ಸಂಗಮದಲ್ಲಿ ಮಿಂದೆದ್ದ ಅಪಾರ ಭಕ್ತರು
Team Udayavani, Feb 19, 2019, 7:40 AM IST
ತಿ.ನರಸೀಪುರ: ದಕ್ಷಿಣ ಭಾರತದ ಪ್ರಯಾಗದ ಖ್ಯಾತಿ ಪಡೆದಿರುವ ಕಾವೇರಿ, ಕಪಿಲೆ ಹಾಗೂ ಸ್ಫಟಿಕ ಸರೋವರದ ಪುಣ್ಯಕ್ಷೇತ್ರ ತ್ರಿವೇಣಿ ಸಂಗಮದಲ್ಲಿ ಸೋಮವಾರ ಬೆಳಗ್ಗೆಯಿಂದ ರಾತ್ರಿಯ ತನಕ ಅಪಾರ ಸಂಖ್ಯೆಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು.
ಬೆಳಗ್ಗೆ 5.30ರಿಂದಲೇ ತೀರ್ಥಸ್ಥಾನ ಆರಂಭವಾಗಿತ್ತು. ಅಗಸೆöàಶ್ವರ ಹಾಗೂ ಗುಂಜಾನರಸಿಂಹ ದೇವಸ್ಥಾನದ ಮಾರ್ಗವಾಗಿ ತಿರುಮಕೂಡಲು ತ್ರಿವೇಣಿ ಸಂಗಮಕ್ಕೆ ಆಗಮಿಸಿದ ಭಕ್ತರು, ಪವಿತ್ರ ಸ್ಥಾನ ಮಾಡಿ, ಶ್ರೀ ಗುಂಜಾನರಸಿಂಹ ಸ್ವಾಮಿ, ಅಗಸೆಶ್ವರ ಸ್ವಾಮಿ, ಬಿತ್ತೀಗೇಶ್ವರ, ಬಳ್ಳೇಶ್ವರ ಹಾಗೂ ಮೂಲಸ್ಥಾನೇಶ್ವರ ಸ್ವಾಮಿಯ ದರ್ಶನ ಪಡೆದು ಪಾವಾಸಾಗುತ್ತಿದ್ದರು.
ಕಾವೇರಿ ನದಿಯ ಮಧ್ಯ ಭಾಗದಲ್ಲಿರುವ ಮರಳು ಬಸವನಿಗೆ ಸುತ್ತು ಬಂದು, ಅಲ್ಲಿಯೇ ಪಕ್ಷದಲ್ಲಿ ಇರುವ ಯಾಗ ಮಂಟಪಕ್ಕೆ ಭಕ್ತರು ನಮಿಸುತ್ತಾ, ಅಗಸೆöàಶ್ವರ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನದ ಕಡೆಗೆ ಸಾಗುತ್ತಿದ್ದರು.
ಸುಸಜ್ಜಿತ ಕೊಠಡಿಗಳ ವ್ಯವಸ್ಥೆ: ಸ್ಥಳೀಯ ಶಾಲಾ ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಪವಿತ್ರ ಸ್ಥಾನಕ್ಕೆ ಆಗಮಿಸಿದ್ದರು. ಶಾಲಾ, ಕಾಲೇಜುಗಳಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ, ಪ್ರಾಧ್ಯಾಪಕರು ಗುಂಪುಗುಂಪಾಗಿ ಕುಂಭ ಮೇಳಕ್ಕೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬರುತಿತ್ತು.
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಭಕ್ತರಿಗೆ ಬಟ್ಟೆ ಬದಲಾಯಿಸಿಕೊಳ್ಳಲು ಸುಸಜ್ಜಿತ ಕೊಠಡಿಗಳ ವ್ಯವಸ್ಥೆಯನ್ನು ಮಾಡಲಾಗಿದೆ. ನೀರಿನಲ್ಲೇ ಬಟ್ಟೆ ಬಿಡುವುದು ಅಥವಾ ಉಗುಳುವುದು ಸೇರಿದಂತೆ ಯಾವುದೇ ರೀತಿಯಲ್ಲೂ ಗಲಿಜು ಮಾಡಬಾರದು ಎಂಬ ಸೂಚನೆಯನ್ನು ನಿರಂತರವಾಗಿ ನೀಡಲಾಗುತಿತ್ತು.
