಸ್ ಮುಖ್ಯ ಪೇದೆ ಸಾವು
01 ಮೃತ ಪಟ್ಟ ನಾಗರಿಕ
07 ಗಾಯಗೊಂಡ ಪೊಲೀಸ್, ಸೇನೆ ಅಧಿಕಾರಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ
Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.