ಹಾಗೆಯೇ ಮೂರು ಸ್ನಾನಘಟ್ಟಗಳಲ್ಲೂ ಈಜು ಪ್ರಮುಖರ ನಿಯೋಜನೆ ಮತ್ತು ಸುರಕ್ಷತೆಗಾಗಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶುಚಿತ್ವಕ್ಕೆ ಆದ್ಯತೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ನೀರಿನ ಮಟ್ಟ ಏರಿಕೆ: ಕುಂಭ ಮೇಳ ಆರಂಭವಾದ ಎರಡನೇ ದಿನ ಕಪಿಲೆ ಮತ್ತು ಕಾವೇರಿ ನದಿ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಿದೆ. ಎರಡು ನದಿಯ ಡ್ಯಾಂಗಳಿಂದ ಅಧಿಕ ಪ್ರಮಾಣದ ನೀರು ಹೊರಬಿಡಲಾಗಿದೆ. ಗುಂಜಾನರಸಿಂಹ ದೇವಸ್ಥಾನ ಹಾಗೂ ಅಗಸೆöàಶ್ವರ ದೇವಸ್ಥಾನ ಮಾರ್ಗವಾಗಿ ತ್ರಿವೇಣಿ ಸಂಗಮದ ಪ್ರದೇಶಕ್ಕೆ ಬಂದು ಸ್ನಾನ ಮಾಡಿ,
ಯಾಗ ಮಂಟಪ, ಮರಳು ನಂದಿ ಇರುವ ಸ್ಥಳಕ್ಕೆ ಹೋಗಲು ಅನುಕೂಲ ಆಗುವಂತೆ ಮುಖ್ಯವೇದಿಕೆಯ ಮುಂಭಾಗದಲ್ಲಿ ಮಣ್ಣು ಹಾಕಿ ಏರು ಪ್ರದೇಶವಾಗಿ ಸಮತಟ್ಟು ಮಾಡಲಾಗಿತ್ತು. ಸೋಮವಾರ ಕಪಿಲೆ ಹಾಗೂ ಕಾವೇರಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದರಿಂದ ಮುಖ್ಯವೇದಿಕೆವರೆಗೂ ನೀರು ಬಂದಿದೆ. ಭಕ್ತರಿಗೆ ನಡೆದಾಡಲು ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಮಧ್ಯ ಮಧ್ಯೆ ಮಣ್ಣಿನ ಚೀಲಗಳನ್ನು ಇಡಲಾಗಿದೆ.
ಉತ್ತರ ಪ್ರದೇಶದ ಪ್ರಯಾಗಕ್ಕೆ ಹೋಗಿ ಪುಣ್ಯಸ್ನಾನ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕುಟುಂಬ ಸಮೇತರಾಗಿ ಇಲ್ಲಿಗೆ ಬಂದಿದ್ದೇವೆ. ಪವಿತ್ರಸ್ನಾನ ಮಾಡಿ, ದೇವರ ದರ್ಶನ ಪಡೆದಿದ್ದೇವೆ. ಮನಸ್ಸಿನಲ್ಲಿ ಒಂದು ರೀತಿಯ ಧನ್ಯತಾ ಭಾವ ಮೂಡಿದೆ.
-ಹರಿಕಿರಣ್, ತುಮಕೂರು ನಿವಾಸಿ
ಇದೇ ಮೊದಲ ಬಾರಿಗೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದು, ಕುಂಭ ಮೇಳದ ಬಗ್ಗೆ ಕೇಳಿದ್ದೆ. ಆದರೆ, ನೋಡಿರಲಿಲ್ಲ. ಇಲ್ಲಿಗೆ ಬಂದು ಇಲ್ಲಿನ ವ್ಯವಸ್ಥೆ ನೋಡಿ ತುಂಬಾ ಖುಷಿಯಾಗಿದೆ.
-ರೂಪ ಶ್ರೀನಿವಾಸ್, ಗೃಹಿಣಿ, ರಾಮನಗರ
ಕುಂಭ ಮೇಳದ ವ್ಯವಸ್ಥೆಗೆ ನಮ್ಮನ್ನು ನಿಯೋಜಿಸಿದ್ದಾರೆ. ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದೇ ನಮ್ಮ ಪುಣ್ಯ. ಯಾವುದೇ ರೀತಿಯಲ್ಲೂ ಹಿಂಜರಿಕೆ ಇಲ್ಲದೇ ಇಂತಹ ದೇವರ ಕಾರ್ಯ ಮಾಡಲು ಸಿದ್ಧರಿದ್ದೇವೆ. ಇದರಿಂದ ನಮ್ಮೂರು ಪ್ರವಾಸೋದ್ಯಮದಲ್ಲೂ ಅಭಿವೃದ್ಧಿ ಸಾಧಿಸುವಂತಾಗಲಿ.
-ಚಿತ್ರ, ಪಿಯುಸಿ ವಿದ್ಯಾರ್ಥಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.